ರಾಜ್ಯಾದ್ಯಂತ ರೈಲು ಹಳಿಗಳಿಗೆ ಬೇಲಿ ಅಳವಡಿಕೆ: 793 ಕಿ.ಮೀ. ತಡೆಬೇಲಿ

Published : Mar 01, 2025, 11:07 AM ISTUpdated : Mar 01, 2025, 12:09 PM IST
ರಾಜ್ಯಾದ್ಯಂತ ರೈಲು ಹಳಿಗಳಿಗೆ ಬೇಲಿ ಅಳವಡಿಕೆ: 793 ಕಿ.ಮೀ. ತಡೆಬೇಲಿ

ಸಾರಾಂಶ

ವಂದೇ ಭಾರತ್‌ನಂಥ ವೇಗದ ರೈಲು ಸಂಚರಿಸುವ ಮಾರ್ಗದಲ್ಲಿ ಸುರಕ್ಷತೆಗಾಗಿ ನೈಋತ್ಯ ರೈಲ್ವೆಯು ಇದೀಗ ರಾಜ್ಯದಲ್ಲಿ 793 ಕಿ.ಮೀ. ಉದ್ದದ ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆಬೇಲಿ (ಫೆನ್ಸಿಂಗ್) ನಿರ್ಮಿಸುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಕಾಮಗಾರಿ ಆರಂಭಗೊಂಡಿದೆ. 

ಮಯೂರ್ ಹೆಗಡೆ

ಬೆಂಗಳೂರು (ಮಾ.01): ವಂದೇ ಭಾರತ್‌ನಂಥ ವೇಗದ ರೈಲು ಸಂಚರಿಸುವ ಮಾರ್ಗದಲ್ಲಿ ಸುರಕ್ಷತೆಗಾಗಿ ನೈಋತ್ಯ ರೈಲ್ವೆಯು ಇದೀಗ ರಾಜ್ಯದಲ್ಲಿ 793 ಕಿ.ಮೀ. ಉದ್ದದ ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆ ಬೇಲಿ (ಫೆನ್ಸಿಂಗ್) ನಿರ್ಮಿಸುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಕಾಮಗಾರಿ ಆರಂಭಗೊಂಡಿದೆ. ವೇಗದ ರೈಲುಗಳ ಸಂಚಾರ ವೇಳೆ ಹಳಿಗೆ ಸಿಲುಕಿ ಜಾನುವಾರುಗಳ ಸಾವು, ಆಕಸ್ಮಿಕ ಅಪಘಾತ, ಆತ್ಮಹತ್ಯೆಯಂಥ ಘಟನೆಗಳು ಹೆಚ್ಚುತ್ತಿರುವ ಪರಿಣಾಮ ತೊಂದರೆಯಾಗುವುದನ್ನು ತಪ್ಪಿಸಲು ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ.

ಬೇಲಿಗೆ 420 ಕೋಟಿ ರು.: ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗ ಸೇರಿ ರಾಜ್ಯ ದಲ್ಲಿ ಒಟ್ಟಾರೆ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 793.52 ಕಿ.ಮೀ. ಉದ್ದದ ಮಾರ್ಗದಲ್ಲಿ ತಡೆ ಬೇಲಿ ಹಾಕಲಾಗುತ್ತಿದೆ. ಅಗತ್ಯವಿರುವಲ್ಲಿ ಜನರ ಓಡಾಟಕ್ಕೆ ಸಬ್ ವೇ, ಅಂಡರ್‌ಾಸ್ ನಿರ್ಮಿಸಲಾ ಗುತ್ತಿದೆ. ಬೇಲಿಗೆ ಕ420 ಕೋಟಿ, ಸಬ್ ವೇ ನಿರ್ಮಾಣಕ್ಕೆ 2304 ಕೋಟಿ ಒಟ್ಟಾರೆ ಕೆ724 ಕೋಟಿ ಮಂಜೂ ರಾಗಿದೆ. ಟೆಂಡರ್ ಕರೆಯಲಾಗಿದ್ದು, ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು, ಬೆಂಗಳೂರು ವಿಭಾಗ ದಲ್ಲಿ 3 ಕಿ.ಮೀ. ಕಾಮಗಾರಿ ಮುಗಿದಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಬೇಸಿಗೆಗೆ ಲೋಡ್ ಶೆಡ್ಡಿಂಗ್ ಇಲ್ಲ: ಸಚಿವ ಕೆ.ಜೆ.ಜಾರ್ಜ್

ಫೆನ್ಸಿಂಗ್ ಮಾರ್ಗಗಳು: ಬೆಂಗಳೂರು- ಧರ್ಮಾ ವರಂ (174 ಕಿ.ಮೀ.), ಬೆಂಗಳೂರು- ಜೋಲಾರ ಪೇಟೆ (145 ಕಿ.ಮೀ.) ಹಾಗೂಬೆಂಗಳೂರು-ಸಂಪಿಗೆ ರೋಡ್ (109 ಕಿ.ಮೀ.), ಬೆಂಗಳೂರು-ಮೈಸೂರು (139 ಕಿ.ಮೀ.) ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಜೋಲಾರಪೇಟೆ ಮಾರ್ಗದಲ್ಲಿ 3 ಕಿ.ಮೀ. ನಷ್ಟು ಬೇಲಿ ನಿರ್ಮಿಸಲಾಗಿದೆ. ಹುಬ್ಬಳ್ಳಿ ವಿಭಾಗದ ಸೌತ್ ಹುಬ್ಬಳ್ಳಿ-ಕರ್ಜಗಿ, ಸೌತ್ ಹುಬ್ಬಳ್ಳಿ-ಧಾರವಾಡ ಮೊದಲ ಹಂತದಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಮೈಸೂರು ವಿಭಾಗದಲ್ಲಿ ಮೈಸೂರು-ಯಲಿಯೂರುಮತ್ತು ಸಂಪಿಗೆ ರೋಡ್, ಕರ್ಜಗಿಕೈಗೆತ್ತಿಕೊಳ್ಳಲಾಗಿದ್ದು ಇದರಿಂದ ಧಾರವಾಡ- ಬೆಂಗಳೂರು ಮಾರ್ಗ ಪೂರ್ಣಗೊಂಡಂತಾಗುತ್ತದೆ. 

ಡಬ್ಲ್ಯು ಮಾದರಿ: ಈ ಬೇಲಿ 5 ಅಡಿ ಎತ್ತರ ಇರಲಿದ್ದು, ಆಂಗ್ಲ ಅಕ್ಷರಮಾಲೆಯ 'ಡಬ್ಲ್ಯು' ಆಕಾರದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ವಂದೇ ಭಾರತ್ ರೈಲು ಗಂಟೆಗೆ 110-130 ಕಿ.ಮೀ.ವೇಗದಲ್ಲಿ ಸಂಚರಿಸುವ ಮಾರ್ಗಗಳು ಕಡಿಮೆ ಇದೆ. ಬೇಲಿ ನಿರ್ಮಾಣವಾದರೆ ವೇಗ ಹೆಚ್ಚಿಸಿಕೊಳ್ಳುವುದು ಸಾಧ್ಯ ವಾಗಲಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ರೈಲುಗಳು ಸಂಚರಿಸಿದರೂ ಬೇಲಿಯ ರಕ್ಷಣೆಯಿಂ ದಾಗಿ ಸಮಸ್ಯೆ ಆಗಲಾರದು ಎಂದು ತಿಳಿಸಿದರು. 'ಕನ್ನಡಪ್ರಭ' ಜೊತೆ ಮಾತನಾಡಿದ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ, 'ಫೆನ್ಸಿಂಗ್ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 7724 ಕೋಟಿ ಮೀಸಲಾಗಿದೆ. ಜಾನುವಾರು ಡಿಕ್ಕಿಯಾಗಿ ರೈಲಿನ ಗಾಲಿಗೆ ಸಿಲುಕಿದರೆ ಸಂಚಾರ ಕನಿಷ್ಠ ಅರ್ಧ ಗಂಟೆ ವಿಳಂಬವಾಗುವಂಥ ಸಂದರ್ಭಗಳನ್ನು ಇದರಿಂದ ತಡೆಯಬಹುದು. ಇದರಲ್ಲಿ 2024-25ಕ್ಕೆ 30 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ ಟೆಂಡರ್‌ ಕರೆದು, ಕಾಮಗಾರಿ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭದ ಉಗಮ ಶ್ರೀನಿವಾಸ್ ಸೇರಿ 25 ಮಂದಿಗೆ ಕೆಯುಡಬ್ಲ್ಯುಜೆ ಪ್ರಶಸ್ತಿ

ವಂದೇ ಭಾರತ್ ಸಂಚಾರ ಶುರುವಾದ ಮೊದಲ ವಾರದಲ್ಲೇ ಹಸು ಡಿಕ್ಕಿ: 2022ರಲ್ಲಿ ದಕ್ಷಿಣ ಭಾರತದ ಮೊದಲ ಚೆನ್ನೈ-ಮೈಸೂರು ವಂದೇ ಭಾರತ್ ರೈಲು ಆರಂಭವಾದ ಒಂದೇ ವಾರದಲ್ಲಿ ತಮಿಳುನಾಡಿದ ಆರಕ್ಕೋಣಂ ಬಳಿ ಹಸುವೊಂದು ಅಡ್ಡಬಂದಿತ್ತು. ಘಟನೆಯಲ್ಲಿ ಹಸು ಮೃತಪಟ್ಟಿದ್ದರೆ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇನ್ನು ಬೆಂಗಳೂರಿಂದ ಧಾರವಾಡಕ್ಕೆ ಹೊರಟಿದ್ದವಂದೇ ಭಾರತ್ ಅಡ್ಡಬಂದ ಪರಿಣಾಮ ಚಿತ್ರದುರ್ಗದ ರಾಮಗಿರಿ ಸಮೀಪ ಎರಡು ಎಮ್ಮೆ ಸತ್ತಿದ್ದವು. ಇಂಥ ಸಾಕಷ್ಟು ಪ್ರಕರಣಗಳು ನಡೆದಿದ್ದು, ಹೀಗಾಗಿ ವಂದೇ ಭಾರತ್ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳಿಗೆ ಆಗುತ್ತಿರುವ ಸಮಸ್ಯೆ ಮತ್ತು ಅಪಾಯ ತಡೆಗೆ ರೈಲ್ವೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!