ಹಿಂದುಸ್ತಾನ್ ವಿಮಾನ ಕಾರ್ಖಾನೆಯಲ್ಲಿ (ಎಚ್‌ಎಎಲ್) ಇತ್ತೀಚೆಗೆ ನಡೆದ ನೇಮಕಾತಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ ಹೊರ ರಾಜ್ಯದ ದ ಶೇ.90ರಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕನ್ನಡದ ಪ್ರಮುಖ ಸಾಹಿತಿಗಳು ಹಾಗೂ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.04): ಹಿಂದುಸ್ತಾನ್ ವಿಮಾನ ಕಾರ್ಖಾನೆಯಲ್ಲಿ (ಎಚ್‌ಎಎಲ್) ಇತ್ತೀಚೆಗೆ ನಡೆದ ನೇಮಕಾತಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಿ ಹೊರ ರಾಜ್ಯದ ದ ಶೇ.90ರಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಕನ್ನಡದ ಪ್ರಮುಖ ಸಾಹಿತಿಗಳು ಹಾಗೂ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್‌ಎಎಲ್‌ನಲ್ಲಿ ಇತ್ತೀಚೆಗೆ ನಿಶ್ಚಿತ ಅವ ಧಿಯಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದ್ದು, ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಇದರಿಂದ ಸ್ಥಳೀಯ ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ರಾಜ್ಯಸಭಾ ಮಾಜಿ ಸದಸ್ಯ ಡಾ| ಎಲ್.ಹನುಮಂತಯ್ಯ, ಪದ್ಮಶ್ರೀ ಡಾ| ದೊಡ್ಡರಂಗೇಗೌಡ, ಟಿ.ಎಸ್.ನಾಗಾಭರಣ, ಡಾ| ಮುಖ್ಯಮಂತ್ರಿ ಚಂದ್ರು, ವ.ಚ. ಚನ್ನೇಗೌಡ ಸೇರಿದಂತೆ ಮತ್ತಿತರರು ಕಾರ್ಖಾ ನೆಯ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆಯಲ್ಲಿ ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕವೇ ಅಭ್ಯರ್ಥಿಗಳ ಪಟ್ಟಿ ತರಿಸಿಕೊಳ್ಳಬೇಕೆಂದು ಸೂಚನೆ ನೀಡಿದೆ.
25 ವರ್ಷಗಳ ಹಿಂದೆ ತೆಗೆದ ಫೋಟೋವನ್ನು ಹಂಚಿಕೊಂಡ ನಟಿ ತ್ರಿಷಾ: ಅಷ್ಟಕ್ಕೂ ಅದರಲ್ಲಿ ಅಂಥದ್ದೇನಿದೆ?
ಈ ಬಗ್ಗೆ ಈ ಹಿಂದೆ ಎಚ್‌ಎಎಲ್ ಪ್ರಧಾನ ಕಚೇರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಪತ್ರದಲ್ಲಿ ಮಾಹಿತಿ ನೀಡಿದೆ. ಆದರೆ, ಮಾನ ದಂಡಗಳನ್ನು ಉಲ್ಲಂಘಿಸಿ ಎಚ್‌ಎಎಲ್, ತರ ಬೇತಿ ಸಂಸ್ಥೆ ಮತ್ತು ಸ್ಥಳೀಯ ಉದ್ಯೋಗ ವಿನಿ ಮಯ ಕೇಂದ್ರಗಳಿಂದ ಪಟ್ಟಿ ತರಿಸಿಕೊಳ್ಳದೇ ನೇರವಾಗಿ ಅಂತಾರ್ಜಾಲದ ಮೂಲಕ ಎಲ್ ಸಿಎ ತೇಜಸ್ ವಿಭಾಗದಲ್ಲಿ 166 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಆರೋಪಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಿಖಿತ ಪರೀಕ್ಷೆ ನಡೆಸಿ 150ಕ್ಕೂ ಹೆಚ್ಚು ಉತ್ತರ ಭಾರತೀಯರನ್ನು ಆಯ್ಕೆ ಮಾಡಲಾಗಿದೆ.
ಎಂಆರ್‌ಒ-ಎಚ್ ವಿಭಾಗದಲ್ಲಿ 145 ಹುದ್ದೆಗಳಿಗೆ ದಕ್ಷಿಣ ಭಾರತದ ಉದ್ಯೋಗ ವಿನಿಮಯ ಕೇಂದ್ರಗಳಿಂದ ಪಟ್ಟಿ ತರಿಸಿ ಕೊಂಡು ಆಯ್ಕೆ ಪ್ರಕ್ರಿಯೆ ನಡೆದಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಕೇರಳ, ತಮಿಳುನಾಡಿನರಾಗಿದ್ದಾರೆ ಎಂಬುದು ತಿಳಿದುಬಂದಿದೆ. ಫಿಟ್ಟರ್, ಮೆಷಿನಿಸ್ಟ್ ಎಲೆಕ್ಟಿಷಿಯನ್ ಗಳಂತಹ ಮೆಕ್ಯಾನಿಕ್ ಹುದ್ದೆಗಳಿಗೂ ಸ್ಥಳೀಯರನ್ನು ಕಡೆಗಣಿಸಿರುವ ಈ ಆಯ್ಕೆ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಹೊಸದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳ ಉದ್ಯೋಗ ವಿನಿಮಯ ಕೇಂದ್ರ.
ಕನ್ನಡದಲ್ಲೂ ರೈಲ್ವೆ ಮುಂಬಡ್ತಿ ಪರೀಕ್ಷೆಗೆ ಅಸ್ತು: ರೈಲ್ವೆ ಸಚಿವ ಸೋಮಣ್ಣ ಮಹತ್ವದ ಘೋಷಣೆ
ಅಥವಾ ಎಚ್‌ಎಎಲ್ ತಾಂತ್ರಿಕ ತರಬೇತಿ ಇಲಾಖೆಯ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕನ್ನಡಪರ ಹೋರಾಟಗಾರರಾದ ರಾ.ನಂ.ಚಂದ್ರಶೇಖರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ| ಮನುಬಳಿಗಾರ್, ಪ್ರೊ.ಎಚ್.ಟಿ.ಪೋತೆ, ಡಾ.ಆರ್.ಶೇಷಶಾಸ್ತ್ರಿ ಅವರು ಆಗ್ರಹಿಸಿದ್ದಾರೆ. ಹಿಂದಿಯ ಬದಲು ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ನಡೆಸಬೇಕು. ಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿ ವರು ಮತ್ತು ಸಂಸದರು ಮಧ್ಯಪ್ರವೇಶಿಸಿ ಕನ್ನ ಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸ ಬೇಕು ಎಂದು ಒತ್ತಾಯಿಸಿದ್ದಾರೆ.