ಮೈಸೂರು ಮತ್ತು ಹುಬ್ಬಳ್ಳಿ ಜನತೆಗೆ ಗುಡ್ ನ್ಯೂಸ್: ಇಂಡಿಗೋದಿಂದ ನಿರಂತರ ವಿಮಾನ ಸೌಲಭ್ಯ

Kannadaprabha News   | Kannada Prabha
Published : Jan 03, 2026, 04:31 AM IST
 indigo flights

ಸಾರಾಂಶ

ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೈಸೂರು ಮತ್ತು ಹುಬ್ಬಳ್ಳಿಯಿಂದ ತನ್ನ ವಿಮಾನ ಸೇವೆಯನ್ನು ಯಶಸ್ವಿಯಾಗಿ ಮುಂದುವರಿಸುವ ಮೂಲಕ ಈ ಪ್ರದೇಶಗಳ ಜನರಿಗೆ ಉತ್ತಮ ವಿಮಾನಯಾನ ಸೌಲಭ್ಯ ಕಲ್ಪಿಸುತ್ತಿದೆ.

ಬೆಂಗಳೂರು : ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಮೈಸೂರು ಮತ್ತು ಹುಬ್ಬಳ್ಳಿಯಿಂದ ತನ್ನ ವಿಮಾನ ಸೇವೆಯನ್ನು ಯಶಸ್ವಿಯಾಗಿ ಮುಂದುವರಿಸುವ ಮೂಲಕ ಈ ಪ್ರದೇಶಗಳ ಜನರಿಗೆ ಉತ್ತಮ ವಿಮಾನಯಾನ ಸೌಲಭ್ಯ ಕಲ್ಪಿಸುತ್ತಿದೆ.

ವಾರಕ್ಕೆ ಒಟ್ಟು 39 ವಿಮಾನಗಳನ್ನು ಕಾರ್ಯಾಚರಣೆ

ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಇಂಡಿಗೋ ವಾರಕ್ಕೆ ಒಟ್ಟು 39 ವಿಮಾನಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಈ ಮೂಲಕ ಹುಬ್ಬಳ್ಳಿಯನ್ನು ದೇಶದ ಐದು ಪ್ರಮುಖ ಮಹಾ ನಗರಗಳಿಗೆ ನೇರವಾಗಿ ಸಂಪರ್ಕಿಸುತ್ತಿದೆ. 2018ರಲ್ಲಿ ಕಾರ್ಯಾಚರಣೆ ಆರಂಭಿಸಿದ ಸಂಸ್ಥೆಯು, ಇಂದು ರಾಷ್ಟ್ರೀಯ ಮಾರುಕಟ್ಟೆಗೆ ಉತ್ತರ ಕರ್ನಾಟಕದ ಕೊಂಡಿಯಾಗಿ ಬೆಳೆದು ನಿಂತಿದೆ.

ಮೈಸೂರಿನಿಂದಲೂ ವಿಮಾನಯಾನ ಚಟುವಟಿಕೆಗಳು

ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಿಂದಲೂ ವಿಮಾನಯಾನ ಚಟುವಟಿಕೆಗಳು ಗರಿಗೆದರಿವೆ. ಮೈಸೂರಿನಿಂದ ಹೈದರಾಬಾದ್ ಮತ್ತು ಚೆನ್ನೈ ನಗರಗಳಿಗೆ ವಾರಕ್ಕೆ 14 ವಿಮಾನಗಳು ಸಂಚರಿಸುತ್ತಿವೆ. 2019ರಲ್ಲಿ 7 ವಿಮಾನಗಳಿಂದ ಆರಂಭವಾದ ಈ ಸೇವೆ, ಇಂದು ದುಪ್ಪಟ್ಟಾಗಿದೆ. ಇದರಿಂದಾಗಿ ಪ್ರವಾಸೋದ್ಯಮ ಮಾತ್ರವಲ್ಲದೆ ವೈದ್ಯಕೀಯ, ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯೆಂದು ಮಸೀದಿ ಕಟ್ಟಿದ್ರಾ ಸಾರವಾಡ್ ಬ್ರದರ್ಸ್? ಹುಬ್ಬಳ್ಳಿಯಲ್ಲಿ ಹಿಂದೂಗಳ ಬೃಹತ್ ಪ್ರತಿಭಟನೆ, ಸ್ಫೋಟಕ ತಿರುವು!
ವಿದ್ಯಾರ್ಥಿ ರಾಜಕಾರಣಕ್ಕೆ ಗ್ರೀನ್ ಸಿಗ್ನಲ್? ಪಠ್ಯದ ಜೊತೆ ರಾಜಕೀಯ ಪಾಠ? ಉನ್ನತ ಶಿಕ್ಷಣ ಸಚಿವರ ಸ್ಫೋಟಕ ಸುಳಿವು, ಹೇಳಿದ್ದೇನು?