2025-26ಕ್ಕೆ ಮೂರನೇ ಮಹಾಯುದ್ಧ ಶಿವನಾಣೆ ಸತ್ಯ; ಭಾರತ ಇಬ್ಭಾಗವಾಗಲಿದೆ: ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!

Published : Oct 25, 2024, 03:20 PM ISTUpdated : Oct 25, 2024, 03:43 PM IST
2025-26ಕ್ಕೆ ಮೂರನೇ ಮಹಾಯುದ್ಧ ಶಿವನಾಣೆ ಸತ್ಯ; ಭಾರತ ಇಬ್ಭಾಗವಾಗಲಿದೆ: ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!

ಸಾರಾಂಶ

2025-2026 ಕ್ಕೆ ಮೂರನೇ ಮಹಾಯುದ್ಧ ನಡೆಯೋದು ಶತಸಿದ್ಧ. ಈ ಮಹಾಯುದ್ಧದಲ್ಲಿ 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ಮಾಡಲಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹಾಸನ (ಅ.25): 2025-2026 ಕ್ಕೆ ಮೂರನೇ ಮಹಾಯುದ್ಧ ನಡೆಯೋದು ಶತಸಿದ್ಧ. ಈ ಮಹಾಯುದ್ಧದಲ್ಲಿ 13 ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ಮಾಡಲಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಇಂದು ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಪ್ರಧಾನಮಂತ್ರಿಗಳು ಎರಡು ವರ್ಷ ಅವಧಿಯಲ್ಲಿ ಕೇವಲ ಒಂದೂವರೆ ವರ್ಷ ಮಾತ್ರ ಪ್ರಧಾನಿಯಾಗಿ ಉಳಿಯುತ್ತಾರೆ. ಬಳಿಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆಶ್ರಮ ಸೇರಲಿದ್ದಾರೆ. ಈ ರಾಜಕೀಯ ಹೊಲಸು ಸರಿಮಾಡಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಏನೂ ಬದಲಾವಣೆ ಆಗದೆ ಬೇಜಾರಾಗಿ ರಾಜೀನಾಮೆ ನೀಡಬಹುದು ಅಥವಾ ಬೇರೆಯೇ ಆಯ್ಕೆ ಮಾಡಿಕೊಳ್ಳಬಹುದು. ಮುಂದೆ ಒಬ್ಬ ಸನ್ಯಾಸಿ ಜಗತ್ತನ್ನು ಆಳಲಿದ್ದಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ಆರೆ..

'ಆಕಾಶನ ಚಿಗುರೀತಲೇ ಬೇರೆಲ್ಲಾ ಮುತ್ತಾಯಿತಲೇ ಪರಾಕ್' ಐತಿಹಾಸಿಕ ದೇವರಗುಡ್ಡ ಗೊರವಯ್ಯ ಕಾರ್ಣಿಕ ನುಡಿ ಯಾವುದರ ಮುನ್ಸೂಚನೆ?

ಭಾರತ ಮತ್ತೆ ಇಬ್ಭಾಗ:

ಇನ್ನೊಂದು ಆಘಾತಕಾರಿ ವಿಚಾರವೆಂದರೆ ಭಾರತ ದೇಶ ಮತ್ತೆ ಎರಡು ಭಾಗ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಬಾಂಗ್ಲಾದೇಶ-ಚೈನಾ ಕುತಂತ್ರ ಮಾಡಿ ಭಾರತ ದೇಶದ ಮೇಲೆ ದಾಳಿ ಮಾಡಲಿವೆ. ನಮಗೆ ಅಮೆರಿಕದಿಂದಾಗಲಿ ಬೇರೆ ಯಾವ ದೇಶದಿಂದ ಸಹಾಯ ಸಿಗುವುದಿಲ್ಲ. ರಷ್ಯಾವೊಂದೇ ಸಹಾಯ ಮಾಡಲಿದೆ ಎಂದಿದ್ದಾರೆ. ಇದೇ ವೇಳೆ ಕರ್ನಾಟಕದ ಬಗ್ಗೆಯೂ ಭವಿಷ್ಯ ನುಡಿದಿದ್ದ, ಕರ್ನಾಟಕ ಮೂರು ಭಾಗ ಆಗೋದು ಶತಸಿದ್ಧ, ಶಿವನ ಮೇಲೆ ಆಣೆ ಮಾಡುತ್ತೇ ಸತ್ಯವಾಗಲಿದೆ. ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಮೂರು ಭಾಗ ಆಗಲಿದೆ. ಮೂವರು ಮುಖ್ಯಮಂತ್ರಿಗಳಾಗಲಿದ್ದಾರೆ. ಇದು 2025 ರಿಂದ 2032ರವರೆಗೆ ನಡೆಯಲಿದೆ ಎಂದಿದ್ದಾರೆ.

ಏಕಕಾಲ ಮೂರು ಗ್ರಹಣ ಸಂಭವಿಸಲಿವೆ:

ಮೂರನೇ ಮಹಾಯುದ್ಧ ನಡೆಯುವುದು ಶತಸಿದ್ಧ ಎಂದು ಹೇಳಿದ ಬೆನ್ನಲ್ಲೇ ಇಂತಹ ಕೆಟ್ಟ ಘಟನೆಗೆ ಸಾಕ್ಷಿ ಎಂಬಂತೆ 2025ರಲ್ಲಿ ಮೂರು ಗ್ರಹಣಗಳು ಒಂದೇ ವರ್ಷ ಸಂಭವಿಸಲಿವೆ ಎಂದಿದ್ದಾರೆ. ಮೂರು ಗ್ರಹಣಗಳು ಒಂದೇ ವರ್ಷದಲ್ಲಿ ಬರುವುದು ಶುಭ ಸೂಚಕವಲ್ಲ. ಆದರೆ ಮೂರು ಗ್ರಹಣಗಳು ಏಕಕಾಲಕ್ಕೆ ಬರಲಿವೆ ಎಂಬುದು ಆತಂಕ ಮೂಡಿಸಿದೆ. ಪೂರಿ ಜಗನ್ನಾಥ ಕ್ಷೇತ್ರ ಸಂಪೂರ್ಣ ಮುಳುಗಲಿದೆ ಅರವತ್ತು-ಎಪ್ಪತ್ತು ಅಡಿ ನೀರು ಬರುತ್ತೆ. ಇನ್ನೊಂದೆಡೆ ನೀರಿನ ಅಭಾವ ಉಂಟಾಗಿ, ರೋಗ ರುಜಿನಗಳು ಹೆಚ್ಚಾಗುತ್ತೆ ಜನರು ಸಾಯಲಿದ್ದಾರೆ ಎಂದಿರುವ ಗುರೂಜಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!