ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ಕೊಟ್ಟರೆ, ಬೇಷರತ್ ಬಿಜೆಪಿ ಸೇರ್ಪಡೆ: ಅರುಣ್ ಪುತ್ತಿಲ

By Sathish Kumar KHFirst Published Feb 5, 2024, 8:27 PM IST
Highlights

ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನವನ್ನು ಕೊಟ್ಟರೆ, ಬೇಷರತ್ ಬಿಜೆಪಿಗೆ ಸೇರುವುದಾಗಿ ಅರುಣ್ ಪುತ್ತಿಲ ಪರಿವಾರದಿಂದ ತೀರ್ಮಾನಿಸಲಾಗಿದೆ.

ದಕ್ಷಿಣ ಕನ್ನಡ (ಫೆ.05): ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ ಸಿಕ್ಕಿಲ್ಲ. ಆದ್ದರಿಂದ ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಬಿಜೆಪಿ ಮಂಡಲದ ಅಧ್ಯಕ್ಷ ಸ್ಥಾನ ನಿಡಿದರೂ ಬಿಜೆಪಿಗೆ ಸೇರ್ಪಡೆ ಆಗುವುದಾಗಿ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ ಹಾಗೂ ಪುತ್ತಿಲ ಪರಿವಾರದಿಂದ ತೀರ್ಮಾನಿಸಲಾಗಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಪುತ್ತಿಲ ಪರಿವಾರ ಮುಖಂಡ ಅರುಣ್ ಪುತ್ತಿಲ ಅವರು, ವಿಧಾನಸಭಾ ಚುನಾವಣೆ ನಂತರ ಪುತ್ತಿಲ ಪರಿವಾರ ಸಕ್ರಿಯವಾಗಿದೆ. ಜಿಲ್ಲಾಧ್ಯಕ್ಷ ಸ್ಥಾನ ಸಿಗಬೇಕು ಎಂಬ ಒತ್ತಾಯ ಪುತ್ತಿಲ ಪರಿವಾರದಲ್ಲಿ ಇತ್ತು. ಆದರೆ, ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಬಳಿಕ ಪುತ್ತೂರು ಮಂಡಲದ ಸ್ಥಾನದ ಮಾತುಕತೆ ಆಗಿದೆ. ಆದಷ್ಟು ಬೇಗ ತೀರ್ಮಾನವನ್ನು ಪ್ರಕಟಿಸಲು ಬಿಜೆಪಿಗೆ ಒತ್ತಾಯ ಮಾಡಲಾಗಿದೆ. ಕಾರ್ಯಕರ್ತರ ಯೋಚನೆ ಮತ್ತು ಭಾವನೆಯ ಈ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಬಿಜೆಪಿ ಸೇರ್ತಾರೆಂಬ ವದಂತಿ ಬೆನ್ನಲ್ಲೇ ಕೇಂದ್ರದ ವಿರುದ್ಧ ತೊಡೆ ತಟ್ಟಿದ ಲಕ್ಷ್ಮಣ ಸವದಿ

ಪುತ್ತೂರು ಮಂಡಲದ ಅಧ್ಯಕ್ಷ ಸ್ಥಾನ ಕೊಟ್ಟರೆ ಬೇಷರತ್‌ ಬಿಜೆಪಿ ಪಕ್ಷ ಸೇರಬೇಕು ಅಂತ ಮಾಜಿ ಶಾಸಕರೊಬ್ಬರು ಹೇಳಿದ್ದರು. ಮಾತೃ ಪಕ್ಷಕ್ಕೆ ಸೇರಬೇಕು ಎನ್ನುವುದು ಹಿರಿಯರ ಅಪೇಕ್ಷೆಯಾಗಿತ್ತು. ಪುತ್ತೂರಿನ ಘಟನೆ ಪಕ್ಷಕ್ಕೆ ಮುಜುಗರ ತಂದಿದೆ ಅಂತ ಹಿರಿಯರು ಹೇಳಿದ್ದರು. ಆದರೆ, ಪುತ್ತೂರಿನಲ್ಲಿ ಸ್ವಾರ್ಥ ಮತ್ತು ಸ್ವಜನಪಕ್ಷಪಾತದ ದೃಷ್ಟಿಯಿಂದ ಕೆಲವರು ವಿರೋಧ ಮಾಡಿದ್ದಾರೆ. ಹೀಗಾಗಿ ಇವತ್ತು ಕಾರ್ಯಕರ್ತರ ಅಪೇಕ್ಷೆ ಪೂರೈಸಲು ಪಕ್ಷ ನಿರ್ಧಾರ ತೆಗೆದುಕೊಳ್ಳಲಿ. ನಾನು ಯಾವುದೇ ಸಂಘದ ಮತ್ತು ಪಕ್ಷದ ಹಿರಿಯರ ಬಗ್ಗೆ ಅಗೌರವ ತೋರಿಸಿಲ್ಲ. ಇದು ಅಪಪ್ರಚಾರ ಮತ್ತು ಸೇರ್ಪಡೆಗೆ ವಿರೋಧ ಇರೋ ತಂಡದ ಕುತಂತ್ರವಾಗಿದೆ ಎಂದು ಹೇಳಿದರು.

ಬಿಜೆಪಿಯವರೇ ಮಾತುಕತೆಯಲ್ಲಿ ಮಂಡಲದ ಜವಾಬ್ದಾರಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮಾತು ಅವರು ಉಳಿಸಿಕೊಳ್ಳಲಿ, ನಾವು ನಮ್ಮ ಮಾತು ಉಳಿಸಿಕೊಳ್ತೇವೆ. ನಾನು ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿಯವರ ಜೊತೆ ಮಾತುಕತೆ ಮಾಡಿದ್ದೇನೆ. ಅಣ್ಣಾಮಲೈ, ಸಂಸದ ನಳಿನ್ ಕಟೀಲ್ ಜೊತೆಗೂ ಮಾತುಕತೆ ಆಗಿರೋದು ಸತ್ಯ. ನಮಗೆ ಬಿಜೆಪಿ ಜೊತೆ ವಿಲೀನಕ್ಕೆ ಯಾವುದೇ ವಿರೋಧ ಇಲ್ಲ. ನಮ್ಮ ಅಪೇಕ್ಷೆ ಹಾಗೂ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಬಾರದು. ಪಕ್ಷದ ಒಳಗೆ ಬಂದ ನಂತರ ಲೋಕಸಭೆಗೆ ಯಾರನ್ನೂ ಬೇಕಾದರೂ ಆಯ್ಕೆ ಮಾಡಲಿ. ಪಕ್ಷದ ಒಳಗೆ ಬಂದ ನಂತರ ಸೂಚನೆ ಪ್ರಕಾರ ಕೆಲಸ ಮಾಡ್ತೇವೆ ಎಂದರು.

ದ.ಕ.ದಲ್ಲಿ ಮರಳಿ ಕಾಂಗ್ರೆಸ್‌ ಗೆಲ್ಲಿಸಿ: ಕಾರ್ಯಕರ್ತರಿಗೆ ಸಚಿವ ಜಾರ್ಜ್‌ ಕರೆ

ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಮಾಡೋದು ಹೈಕಮಾಂಡ್‌ಗೆ ಬಿಟ್ಟಿದ್ದಾಗಿದೆ. ನಮ್ಮ ಸಂಸದರನ್ನ ಗೆಲ್ಲಿಸಿಕೊಡೋದು ನಮ್ಮ ಜವಾಬ್ದಾರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತಿಲ ಪರಿವಾರ ಈಗಾಗಲೇ ಗಟ್ಟಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲೋದು ನಮಗೆ ಸಮಸ್ಯೆ ಅಲ್ಲ. ಹಿರಿಯರ ಯೋಚನೆ, ಕಲ್ಪನೆಯಡಿ ಜೊತೆಯಾಗಿ ಹೋಗಬೇಕಿದೆ. ನನಗೆ ಅಡ್ಡಿಯಾಗಿರೋರ ಹೆಸರು ಜನಸಾಮಾನ್ಯರಿಗೆ ಗೊತ್ತಿದೆ. ನಾನು ಅವರ ಹೆಸರು ಹೇಳೋ ಅಗತ್ಯ ಇಲ್ಲ ಅನಿಸುತ್ತದೆ ಎಂದು ಹೇಳಿದರು.

click me!