
ಮಡಿಕೇರಿ/ಮಂಗಳೂರು : ‘ಈ ಹಿಂದೆ ನಾನು ಧರ್ಮಸ್ಥಳಕ್ಕೆ ಕಲ್ಲು ಎಸೆಯುತ್ತೇನೆ ಎಂದಿದ್ದೆ. ನಾನು ಹಾಗೆ ಹೇಳಬಾರದಿತ್ತು. ನನಗೀಗ ನನ್ನ ತಪ್ಪಿನ ಅರಿವಾಗಿದೆ. ಇದಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಮುಂದೆ ಕ್ಷಮೆ ಕೇಳ್ತೀನಿ, ಅಣ್ಣಪ್ಪನಿಗೆ ಶರಣಾಗ್ತೀನಿ. ಅವರು ನನ್ನನ್ನು ಕ್ಷಮಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಸುಳ್ಳಿ ಸುಜಾತಾ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ‘ಬಿಗ್‌ಬಾಸ್’ ಗೆ ಹೋಗಬೇಕೆಂಬ ಆಸೆಯಿದೆ. ಕರೆದರೆ ಹೋಗುವೆ’ ಎಂದಿದ್ದಾರೆ.
ಅನನ್ಯಾ ಭಟ್ ಹೆಸರಲ್ಲಿ ದೊಡ್ಡ ಸುಳ್ಳಿನ ಕಥೆ ಕಟ್ಟಿ ರಾಜ್ಯದ ಜನರನ್ನೇ ನಂಬಿಸಿದ ಸುಳ್ಳಿ ಸುಜಾತಾ ಭಟ್, ಇದೀಗ ಪಶ್ಚಾತ್ತಾಪದ ಕೂಪದಲ್ಲಿ ಬೇಯುತ್ತಿದ್ದಾರೆ. ಧರ್ಮಸ್ಥಳದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಬ್ಬರಿಸಿದ ಘಾಟಿ ಮಹಿಳೆ ಸುಜಾತಾ, ಸತ್ಯ ಹೊರಗೆ ಬಂದ ಮೇಲೆ ಸೈಲೆಂಟ್ ಆಗಿದ್ದಾರೆ. ಮಾಡಿದ ತಪ್ಪನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಈ ಮಧ್ಯೆ, ಸುದ್ದಿ ಮಾಧ್ಯಮಗಳ ಜೊತೆ ಮಾತನಾಡಿದ ಸುಜಾತಾ, ''''ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ, ಹೋಗಲೇಬೇಕು. ನಾನು ಏನು ಮಾತನಾಡಿದ್ದೇನೆ, ಅದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ. ಅಲ್ಲಿಗೆ ಹೋಗಿ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪನ ಬಳಿ ಕ್ಷಮೆ ಕೇಳುತ್ತೇನೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಳಿಗೂ ಹೋಗಿ ದೀರ್ಘದಂಡ ನಮಸ್ಕಾರ ಮಾಡಿ ಬರುತ್ತೇನೆ. ಅವರು ನನ್ನನ್ನು ಕ್ಷಮಿಸುತ್ತಾರೆ ಎಂಬ ಭರವಸೆ ಇದೆ. ಸದ್ಯದಲ್ಲೇ ಹೋಗಲಿದ್ದೇನೆ, ಯಾವಾಗೆಂದು ನಿರ್ಧಾರ ಮಾಡಿಲ್ಲ'''' ಎಂದಿದ್ದಾರೆ.
‘ಈ ಹಿಂದೆ ನನ್ನ ಜೀವನ ಚೆನ್ನಾಗಿಯೇ ಇತ್ತು. ಈಗ ಧರ್ಮಸ್ಥಳ ಪ್ರಕರಣಕ್ಕೆ ಬಂದ ಮೇಲೆ ನನ್ನ ಜೀವನ ಅಯೋಮಯ ಆಗಿದೆ. ಮುಂದೆ ಏನು ಮಾಡಬೇಕು. ಎನ್ನುವುದು ಗೊತ್ತಾಗುತ್ತಿಲ್ಲ. ಇದಕ್ಕಾಗಿ ಕೊರಗುತ್ತಿದ್ದೇನೆ’ ಎಂದರು.
ಇದೇ ವೇಳೆ, ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬಿಗ್‌ಬಾಸ್’ಗೆ ಹೋಗಬೇಕು ಎನ್ನುವ ಆಸೆ ಇದೆ. ಕರೆದರೆ ಹೋಗುವೆ ಎಂದರು.
ನಾನು ಧರ್ಮಸ್ಥಳಕ್ಕೆ ಕಲ್ಲು ಎಸೆಯುತ್ತೇನೆ ಎಂದಿದ್ದೆ. ನಾನು ಹಾಗೆ ಹೇಳಬಾರದಿತ್ತು. ನನಗೀಗ ನನ್ನ ತಪ್ಪಿನ ಅರಿವಾಗಿದೆ
ಈ ಹಿಂದೆ ನನ್ನ ಜೀವನ ಚೆನ್ನಾಗಿಯೇ ಇತ್ತು. ಧರ್ಮಸ್ಥಳ ಪ್ರಕರಣಕ್ಕೆ ಬಂದ ಮೇಲೆ ನನ್ನ ಜೀವನ ಅಯೋಮಯ ಆಗಿದೆ.
ಇದಕ್ಕಾಗಿ ಧರ್ಮಾಧಿಕಾರಿ ಮುಂದೆ ಕ್ಷಮೆ ಕೇಳುವೆ. ಅಣ್ಣಪ್ಪನಿಗೆ ಶರಣಾಗುವೆ. ಅವರು ನನ್ನನ್ನು ಕ್ಷಮಿಸುವ ಭರವಸೆ ಇದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ