ವಿಧಾನಸೌಧದಲ್ಲಿ ಚಿನ್ನ ಸಿಕ್ಕಿದ್ಹೇಗೆ? ಹಣದ ಬದಲಿಗೆ ಬಂಗಾರ ಕೊಡಲು ತಂದಿದ್ದನೇ? ತನಿಖೆ ಆಗಲಿ: ರವಿಕುಮಾರ್‌

Kannadaprabha News, Ravi Janekal |   | Kannada Prabha
Published : Feb 12, 2026, 07:16 AM IST
BJPs N Ravikumar Demands Probe into Byrathi Suresh Office Theft

ಸಾರಾಂಶ

ವಿಧಾನಸೌಧದಲ್ಲಿ 300 ಗ್ರಾಂ ಚಿನ್ನ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ತನಿಖೆಗೆ ಆಗ್ರಹಿಸಿದ್ದಾರೆ. ಇದು ಲಂಚಾವತಾರ ಮತ್ತು ಭ್ರಷ್ಟಾಚಾರದ ಉದಾಹರಣೆಯಾಗಿದ್ದು, ಇದರಲ್ಲಿ ಭಾಗಿಯಾದ ಸಚಿವರು ಹಾಗೂ ಅಧಿಕಾರಿಗಳು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರು (ಫೆ.12): ವಿಧಾನಸೌಧದಲ್ಲಿ ಸಿಕ್ಕಿರುವ 300 ಗ್ರಾಂ. ಚಿನ್ನ ಕುರಿತು ತನಿಖೆಯಾಗಬೇಕು. ಇದರಲ್ಲಿ ಭಾಗಿಯಾದ ಸಚಿವ ಮತ್ತು ಅಧಿಕಾರಿ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಹಣ ಕೊಡುವ ಬದಲು ಬಂಗಾರ ಕೊಡಲು ತಂದಿದ್ದರೇ?

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಷ್ಟೊಂದು ದೊಡ್ಡ ಪ್ರಮಾಣದ ಬಂಗಾರ ವಿಧಾನಸೌಧದಲ್ಲಿ ಸಿಕ್ಕಿದ್ದು ಹೇಗೆ? ಯಾರಿಗೆ ಕೊಡಲು ತಂದಿದ್ದರು? ಹಣ ಕೊಡುವ ಬದಲು ಬಂಗಾರ ಕೊಡಲು ತಂದಿದ್ದರೇ? 1.5 ಲಕ್ಷ ನಗದು ಹಾಗೂ ಈ ಬಂಗಾರವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಇದು ಲಂಚಾವತಾರ-ಭ್ರಷ್ಟಾಚಾರದ ಮತ್ತೊಂದು ಉದಾಹರಣೆ ಎಂದು ಕಟುವಾಗಿ ಟೀಕಿಸಿದರು.

ಇದನ್ನೂ ಓದಿ: ಪೊಲೀಸರ ಕಣ್ತಪ್ಪಿಸಿ ವಿಧಾನಸೌಧ ಸೇರಿದ್ವಾ ಬಂಗಾರದ ಒಡವೆಗಳು? ಕಳ್ಳ ಸಿಕ್ಕಿಬಿದ್ದರೂ ಬಗೆಹರಿಯದ ನಿಗೂಢ ಪ್ರಶ್ನೆಗಳು! 

ಬಂಗಾರ ಸಿಕ್ಕ ಪ್ರಕರಣ ತನಿಖೆ ಆಗಲೇಬೇಕು:

ಈ ಬಂಗಾರ ಸಿಕ್ಕ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್‌ ಅಥವಾ ಬೇರೆ ಯಾರೇ ಇದ್ದರೂ ತನಿಖೆಯಾಗಬೇಕು. ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಚಿವ ರಾಜೀನಾಮೆ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ವಿಧಾನಸೌಧದಲ್ಲಿ ಚಿನ್ನ ಸಿಕ್ಕಿದ್ಹೇಗೆ? ಹಣದ ಬದಲಿಗೆ ಬಂಗಾರ ಕೊಡಲು ತಂದಿದ್ದನೇ? ತನಿಖೆ ಆಗಲಿ - ರವಿಕುಮಾರ್‌
ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ