ಬಳ್ಳಾರಿಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ! ದಲಿತರಿಗೆ ಹೋಟೆಲ್ ಪ್ರವೇಶ ನೀಡದೇ ಅವಮಾನಿಸಿದ ಮಾಲೀಕ!

By Kannadaprabha News  |  First Published Jan 20, 2024, 5:45 AM IST

ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಅವಮಾನಿಸಿದ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ಗುರುವಾರ ಜರುಗಿದೆ. ಪ್ರಕರಣ ಸಂಬಂಧ ಹೋಟೆಲ್ ಮಾಲೀಕರ ವಿರುದ್ಧ ದೂರು ದಾಖಲಾಗಿದೆ.


ಬಳ್ಳಾರಿ ಜ.(20) : ಹೋಟೆಲ್‌ನಲ್ಲಿ ದಲಿತರಿಗೆ ಪ್ರವೇಶ ನೀಡದೆ ಅವಮಾನಿಸಿದ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ಗುರುವಾರ ಜರುಗಿದೆ.

ಗುತ್ತಿಗನೂರಿನ ಬಾಳಾಪುರ ರಸ್ತೆಯಲ್ಲಿರುವ ವೀರಭದ್ರಪ್ಪ ಅವರ ಹೋಟೆಲ್‌ಗೆ ಉಪಾಹಾರ ಮಾಡಲೆಂದು ಗ್ರಾಮದ ಎಸ್ಸಿ ಕಾಲನಿ ನಿವಾಸಿಗಳಾದ ಶೇಖರಪ್ಪ, ಅಯ್ಯಪ್ಪ, ಪರುಶುರಾಮ, ರಮೇಶ ಹಾಗೂ ಮಹೇಶ್ ಅವರು ತೆರಳಿದಾಗ ಹೋಟೆಲ್ ಮಾಲೀಕ ವೀರಭದ್ರಪ್ಪ ಅವರು ಹೋಟೆಲ್ ಒಳಗೆ ಪ್ರವೇಶಿಸಿಸದೆ ಹೊರಗಡೆ ಕುಳಿತುಕೊಳ್ಳುವಂತೆ ಸೂಚಿಸಿದ್ದು, ಈ ಕುರಿತು ಪ್ರಶ್ನಿಸಲಾಗಿ, ನೀವು ಕೆಳಜಾತಿಯವರು ಒಳಗೆ ಬರಬಾರದು ಎಂದು ಹೇಳಿದರು.

Tap to resize

Latest Videos

undefined

 

ದಲಿತರಿಗೆ ಪ್ರವೇಶ ನಿರಾಕರಿಸಿದ ಗ್ರಾಮಸ್ಥರ ಮನೆ ಲಾಕ್‌ ಮಾಡಿ, ದೇವಾಲಯಕ್ಕೆ ನುಗ್ಗಿ ಪೂಜಿಸಿದ ದಲಿತ ಯುವಕ

ನೀವು ಈ ರೀತಿ ಅಸ್ಪೃಶ್ಯತೆ ಮಾಡುವುದು ಸರಿಯಲ್ಲ ಎಂದು ಹೇಳಿದಾಗ ಅವಾಚ್ಯ ಶಬ್ದಗಳಿಂದ ಹೋಟೆಲ್ ಮಾಲೀಕ ವೀರಭದ್ರಪ್ಪ ಹಾಗೂ ನಾಗವೇಣಿ ಅವರು ನಿಂದಿಸಿದರಲ್ಲದೆ, ಜಾತಿನಿಂದನೆ ಮಾಡಿದರು ಎಂದು ಶೇಖರಪ್ಪ ಅವರು ಕುರುಗೋಡು ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ. ಕುರುಗೋಡು ಪೊಲೀಸ್ ಅಧಿಕಾರಿಗಳು ಹಾಗೂ ತಹಸೀಲ್ದಾರ್ ರಾಘವೇಂದ್ರ ರಾವ್ ಅವರು ಗ್ರಾಮಕ್ಕೆ ಭೇಟಿ ನೀಡಿ ಶಾಂತಿಸಭೆ ನಡೆಸಿದ್ದಾರೆ.

 

ಧಾರವಾಡದ ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ; ಹೋಟೆಲ್, ಕಟಿಂಗ್ ಶಾಪ್‌ಗೆ ದಲಿತರಿಗಿಲ್ಲ ಪ್ರವೇಶ!

click me!