ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಚಿಂತನೆಯ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ ಬಿಗ್ ಅಪ್ಡೇಟ್ ನೀಡಿದ್ದಾರೆ.
ಬೆಂಗಳೂರು (ಜೂ.08): ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಆದರೆ, ರಾಜ್ಯದ ಜನತೆ ಹಸಿವಿನಿಂದ ಬಳಲುತ್ತಿರುವಾಗ ಯಾವ ಅಭಿವೃದ್ಧಿ ಮಾಡಿದರೇನು ಪ್ರಯೋಜನ ಹೇಳಿ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮ ವರದಿಗಾರರು ಕೇಳಿದ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ತೆಗೆದುಹಾಕಲು ಶಾಸಕರು ಒತ್ತಡ ಹೇರುತ್ತಿದ್ದಾರೆಂಬ ವಿಚಾರದ ಬಗ್ಗೆ ಉತ್ತರ ನೀಡಿದರು. ಲೋಕಸಭಾ ಚುನಾವಣೆಗೆ ಮೊದಲೆ ಈ ರೀತಿಯಾದ ಪ್ರಶ್ನೆಗಳು ಬಂದಿದ್ದವು. ವಿಪಕ್ಷಗಳಿಂದ ಲೋಕಸಭೆ ಎಲೆಕ್ಷನ್ ನಂತರ ಗ್ಯಾರಂಟಿ ನಿಲ್ಲಿಸ್ತಾರೆ ಅಂತ ಸುಳ್ಳು ಸುದ್ದಿ ಹಬ್ಬಿಸಿದ್ದರು. ಆಗಲೇ ಗ್ಯಾರಂಟಿ ನಿಲ್ಲಿಸಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಉತ್ತರಕೊಟ್ಟಿದ್ದಾರೆ. ನಾವು ಯಾವ ಕಾರಣಕ್ಕೂ ಗ್ಯಾರಂಟಿಗಳನ್ನ ನಿಲ್ಲಿಸಲ್ಲ ಅಂತ ಹೇಳಿದ್ದೇವೆ ಎಂದು ತಿಳಿಸಿದರು.
undefined
ತನ್ನನ್ನು ಸೋಲಿಸಿದ ಮೈಸೂರು ಮತದಾರರನ್ನು 'ಸ್ಯಾಡಿಸ್ಟ್' ಎಂದ ಸಿಎಂ ಸಿದ್ದರಾಮಯ್ಯ ಶಿಷ್ಯ ಎಂ.ಲಕ್ಷ್ಮಣ್
ಮುಂದುವರೆದು, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮುನ್ನವೇ ಸಾಕಷ್ಟು ಚರ್ಚೆ ಆಗಿದೆ. ರಾಜ್ಯದಲ್ಲಿ ಮೊದಲು ಬಡತನ ನಿರ್ಮೂಲನೆ ಆಗಬೇಕು. ರಾಜ್ಯದ ಬಡ ಜನರಿಗೆ ಅನುಕೂಲ ಮಾಡಲು ಪ್ರಣಾಳಿಕೆ ಬರೆಯುವಾಗ ನಾನೇ ಅಧ್ಯಕ್ಷನಾಗಿದ್ದೆ. ಆಗ ಬಹಳ ಚರ್ಚೆ ಮಾಡಿಯೇ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾಂಟಿ ಯೋಜನೆಗಳನ್ನು ನಿಲ್ಲಿಸೋದು ಸರಿಯಲ್ಲ ಅನ್ನೋ ತೀರ್ಮಾನ ಆಗಿದೆ. ಯಾರು ಏನೇ ಹೇಳಿದ್ರು ಗ್ಯಾರಂಟಿ ಮುಂದುವರೆಯುತ್ತವೆ ಎಂದು ಸ್ಪಷ್ಟನೆ ನೀಡಿದರು.
ಖಾಲಿ ಹೊಟ್ಟೆಯಲ್ಲಿ ಅಭಿವೃದ್ಧಿ ಮಾಡಿದರೆ ಪ್ರಯೋಜನವೇನು?
ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸಲು ಒಂದಷ್ಟು ಹಣಕಾಸಿನ ತೊಂದರೆಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋದೆ. ಅದನ್ನು ಯಾವ ರೀತಿ ಬಳಕೆ ಮಾಡಬಹುದು ಅನ್ನೋದನ್ನ ನಾವು ಮಾಡಿಕೊಳ್ಳುತ್ತೇವೆ. ಯಾವ ಹಣ ಖರ್ಚು ಮಾಡಬೇಕು ಅಂತ ಗೊತ್ತಿದೆ. ಈ ಹಣ ಇದ್ದಿದ್ರೆ ಇನ್ನಷ್ಟು ಯೋಜನೆ ಮಾಡಬಹುದು ಅಂತಲೂ ಗೊತ್ತಿದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ರೆ ಏನು ಪ್ರಯೋಜನ ಆಗುತ್ತದೆ ನೀವೇ ಹೇಳಿ. ಇನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಚಿವ ಸ್ಥಾನಕ್ಕೆ ಎಷ್ಟೇ ಪೈಪೋಟಿ ಇದ್ದರೂ ಅದನ್ನು ಸಿಎಂ ಸಿದ್ದರಾಮಯ್ಯ ಅವರೇ ತೀರ್ಮಾನ ಮಾಡಿ ಆಯ್ಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮೊಮ್ಮಗಳ ಬೆತ್ತಲೆ ವಿಡಿಯೋ ತೋರಿಸಿ ಬೆದರಿಕೆ; ಮರ್ಯಾದೆಗೆ ಹೆದರಿ ವಿಷ ಸೇವಿಸಿದ ಕುಟುಂಬ
ಡಾ. ಪರಮೇಶ್ವರ ಭೇಟಿಯಾದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ: ಇನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿ ಪ್ರಿಯಾಂಕಾ ಜಾರಕಿಹೊಳಿ ಗೆದ್ದುದ್ದಾರೆ. ಈಗ ಗೆದ್ದ ನಂತರ ಎಲ್ಲರ ಆಶೀರ್ವಾದ ಪಡೆಯುತ್ತಿದ್ದಾರೆ. ಅದೇ ರೀತಿ ನಮ್ಮ ಮನೆಗೂ ಬಂದಿದ್ದಾರೆ. ಬಹಳ ಸಂತೋಷ ಆಗಿದೆ. ಕತ್ತೂರು ಕರ್ನಾಟಕ ಮಾತ್ರವಲ್ಲದೇ ಬಿಜಾಪುರ, ಬಾಗಲಕೋಟೆ, ಬೆಳಗಾವಿ ಗೆಲ್ಲಬೇಕಿತ್ತು. ಆದರೆ, ಜನರ ತೀರ್ಮಾನ ನಾವು ಒಪ್ಪಿಕೊಳ್ಳಬೇಕು. ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿ ಯಶಸ್ವಿಯಾಗಿದ್ದಾರೆ. ಆ ಭಾಗದಲ್ಲಿ ಪಕ್ಷಕ್ಕೆ ಗೌರವ ಬಂದಂತಾಗಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು.