ಸುಹಾಸ್ ಶೆಟ್ಟಿ ಹ*ತ್ಯೆಯಲ್ಲಿ ಬಜ್ಪೆ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿ, ಹಿಂದೂ ಮುಖಂಡನ ಆರೋಪ

Published : May 05, 2025, 04:38 PM IST
ಸುಹಾಸ್ ಶೆಟ್ಟಿ ಹ*ತ್ಯೆಯಲ್ಲಿ ಬಜ್ಪೆ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿ, ಹಿಂದೂ ಮುಖಂಡನ ಆರೋಪ

ಸಾರಾಂಶ

ಮಂಗಳೂರಿನಲ್ಲಿ ಹಿಂದೂ ಕಾರ್ಯಕ್ರತ ಸುಹಾಶ್ ಶೆಟ್ಟಿ ಹ*ತ್ಯೆ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಠಾಣ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಷ್ಟೇ ಅಲ್ಲ , ಇದು ಪ್ರತೀಕಾರದ ದಾಳಿಯಲ್ಲ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಡೆಸಿದ ವ್ಯವಸ್ಥಿತ ದಾಳಿ ಎಂದು ಹಿಂದೂ ಮುಖಂಡ ಆರೋಪಿಸಿದ್ದಾರೆ.

ಮಂಗಳೂರು(ಮೇ.05) ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಮೇಲಿನ ದಾಳಿ ಹಾಗೂ ಹ*ತ್ಯೆ ಪ್ರಕರಣ ಸಂಬಂಧ 8 ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಇದರ ನಡುವೆ ದಾಳಿ ವೇಳೆ ಸಹಕರಿಸಿದ ಹಲವರನ್ನು ವಶಕ್ಕೆ ಪಡೆದಿಲ್ಲ ಯಾಕೆ ಅನ್ನೋ ಪ್ರಶ್ನೆಗಳು ಉದ್ಭವವಾಗಿದೆ. ಹಿಂದೂ ಕಾರ್ಯಕರ್ತನ ಮೇಲಿನ ದಾಳಿಯನ್ನು ಹಿಂದೂ ಸಂಘಟೆಗಳು ಉಗ್ರವಾಗಿ ಖಂಡಿಸಿದೆ. ಇದರ ಬೆನ್ನಲ್ಲೇ ಇದೀಗ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಬಜ್ಪೆ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾನೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಹಿಂದೂ ಜಾಗಾರಣ ವೇದಿಕೆ ಪ್ರಾಂತ ಪ್ರಮುಖ ಕೆಟಿ ಉಲ್ಲಾಸ್, ಈ ಆರೋಪ ಮಾಡಿದ್ದಾರೆ.

ಪೊಲೀಸ್ ಮುಖ್ಯಪೇದೆಯಿಂದ ಆರೋಪಿಗಳಿಗೆ ಮಾಹಿತಿ
ಸುಹಾಸ್ ಶೆಟ್ಟಿ ಪ್ರಕರಣವನ್ನು ನಿಷೇಧಿತ ಪಾಪ್ಯುಪಲ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಮಾಡಿದ ವ್ಯವಸ್ಥಿತ ದಾಳಿಯಾಗಿದೆ. ಆರೋಪಿಗಳು, ಇವರಿಗೆ ನೆರವು ನೀಡಿದವರೂ ಪಿಎಫ್ಐ ಕಾರ್ಯಕರ್ತರಾಗಿದ್ದಾರೆ. ಇವರ ಜೊತೆಗೆ ಬಜ್ಪೆ ಠಾಣಾ ಪೊಲೀಸ್ ಮುಖ್ಯ ಪೇದೆ ರಶೀದ್ ಭಾಗಿಯಾಗಿದ್ದಾರೆ ಎಂದು ಕೆಟಿ ಉಲ್ಲಾಸ್ ಆರೋಪಿಸಿದ್ದಾರೆ.  ಪೇದೆ ರಶೀದ್ ಹಲವು ಬಾರಿ ಸುಹಾಸ್ ಶೆಟ್ಟಿಗೆ ಕರೆ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಉಲ್ಲಾಸ್ ಆರೋಪಿಸಿದ್ದಾರೆ. ಈ ಕಿರುಕುಳ ಕುರಿತು ಸುಹಾಸ್ ಶೆಟ್ಟಿ ಸ್ನೇಹಿತರು ಮತ್ತೆ ಸುಹಾಸ್ ಶೆಟ್ಟಿ ತಾಯಿ ಹೇಳಿದ್ದಾರೆ.ಸುಹಾಸ್ ಶೆಟ್ಟಿ ಬಳಿ ಇದ್ದ ಆಯಧಗಳನ್ನು  ಎಸಿಪಿ ದರ್ಜೆ ಪೊಲೀಸ್ ಅಧಿಕಾರಿ ತೆಗೆಸಿದ್ದಾರೆ. ಸುಹಾಸ್ ಶೆಟ್ಟಿಯನ್ನು ನಿರಾಯುಧನನ್ನಾಗಿ ಮಾಡಿದ್ದಾರೆ. ಸುಹಾಸ್ ಶೆಟ್ಟಿ ಬಳಿ ಯಾವುದೇ ಆಯುಧ ಇಲ್ಲ, ನಿರಾಯುಧನಾಗಿ ಬಜ್ಪೆ ಮಾರ್ಗವಾಗಿ ಸಾಗುತ್ತಿದ್ದಾನೆ ಅನ್ನೋ ಮಾಹಿತಿ ಪೊಲೀಸ್ ಮುಖ್ಯ ಪೇದೆ ರಶೀದ್ ಮೂಲಕವೇ ಆರೋಪಿಗಳಿಗೆ ಗೊತ್ತಾಗಿದೆ. ಹೀಗಾಗಿ ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಈ ದಾಳಿ ನಡೆಸಿದ್ದಾರೆ ಎಂದು ಕೆಟಿ ಉಲ್ಲಾಸ್ ಆರೋಪಿಸಿದ್ದಾರೆ.

ಹಿಂದೂಗಳು ಎಂದಿಗೂ ಹೆದರೋಲ್ಲ; ಬೆದರಿಕೆಗಳಿಗೆ ಬಗ್ಗೋಲ್ಲ: ವೇದಾ ಕುಲಕರ್ಣಿ

ಕುಡುಪು ಅಶ್ರಫ್ ಮೇಲಿನ ದಾಳಳಿ ಬಳಿಕವೇ ಸುಹಾಸ್ ಶೆಟ್ಟಿ ಮೇಲಿನ ಆಯುಧ ತೆಗೆಸಿದ್ದಾರೆ. ಬಜ್ಪೆ ಪೊಲೀಸ್ ಠಾಣ ಮುಖ್ಯ ಪೇದೆ ರಶೀದ್‌ನ ವಿಚಾರಣೆ ಮಾಡಿ ಎಂದು ಉಲ್ಲಾಸ್ ಆಗ್ರಹಿಸಿದ್ದಾರೆ. ಈ ದಾಳಿ ಆರೋಪಿಗಳ ಹಿಂದೆ ಇರುವವರ ಪಾತ್ರ ಬಹಿರಂಗವಾಗಬೇಕು  ಎಂದು ಉಲ್ಲಾಸ್ ಆಗ್ರಹಿಸಿದ್ದಾರೆ.  

ಮಂಗಳೂರಿನಲ್ಲಿ ಬೇರೂರಿದೆ ಕೇರಳದ ಪಿಎಫ್ಐ ಮಾಡ್ಯೂಲ್ 
ಸುಹಾಸ್ ಶೆಟ್ಟಿ ಮೇಲಿನ ದಾಳಿ ಹಾಗೂ  ಹ*ತ್ ಫಾಜಿಲ್ ಘಟನೆಗೆ ನಡೆದ ಪ್ರತೀಕಾರವಲ್ಲ. ಇದೊಂದು ಪಿಎಫ್ಐ ಮಾಡ್ಯೂಲ್ ಹ*ತ್ಯೆ ಎಂದು ಉಲ್ಲಾಸ್ ಹೇಳಿದ್ದಾರೆ. ಹ*ತ್ಯೆ ನಡೆದ ಕಿನ್ನಿಪದವು ಬಳಿ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರಿದ್ದರು. ಇವರು ಮೂಡಬಿದರೆ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹ*ತ್ಯೆ ಆರೋಪಿಗಳಾಗಿದ್ದಾರೆ. ಹ*ತ್ಯೆ ಆರೋಪಿಗಳಾದ ಪಿಎಫ್ಐ ನ ಕಬೀರ್ ಮತ್ತು ಮುಸ್ತಾಫಾ ಸ್ಥಳದಲ್ಲಿದ್ದರು. ಇತ್ತ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹ*ತ್ಯೆ ಆರೋಪಿ ನೌಷದ್ ವಾಮಂಜೂರು ಈ ದಾಳಿಗೆ ಪ್ಲಾನ್ ಮಾಡಿದ್ದಾನೆ. ಇವರೆಲ್ಲಾ ಸೇರಿ ಸುಹಾಸ್  ಹತ್ಯೆಗೆ ನೆರವು ನೀಡಿದ್ದಾರೆ ಎಂದು ಉಲ್ಲಾಸ್ ಆರೋಪಿಸಿದ್ದಾರೆ.

ನೌಷದ್ ವಾಮಂಜೂರು ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತನಾಗಿದ್ದಾನೆ.  ಇನ್ನು ಸುಹಾಸ್ ಶೆಟ್ಟಿ ಮೇಲಿನ ದಾಳಿಯ ಪ್ರಮುಖ ಆರೋಪಿ ಸಫ್ವಾನ್‌ಗೆ ಮನೆ ಬಾಡಿಗೆ ನೀಡಿದ್ದು ನಿಷೇಧಿತ ಪಿಎಫ್ಐ ಕಾರ್ಯಕರ್ತ ಇಸ್ಮಾಯಿಲ್ ಇಂಜಿನೀಯರ್ ಎಂದು ಉಲ್ಲಾಸ್ ಆರೋಪಿಸಿದ್ದಾರೆ. ಎಲ್ಲರೂ ಪಿಎಫ್ಐ ಕಾರ್ಯಕರ್ತರೇ ಇದ್ದಾರೆ. ಹೀಗಾಗಿ ಇದು ಪಿಎಫ್ಐ ಮಾಡ್ಯೂಲ್ ಹ*ತ್ಯೆ  ಅನ್ನೋದು ಅನುಮಾನವಿಲ್ಲ ಎಂದಿದ್ದಾರೆ.

50 ಲಕ್ಷ ರೂಪಾಯಿ ಫಂಡಿಂಗ್ ಅನುಮಾನ
ಸುಹಾಸ್ ಶೆಟ್ಟಿ ಮೇಲಿನ ದಾಳಿಗೆ ಫಾಜಿಲ್ ಸಹೋದರ ನೀಡಿದ ಹಣ ಮಾತ್ರವಲ್ಲ, ವಿದೇಶಗಳಿಂದ ಫಂಡಿಂಗ್ ಮಾಡಲಾಗಿದೆ. 50 ಲಕ್ಷ ರೂಪಾಯಿ ಫಂಡಿಂಗ್ ಆಗಿರುವ ಅನುಮಾನ ಇದೆ ಎಂದು ಉಲ್ಲಾಸ್ ಆರೋಪಿಸಿದ್ದಾರೆ. ಸುಹಾಸ್ ಶೆಟ್ಟಿ ಪ್ರಕರಣಧಲ್ಲಿ ಪಿಎಫ್ಐ ಬಗ್ಗೆ ಬಲವಾದ ಅನುಮಾನವಿದೆ. ಕಾರಣ ಪಿಎಫ್ಐ ಈ ಹಿಂದೆ ನಡೆಸಿದ ದಾಳಿಗಳಿಗೂ ಸುಹಾಸ್ ಶೆಟ್ಟಿ ಮೇಲಿನ ದಾಳಿಗೂ ಸಾಮ್ಯತೆ ಇದೆ ಎಂದು ಉಲ್ಲಾಸ್ ಕೆಟಿ ಆರೋಪಿಸಿದ್ದಾರೆ.

 ಸುಹಾಸ್ ಶೆಟ್ಟಿ ಪ್ರಕರಣ: ಜಿಲ್ಲಾಡಳಿತ ವಿರೋಧ ನಡುವೆಯೂ ಕಾಫಿನಾಡು ಬಂದ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Mangaluru: ಎಂಆರ್‌ಪಿಎಲ್ ಹೊಸ ಮೈಲಿಗಲ್ಲು 1000ನೇ ಪೆಟ್‌ಕೋಕ್ ರೈಲು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ರವಾನೆ
Karnataka Rains: ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ