ರಾಜ್ಯದಲ್ಲಿ ಗರಿಷ್ಠ ಸೋಂಕಿತರು : ದಾಖಲೆ ಸಂಖ್ಯೆ

By Kannadaprabha NewsFirst Published Sep 6, 2020, 7:40 AM IST
Highlights

ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಎರಡನೇ ಬಾರಿ ದಾಖಲೆ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ.

ಬೆಂಗಳೂರು(ಸೆ.06) :  ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ 9,746 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.61 ಲಕ್ಷಕ್ಕೆ ಏರಿಕೆಯಾಗಿದೆ.

ಸೆಪ್ಟೆಂಬರ್‌ 2ರಂದು ದಾಖಲಾಗಿದ್ದ 9,860 ಪ್ರಕರಣದ ಬಳಿಕ ಶನಿವಾರ ಎರಡನೇ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಅಲ್ಲದೆ, ದಾಖಲೆಯ 9,102 ಮಂದಿ ಗುಣಮುಖರಾಗಿದ್ದಾರೆ. ಇನ್ನು ಶನಿವಾರ 128 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ ದೃಢ

ಶನಿವಾರ 76,761 ಮಂದಿಗೆ ಪರೀಕ್ಷೆ ನಡೆಸಿದ್ದು ಒಟ್ಟು 32.73 ಲಕ್ಷ ಪರೀಕ್ಷೆ ನಡೆಸಿದಂತಾಗಿದೆ. ಒಟ್ಟು ಸೋಂಕು 3.61 ಲಕ್ಷ ಸೋಂಕಿತರ ಪೈಕಿ 2.83 ಲಕ್ಷ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು 99,617 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 769 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 3093 ಮಂದಿಗೆ ಸೋಂಕು:

ಶನಿವಾರ ಬೆಂಗಳೂರಿನಲ್ಲಿ 3,093 ಮಂದಿಗೆ ಸೋಂಕು ದೃಢಪಟ್ಟಿದ್ದು ಮೈಸೂರು 790, ಬೆಳಗಾವಿ 473, ದಾವಣಗೆರೆ 395, ದಕ್ಷಿಣ ಕನ್ನಡ 377, ಬಳ್ಳಾರಿ 366, ಹಾಸನ 347, ಶಿವಮೊಗ್ಗ 346, ಬಾಗಲಕೋಟೆ 144, ಬೆಂಗಳೂರು ಗ್ರಾಮಾಂತರ 124, ಬೀದರ್‌ 119, ಚಾಮರಾಜ ನಗರ 31, ಚಿಕ್ಕಬಳ್ಳಾಪುರ 133, ಚಿಕ್ಕಮಗಳೂರು 238, ಚಿತ್ರದುರ್ಗ 240, ಧಾರವಾಡ 227, ಗದಗ 195, ಹಾವೇರಿ 188, ಕಲಬುರಗಿ 198, ಕೊಡಗು 28, ಕೋಲಾರ 112, ಕೊಪ್ಪಳ 243, ಮಂಡ್ಯ 246, ರಾಯಚೂರು 186, ರಾಮ ನಗರ 92, ತುಮಕೂರು 192, ಉಡುಪಿ 175, ಉತ್ತರ ಕನ್ನಡ 207, ವಿಜಯಪುರ 103, ಯಾದಗಿರಿಯಲ್ಲಿ 138 ಮಂದಿಗೆ ಸೋಂಕು ದೃಢಪಟ್ಟಿದೆ.

128 ಮಂದಿ ಸಾವು:

ಬೆಂಗಳೂರಿನಲ್ಲಿ 34, ಮೈಸೂರು 12, ಬಳ್ಳಾರಿ 5, ಬಾಗಲಕೋಟೆ 2, ಬೆಂಗಳೂರು ಗ್ರಾಮಾಂತರ 3, ಚಾಮರಾಜನಗರ 3, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 4, ದಕ್ಷಿಣ ಕನ್ನಡ 9, ದಾವಣಗೆರೆ 7, ಧಾರವಾಡ 8, ಗದಗ 3, ಹಾಸನ 6, ಕಲಬುರಗಿ 1, ಕೋಲಾರ 1, ಕೊಪ್ಪಳ 3, ಮಂಡ್ಯ 4, ಮೈಸೂರು 12, ರಾಯಚೂರು 3, ರಾಮನಗರ 3, ಶಿವಮೊಗ್ಗ 8, ತುಮಕೂರು 2, ಉಡುಪಿ 4, ವಿಜಯಪುರ 2 ಸೇರಿ ಶನಿವಾರ ಒಟ್ಟು 128 ಮಂದಿಗೆ ಸೋಂಕಿಗೆ ಸಾವನ್ನಪ್ಪಿದ್ದಾರೆ.

ಈ ಪೈಕಿ ಬೆಂಗಳೂರು ನಗರದಲ್ಲಿ 17 ವರ್ಷದ ಯುವಕ ಉಸಿರಾಟ ಸಮಸ್ಯೆಯಿಂದ ಆಸ್ಪತರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತುಮಕೂರಿನಲ್ಲಿ 28 ವರ್ಷದ ಮತ್ತೊಬ್ಬ ಯುವಕ ಸಾವನ್ನಪ್ಪಿದ್ದಾರೆ.

click me!