Chikmagalur Rainfall: ಭದ್ರಾ ಜಲಾವೃತ ಭೀತಿ: ಆತಂಕದಲ್ಲಿ ಮಲೆನಾಡಿನ ಬಡಕುಟುಂಬಗಳು!

Published : May 31, 2025, 11:15 PM IST
Chikkamagaluru

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಜಾಂಬಳೆಯಲ್ಲಿ ಭದ್ರಾ ನದಿ ಪಾತ್ರದಲ್ಲಿರುವ ಎರಡು ಕುಟುಂಬಗಳು ಮಳೆಗಾಲದಲ್ಲಿ ಮನೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಕುಟುಂಬಗಳು ಅಳಲು ತೋಡಿಕೊಂಡಿವೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಮೇ.31): ಮಲೆನಾಡಲ್ಲಿ ಮಳೆ ನಿಂತ್ರು ಮಳೆ ಅವಾಂತರಗಳು ಕಡಿಮೆಯಾಗ್ತಿಲ್ಲಾ. ನದಿಪಾತ್ರದ ಕೆಲ ಕುಗ್ರಾಮದ ಜನ ಆತಂಕದಲ್ಲೇ ದೀನದೂಡುವಂತಂಹ ಸ್ಥಿತಿ ನಿರ್ಮಾವಾಗಿದೆ. ಭದ್ರಾ ನದಿ ಜಲಾನಯನ ಪ್ರದೇಶದ 2 ಕುಟುಂಬಗಳು ಮಳೆ ಶುರುವಾದ್ರೆ ಭಯದಲ್ಲೆ ರಾತ್ರಿ ಕಳೆಯುವಂತಾಗಿದೆ. ಸಣ್ಣ ಶಬ್ಧ ಬಂದ್ರು ಮನೆಮಂದಿಯಲ್ಲಾ ನಿದ್ರೆಯಲ್ಲೂ ಬೆಚ್ಚಿ ಬೀಳುವಂತಾಗಿದೆ.

ಮಳೆಗಾಲ ಬಂತೆಂದರೆ ಜೀವವನ್ನ ಕೈಯಲ್ಲಿ ಹಿಡಿದು ಬದುಕು

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿಗೆ ಒಳಪಡುವ ಜಾಂಬಳೆಯಲ್ಲಿ ಸಂಕಷ್ಟದಲ್ಲಿ ದಿನ ಕಳೆಯುವ ಪರಿಸ್ಥಿತಿ ಬಡಕುಟುಂಬಗಳಿಗೆ ಎದುರಾಗಿದೆ. ನಾರಯಣ ಗೌಡ ಮತ್ತು ನೀಲಮ್ಮ , ಮತ್ತು ವಿಮಲಾ ಎಂಬುವರು ಕುಟುಂಬ ಜೀವವನ್ನು ಕೈ ಹಿಡಿದು ಬದುಕು ಸಾಗಿಸುತ್ತಿದ್ದಾರೆ. 

ಮಳೆಗಾಲ ಬಂತ್ತೆದ್ದರೆ ಈ ಕುಟುಂಬಗಳು ಜೀವವನ್ನ ಕೈಯಲ್ಲಿ ಹಿಡಿದು ಬದುಕ್ತಿವೆ. ಅಧಿಕಾರಿಗಳು ಇವರ ಬಳಿ ಬರ್ತಾರೆ ಕಷ್ಟ ಕೇಳಿ ಹೋಗ್ತಾರೆ. ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲಾ. ಈ ಕುಟುಂಬಗಳು ಕುದುರೆಮುಖದಲ್ಲಿ ವಾಸವಾಗಿದ್ವು. ಅಲ್ಲಿಂದ ಅವರನ್ನೆಲ್ಲಾ ಸರ್ಕಾರ ತೆರವುಗೊಳಿಸಿದ ನಂತರ ಕಳಸದ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಜಮೀನು ಕೊಟ್ಟು ಮನೆಯನ್ನು ಕೊಟ್ಟಿತ್ತು. ಹೇಗೋ ಜಮೀನಿನಲ್ಲಿ ಕೆಲಸ ಮಾಡ್ಕೊಂಡು ಜೀವನ ದೂಡಬಹುದು ಅನ್ಕೊಂಡು ತೋಟವನ್ನ ಅಚ್ಚುಕಟ್ಟಾಗಿ ಮಾಡೋಕೆ ಶುರುಮಾಡಿದ್ರು. ಪಸಲು ಕೂಡ ಬರೋಕೆ ಶುರುವಾಯಿತು. ಆದ್ರೆ, ಇದೀಗ ಭದ್ರೆ ವೇಗದ ಹರಿವಿಗೆ ತೋಟದ ಜೊತೆಗೆ ಮನೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ದಿನಕಳೆದಂತೆ ಮನೆಯ ಹಿಂಭಾಗದ ಧರೆ ಭದ್ರೆಯ ಒಡಲು ಸೇರ್ತಿರೋದ್ರಿಂದ ಇವರಿಗೆ ಭವಿಷ್ಯ ಕತ್ತಲಾಗುವ ಭಯದಲ್ಲಿ ದಿನ ದೂಡುವಂತಾಗಿದೆ.

ಅಧಿಕಾರಿಗಳು ಬರ್ತಾರೆ ಮನವಿ ಸ್ವೀಕರಿಸಿ ವಾಪಸ್ಸ್ ಹೋಗ್ತಾರೆ :

ಇನ್ನು ಇಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಧರೆ ಕುಸಿಯುತ್ತಿರೋದು, ಇದೀಗ ಮನೆ ಗೋಡೆಯ ಪಕ್ಕಕ್ಕೆ ಬಂದು ನಿಂತಿದೆ. ಅಷ್ಟೆ ಅಲ್ದೆ ಮಕ್ಕಳಂತೆ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಕಾಫಿ-ಅಡಿಕೆ ಗಿಡಗಳು ನೀರು ಪಾಲಾಗ್ತಿವೆ. ಇನ್ನು ಈ ಬಾರಿ ಮಳೆ ವಾಡಿಕೆ ಮೊದಲೇ ಆರಂಭವಾಗಿದ್ದು ಇಷ್ಟರ ಮಟ್ಟಿಗೆ ಅನಾಹುತ ಸೃಷ್ಟಿ ಮಾಡಿದ್ರೆ ಇನ್ನು ಮಳೆಗಾಲ ಶುರುವಾದ್ರೆ ಈ ಕುಟುಂಬಗಳು ಮನೆ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಪ್ರತಿ ವರ್ಷ ಧರೆ ಕುಸಿದಂತೆ ಅಧಿಕಾರಿಗಳು ಬರ್ತಾರೆ ಮನವಿ ಸ್ವೀಕರಿಸಿ ವಾಪಸ್ಸ್ ಹೋಗ್ತಾರೆ. 

ಆದ್ರೆ ಲ, ಇದಕ್ಕೆ ಸೂಕ್ತ ಪರಿಹಾರ ಸೂಚಿಸಿಲ್ಲ ಅಂತ ಅಳಲನ್ನು ತೋಡಿಕೊಳ್ತಿದ್ದಾರೆ. ಒಟ್ಟಾರೆ, ಇನ್ನಾದ್ರೂ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚೇತ್ತುಕೊಳ್ಳಬೇಕಾಗಿದೆ. ಹೇಗೋ ಇರುವ ಅಂಗೈ ಅಗಲದ ಜಾಗಲದಲ್ಲಿ ಜೀವನ ದೂಡ್ತಾ ಇದ್ದ ಕುಟುಂಬ ಮಳೆಯಲ್ಲಿ ಅನಾಹುತಕ್ಕೆ ಸಿಲುಕಿ ಸಂಕಷ್ಟ ಪಡುವ ಮೊದಲೇ ಎಚ್ಚೇತ್ತುಕೊಂಡು ಇವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಅನ್ನೋದೆ ನಮ್ಮ ಆಶಯ ಕೂಡ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!