
ಬೆಂಗಳೂರು(ಜು.10): ಗುರುವಾರ ತಡರಾತ್ರಿಯಿಂದಲೂ ರಾಜ್ಯದ ಹಲವೆಡೆ ಮುಂದುವರಿದ್ದು, ಕೋಲಾರ, ಕಲಬುರಗಿ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಿದೆ.
ಕೋಲಾರ ಜಿಲ್ಲೆಯಲ್ಲಿ ಬಿದ್ದ ಜೋರು ಮಳೆಯಿಂದ ತಗ್ಗು ಪ್ರದೇಶಗಳಿಗೆ ಸುಮಾರು 4 ಅಡಿಯಷ್ಟು ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಒಂದೇ ಸಮನೆ ಮಳೆ ಸುರಿಯಿತು. ಚರಂಡಿಗಳು ತುಂಬಿದ ಪರಿಣಾಮ ಮನೆಗೆ ನುಗ್ಗಿದ ನೀರಿನಿಂದ ಸಾಮಾನುಗಳು ನೀರು ಪಾಲಾದವು. ರೈಲ್ವೆ ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು.
ಹೂವಿನಹಡಗಲಿ: ಭಾರೀ ಮಳೆಗೆ 300 ಎಕರೆ ಬೆಳೆಹಾನಿ
ದ.ಕ. ಜಿಲ್ಲೆಯಾದ್ಯಂತ ಮಳೆ ಉತ್ತಮವಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 2-3 ಗಂಟೆಗಳ ಕಾಲ ತುಂತುರು ಮಳೆಯಾಗಿದೆ. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. 2 ದಿನದಿಂದ ದಟ್ಟಮೋಡ ಆವರಿಸಿದ್ದ ಕಲಬುರಗಿ ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಮಳೆಯಾಗುತ್ತಿದ್ದು, ಹಳ್ಳಗಳು, ಮಾರುಕಟ್ಟೆಗಳು, ಸಿದ್ದಲಿಂಗೇಶ್ವರ ಮಠ, ಶಾಲಾವರಣ ಜಲಾವೃತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ