ಮಳೆಯಿಂದ ಅಪಾರ ಹಾನಿ; ರೈತರ ಅಕೌಂಟ್‌ಗಳಿಗೆ ನೇರ ಪರಿಹಾರ: ಕಂದಾಯ ಸಚಿವ ಕೃಷ್ಣಬೈರೇಗೌಡ

By Ravi JanekalFirst Published May 31, 2023, 7:06 PM IST
Highlights

ಜನೆವರಿಯಿಂದ ಈಚೆಗೆ ಭಾರೀ ಮಳೆ ಆಗಿರುವ ಪರಿಣಾಮ ರಾಜ್ಯದಲ್ಲಿ ಆರವತ್ತೇಳು ಜನರ ಪ್ರಾಣ ಹಾನಿ ಆಗಿದೆ. ಇದರಲ್ಲಿ ಐವತ್ತೊಂಭತ್ತು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಪ್ರಕರಣಗಳಿಗೆ ಇನ್ನೊಂದೆರಡು ದಿನಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಬೆಂಗಳೂರು (ಮೇ.31) : ಜನೆವರಿಯಿಂದ ಈಚೆಗೆ ಭಾರೀ ಮಳೆ ಆಗಿರುವ ಪರಿಣಾಮ ರಾಜ್ಯದಲ್ಲಿ ಆರವತ್ತೇಳು ಜನರ ಪ್ರಾಣ ಹಾನಿ ಆಗಿದೆ. ಇದರಲ್ಲಿ ಐವತ್ತೊಂಭತ್ತು ಪ್ರಕರಣಗಳಲ್ಲಿ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಪ್ರಕರಣಗಳಿಗೆ ಇನ್ನೊಂದೆರಡು ದಿನಗಳಲ್ಲಿ ಪರಿಹಾರ ನೀಡುತ್ತೇವೆ ಎಂದು ಕಂದಾಯ ಸಚಿವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಕೆಲವಡೆ ಮಳೆ(karnataka rains)ಯಿಂದಾಗಿ ಅಪಾರ ಹಾನಿಯುಂಟು ಮಾಡಿದೆ. ಇಂದು ಕೂಡಾ ರಾಜ್ಯದ ಕೆಲವು ಕಡೆ ಮಳೆಯಿಂದ ಆಗಿರುವ ಹಾನಿ, ಹಾಗೂ ಪರಿಹಾರ ಕಾರ್ಯಗಳ ಬಗ್ಗೆ  ಸಭೆ ಮಾಡಿದ್ದೇನೆ. ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಸೋಮವಾರವೇ ಒಂದು ಸುತ್ತಿನ ಸಭೆ ನಡೆಸಿದ್ದೆ ಎಂದರು.

ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆ:

ಈ ವರ್ಷ ರಾಜ್ಯದಲ್ಲಿ ವಾಡಿಕೆ ಗಿಂತ ಹೆಚ್ಚು ಮಳೆ ಆಗಿದೆ. ಕೆಲವಡೆ ಭಾರಿ ಮಳೆಯಾಗುತ್ತಿದ್ದು, ತುರ್ತು ಪರಿಸ್ಥಿತಿ ನಿರ್ವಹಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಜೊತೆ ತುರ್ತು ಪರಿಹಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು. ಮುಂದುವರಿದು, ನಿನ್ನೆ ಮೊನ್ನೆ ಸುರಿದಿರುವ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಹಾನಿಯಾಗಿದೆ. 20160 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ( ಜನವರಿಯಿಂದ) ಆಗಿದೆ. ಸಿಡಿಲಿಗೆ ಜಾನುವಾರುಗಳು ಸಾವನ್ನಪ್ಪಿವೆ. ತೀರಾ ಕಡಿಮೆ ಪ್ರಮಾಣದ ಹಾನಿ ಆಗಿರುವ ಪ್ರಕರಣಗಳು ಇವೆ. ಅವುಗಳಿಗೆ ಶೀಘ್ರವಾಗಿ ಪರಿಹಾರ ವಿತರಿಸಲಾಗುವುದು ಎಂದರು.

ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ: ಎಚ್ಚರಿಕೆ ನೀಡಿದ ಹವಮಾನ ಇಲಾಖೆ!

ಬೆಳಹಾನಿ ಪರಿಹಾರ ರೈತರಿಗೆ ನೇರ ಪರಿಹಾರ:

ಮಳೆಯಿಂದಾಗಿ ಬೆಳೆನಷ್ಟ(Crop loss), ಜಾನುವಾರು ಸಾವು ಯಾವುದೇ ಪ್ರಕೃತಿ ವಿಕೋಪಗಳಿಂದ ಹಾನಿಯುಂಟಾಗಿರುವ ರೈತರಿಗೆ ನೇರ ಪರಿಹಾರ ವ್ಯವಸ್ಥೆ ಮಾಡಲಾಗುತ್ತದೆ. ಆನ್‌ಲೈನ್ ಪೋರ್ಟಲ್(Online portal) ನಲ್ಲಿ ಮಾಡಿಸಿಕೊಂಡು ಪರಿಹಾರ ಪಡೆಯಬಹುದಾಗಿದೆ. ರೈತರ ಅಕೌಂಟ್‌(Farmers bank account)ಗಳಿಗೆ ನೇರವಾಗಿ ಪರಿಹಾರ ನೀಡುತ್ತೇವೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಕ್ಯಾಬಿನೆಟ್(karnataka cabinet) ನಲ್ಲಿ ತೀರ್ಮಾನ. ಮಾಡುತ್ತೇವೆ ಎಂದರು.

ಹವಮಾನ ಇಲಾಖೆ ಸುಧಾರಣೆ:

 ಪ್ರಾಕೃತಿಕ ವಿಕೋಪವನ್ನು ಮುಂಚಿತವಾಗಿ ಅರಿಯಲು, ಹಾನಿ ತಪ್ಪಿಸಲು ಹವಮಾನ ಇಲಾಖೆ ಮುನ್ಸೂಚನೆ ನೀಡುತ್ತದೆ. ವರ್ಷದಿಂದ ವರ್ಷಕ್ಕೆ ಹವಮಾನ ಇಲಾಖೆಯೂ ತಾಂತ್ರಿಕವಾಗಿ ಸುಧಾರಣೆ ಆಗಿದೆ. ಆದರೆ ಇದರಿಂದಾಗಿ ನಾವು ಎಷ್ಟು ಉಪಯೋಗ ಪಡೆದುಕೊಳ್ತಿದ್ದಿವಿ ಎಂಬುದು ಪ್ರಶ್ನೆಯಾಗಿದೆ. ಕೆಲವೆಡೆ ಹವಮಾನ ಇಲಾಖೆ(Department of Meteorology) ಮುನ್ಸೂಚನೆ ಕೊಟ್ಟರೂ, ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ನಿರ್ದಿಷ್ಟ ಸ್ಥಳಗಳಲ್ಲಿ ಹಾನಿಯಾಗುವ ಬಗ್ಗೆ ಮುನ್ಸೂಚನೆ(weather forecast) ಸಿಕ್ಕಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಪ್ರಕೃತಿ ವಿಕೋಪದ ಸಂಧರ್ಭದಲ್ಲಿ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಎಂದರು.

 

ರೈತರಿಗೆ ಶಾಕಿಂಗ್ ನ್ಯೂಸ್‌: ಜೂನ್‌ನಲ್ಲಿ ಕಡಿಮೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ

click me!