* ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ
* ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು
* ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಬಗ್ಗೆ ವಿವರಿಸಿದ ಸಚಿವ ಸುಧಾಕರ್
ಬೆಂಗಳೂರು, (ಜೂನ್.13) : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲ ರೀತಿಯ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರು ಆತಂಕ ಪಡೆಯುವ ಅಗತ್ಯವಿಲ್ಲ. ಆದರೆ ಅಗತ್ಯ ಮುನ್ನೇಚ್ಚರಿಕೆ ಕ್ರಮಗಳನ್ನು ತಪ್ಪದೆ ಅನುಸರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಹೋದ್ಯಾ ಪಿಶಾಚಿ ಎಂದ್ರೆ ನಾ ಬಂದೆ ಗವಾಕ್ಷಿಲಿ ಎಂಬಂತೆ ಕೊರೊನಾ ಮತ್ತೆ ಒಕ್ಕರಿಸಲು ಅಣಿಯಾಗುತ್ತಿದೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಐನೂರರ ಗಡಿ ದಾಟುತ್ತಿದೆ. ಅದರಲ್ಲೂ ಶೇ.95ರಷ್ಟು ಬೆಂಗಳೂರಿನಲ್ಲಿ ಕೇಸ್ ಬರುತ್ತಿದೆ. ಇದರ ಹಿನ್ನೆಲೆ ಇಂದು(ಸೋಮವಾರ) ಸಂಜೆ ಆರೋಗ್ಯ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು, ಕೊರೊನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ಸೇರಿದಂತೆ ಸಮಿತಿ ಸದಸ್ಯರ ಜೊತೆ ಸಭೆ ಜರುಗಿತು.
ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಬೆಂಗಳೂರು ಕೇಸ್ ಏರಿಕೆಯ ಬಗ್ಗೆ ಪ್ರಸ್ತಾಪವಾಯಿತು. ಬೆಂಗಳೂರಿನಲ್ಲಿ 500 ಸನಿಹಕ್ಕೆ ಕೇಸ್ಗಳು ದಾಖಲಾಗ್ತಿವೆ. ಇದರಲ್ಲಿ ಮಹಾದೇವಪುರ ವಲಯದಲ್ಲಿ ಹೆಚ್ಚು ಕಾಣಿಸಿಕೊಳ್ತಿವೆ. ಸದ್ಯಕ್ಕೆ ಕೊರೋನಾ ಸಾವಿನ ಕೇಸ್ ಇಲ್ಲ. ಮುಂದಿನ ನಾಲ್ಕು ವಾರದಲ್ಲಿ ಕೇಸ್ ಪೀಕ್ ಗೆ ಹೋಗಬಹುದು.ಮಕ್ಕಳ ಸೆರೋ ಸರ್ವೆ ಮಾಡಬೇಕು ಮತ್ತು ವಲಯವಾರು ಜೆನೆಮಿಕ್ ಸೀಕ್ವೆನ್ಸ್ ಗೆ ವೇಗ ನೀಡೋದ್ರರ ಬಗ್ಗೆ ಚರ್ಚೆ ಮಾಡಲಾಯಿತು. ಐಐಟಿ ಕಾನ್ಪುರ್ ವರದಿ ಪ್ರಕಾರ ಈ ಬಾರಿ ಕೋವಿಡ್ ಜೂನ್ ನಿಂದ ಆರಂಭವಾಗಿ ಜುಲೈ ಆಗಸ್ಟ್ ವರೆಗೂ ಇರಬಹುದೆಂದಿದ್ದಾರೆ. ಇದನ್ನ ನಾವು ಅಲೆಗಳು ಎಂದು ನಾವು ಹೇಳೋದಿಲ್ಲ ಎಂದು ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹತ್ತೇ ದಿನದಲ್ಲಿ ಕೊರೋನಾ 3 ಪಟ್ಟು ಹೆಚ್ಚಳ..!
ಕೋವಿಡ್ ತಾಂತ್ರಿಕ್ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷ ಡಾ ಸುದರ್ಶನ್ ಸಚಿವರಿಗೆ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಬಗ್ಗೆ ವಿವರಿಸಿದರು. ಸಭೆಯಲ್ಲಿ ಬೇರೆ ದೇಶಗಳಲ್ಲಿ ಅದರಲ್ಲೂ ಅಮೆರಿಕಾ, ಯುಕೆ, ಪೋರ್ಚುಗಲ್ ನಲ್ಲಿ ಸೋಂಕು ಹೆಚ್ಚಾಗಿ ಕಡಿಮೆ ಆಗಿದೆ. ಸಾವು ನೋವು ಸಂಭವಿಸಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. ಇದನ್ನೆಲ್ಲಾ ಆಧರಿಸಿ ಟಾಸ್ಕ್ ಫೋರ್ಸ್ ಮಾಹಿತಿ ನೀಡಿತು. ದೆಹಲಿ, ಮಹಾರಾಷ್ಟ್ರದಲ್ಲಿ ಏರಿಕೆ ಕಂಡಿದೆ. ಬೆಂಗಳೂರಲ್ಲೂ ಸ್ವಲ್ಪ ಹೆಚ್ಚಾಗಿದೆ. ಜಿನೋಮಿಕ್ ಸೀಕ್ವೆನ್ಸಿಂಗ್ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಶೇ. 10ರಷ್ಟು ಜಿನೋಮ್ ಸರ್ವೆಗೆ ಸೂಚಿಸಲಾಗಿದೆ. ಕೋವಿಡ್ ಹೆಚ್ಚಳವಾದ್ರೂ ತೀವ್ರತೆ ಇಲ್ಲ. ಆಸ್ಪತ್ರೆಗೆ ದಾಖಲಾಗ್ತಿಲ್ಲ. ಸಾವು ನೋವುಗಳಿಲ್ಲ ಹೀಗಿದ್ರೂ ಮೈಮರೆಯುವಂತಿಲ್ಲ. 60 ವರ್ಷದ ಮೇಲ್ಪಟ್ಟ ಇತರೆ ರೋಗಗಳಿಂದ ಬಳಲ್ತಿರೋರು ಕಡ್ಡಾಯವಾಗಿ ಬೂಸ್ಟರ್ ಡೋಸ್ ಪಡೀಬೇಕು. ಅದರಲ್ಕೂ 12 ವರ್ಷ ಮೇಲ್ಪಟ್ಟ ಮಕ್ಕಳು ಲಸಿಕೆ ಪಡೆಯಬೇಕು. ಮನೆ ಮನೆಗೆ ತೆರಳಿ ಲಸಿಕಾಕರಣದ ಅಭಿಯಾನ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್-19 ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಇಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಯಿತು. ಪ್ರಸ್ತುತ ಸ್ಥಿತಿಗತಿ, ಸೋಂಕು ಹರಡುವಿಕೆ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಮುಂತಾದ ವಿಷಯಗಳ ಕುರಿತು ಚರ್ಚಿಸಿಲಾಯಿತು. pic.twitter.com/F0J216wkIK
— Dr Sudhakar K (@mla_sudhakar)ಈಗಾಗಲೇ ಮಾಸ್ಕ್ ಹಾಕುವುದು ಕಡ್ಡಾಯ ಮಾಡಲಾಗಿದೆ. ಆದರೆ ಸಾರ್ವಜನಿಕರು ಮಾಸ್ಕ್ ಹಾಕದೆ ನಿರ್ಲಕ್ಷ ವಹಿಸಿದರೆ ಕೊರೊನಾ ಕೇಸ್ ಹೆಚ್ಚಾದರೆ ಮುಂದೆ ದಂಡ ಹಾಕುವ ಸಾಧ್ಯತೆ ಹೆಚ್ಚಿದೆ. ಆದರೆ ಸದ್ಯಕ್ಕಂತೂ ಟಫ್ ರೂಲ್ಸ್ ಇಲ್ಲಾ, ಮಾಸ್ಕ್ ಬಗ್ಗೆ ಮನವಿ ಮಾಡಿಯೇ ಜನರನ್ನ ತಲೂಪ್ಪುತ್ತೇವೆ, ಹೊರತಾಗಿ ದಂಡದಿಂದ ಅಲ್ಲಾ ಎಂದು ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಜನಸಾಮಾನ್ಯರಿಗೂ ಒಂದೇ ಕಾನೂನು, ಜನನಾಯಕರಿಗೂ ಒಂದೇ ಕಾನೂನು ಪ್ರತಿಭಟನೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಈ ನೆಲದ ಕಾನೂನನ್ನು ಧಿಕ್ಕರಿಸಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕರೆಯುವುದೇ ತಪ್ಪಾ? ಉನ್ನತ ಸ್ಥಾನದಲ್ಲಿ ಇದ್ದವರಿಗೆ ಒಂದು ಕಾನೂನು ಶ್ರೀಸಾಮಾನ್ಯನಿಗೆ ಮತ್ತೊಂದು ಕಾನೂನು ಇಲ್ಲ.ಜನಸಾಮಾನ್ಯರಿಗೂ ಒಂದೇ ಕಾನೂನು, ಜನನಾಯಕರಿಗೂ ಒಂದೇ ಕಾನೂನು.
ಈ ನೆಲದ ಕಾನೂನು ಗೌರವಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಮತ್ತು ಜವಾಬ್ದಾರಿ. ಇದನ್ನು ಉನ್ನತ ಸ್ಥಾನಗಳನ್ನು ಅಲಂಕರಿಸಿರುವವರು ಪಾಲಿಸುವ ಮೂಲಕ ಮೇಲ್ಪಂಕ್ತಿ ಹಾಕಿಕೊಡಬೇಕು. ಅದನ್ನು ಬಿಟ್ಟು ಅವರೇ ಕಾನೂನು ಉಲ್ಲಂಘನೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಹೆಸರಿನಲ್ಲಿ ಇಂದು ಕಾಂಗ್ರೆಸ್ ಮುಖಂಡರು ನಡೆಸಿರುವ ದಾಂಧಲೆಯಿಂದ ನಗರದಲ್ಲಿಸಾರ್ವಜನಿಕರ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗಿದೆ. ಫ್ರೀಡಂಪಾರ್ಕಿನ ಬಳಿ ಅನುಮತಿ ಪಡೆದು ಪ್ರತಿಭಟನೆ ನಡೆಸಬೇಕು ಎಂಬ ಕೋರ್ಟ್ ನಿರ್ದೇಶನವನ್ನೂ ಉಲ್ಲಂಘಿಸಿದ್ದಾರೆ. ಸರ್ಕಾರ ಇದನ್ನು ಸಹಿಸುವುದಿಲ್ಲ. ಕಾನೂನು ತನ್ನದೇ ಆದ ಕ್ರಮ ಜರುಗಿಸಲಿದೆ ಎಂದರು.