
ಹಾಸನ (ಅ.17): ರಾಜ್ಯದ ಮೂಲೆ ಮೂಲೆಗಳಿಂದ ಜನರು ಹಾಸನಾಂಬ ದರ್ಶನಕ್ಕೆ ಬರುತ್ತಿದ್ದಾರೆ. ಇಂದು 11 ಗಂಟೆಗಳ ಕಾಲ ದರ್ಶನ ನೀಡಲಾಗಿದ್ದು, ಅದರಲ್ಲಿ ಸುಮಾರು 3,10,000 ಜನ ದರ್ಶನ ಪಡೆದಿದ್ದಾರೆ ಎಂದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡಾ ಭಕ್ತರ ಸಂಖ್ಯೆಯ ಬಗ್ಗೆ ವಿವರವಾಗಿ ತಿಳಿಸಿದರು.
ಹಾಸನಾಂಬ ದೇವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಳೆದ ವರ್ಷ ಶುಕ್ರವಾರ 1,74,000 ಜನ ದರ್ಶನ ಪಡೆದಿದ್ದರು. ಈ ವರ್ಷದ ಎಂಟು ದಿನಗಳಲ್ಲಿ 16,99,000 ಜನ ದರ್ಶನ ಪಡೆದಿದ್ದಾರೆ. ಇನ್ನೂ ಐದು ದಿನ ಬಾಕಿ ಇದ್ದು, ಉಳಿದ ದಿನಗಳಲ್ಲಿ ಕನಿಷ್ಠ ಎರಡು ಲಕ್ಷ ಜನ ದರ್ಶನ ಮಾಡುವ ನಿರೀಕ್ಷೆ ಇದೆ. ಆದ್ದರಿಂದ ಈ ಬಾರಿ 27 ಲಕ್ಷಕ್ಕೂ ಹೆಚ್ಚು ಜನ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದ್ದಾರೆ.
ಹೆಚ್ಚು ಜನ ಸಂಖ್ಯೆಯಿಂದ ದರ್ಶನ ಸಮಯ 7, 8, 9 ಗಂಟೆಗಳವರೆಗೆ ತಲುಪಿದೆ. 300 ರೂಪಾಯಿ ಟಿಕೆಟ್‌ಗಳ ಮಾರಾಟವೂ ಹೆಚ್ಚಾಗಿದೆ. ಇಂದು ಒಂದೇ ದಿನ 27,000 ಟಿಕೆಟ್‌ಗಳು ಮಾರಾಟವಾಗಿವೆ. ನಿನ್ನೆ 30,900 ಟಿಕೆಟ್‌ಗಳು ಸೇಲ್ ಆಗಿವೆ. ಕಳೆದ ವರ್ಷ ಒಂದು ಶುಕ್ರವಾರ 11,000 ಟಿಕೆಟ್‌ಗಳು ಮಾತ್ರ ಮಾರಾಟವಾಗಿತ್ತು. ಒಟ್ಟು 1,40,000 ಟಿಕೆಟ್‌ಗಳು ಸೇಲ್ ಆಗಿವೆ. ಆರು ದಿನ ಬಾಕಿ ಇರುವಾಗಲೇ 1,97,000 ಟಿಕೆಟ್‌ಗಳು ಮಾರಾಟವಾಗಿವೆ. ಆನ್‌ಲೈನ್‌ನಲ್ಲಿ ಕಳೆದ ವರ್ಷ 2,500 ಟಿಕೆಟ್‌ಗಳು ಮಾತ್ರ ಸೇಲ್ ಆಗಿತ್ತು, ಆದರೆ ಈ ವರ್ಷ 48,000 ಟಿಕೆಟ್‌ಗಳು ಮಾರಾಟವಾಗಿವೆ ಎಂದರು.
ಭಕ್ತರಲ್ಲಿ ಕೃಷ್ಣಬೈರೇಗೌಡರ ಮನವಿ ಮಾಡಿದ್ದೇನು?
ಸಾಗರೋಪಾದಿಯಲ್ಲಿ ಜನರು ಬರುತ್ತಿದ್ದಾರೆ. ಆರಂಭದಲ್ಲಿ ತ್ವರಿತ ದರ್ಶನಕ್ಕೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು, ಆದರೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಬೇಸರ ಹೊರಹಾಕುತ್ತಿದ್ದಾರೆ. ಕಳೆದ ವರ್ಷ 15-20 ಗಂಟೆಗಳ ಸಮಯ ತೆಗೆದುಕೊಂಡಿದ್ದರೆ, ಈ ವರ್ಷ ಡಬಲ್ ಜನ ಸಂಖ್ಯೆಯಿಂದ 7-8 ಗಂಟೆಗಳಲ್ಲಿ ದರ್ಶನ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ 5-8 ಗಂಟೆಗಳ ಸಮಯ ಬೇಕು. ನಾಳೆ ಶನಿವಾರ ಹೆಚ್ಚು ಜನರು ಬರುವ ನಿರೀಕ್ಷೆ. ನಾನು ಭಕ್ತರಲ್ಲಿ ಮನವಿ ಮಾಡುತ್ತೇನೆ. ದರ್ಶನ ಪಡೆಯಲು ಸಮಯವನ್ನು ಹೆಚ್ಚಿಗೆ ತೆಗೆದುಕೊಳ್ಳುತ್ತದೆ. ಇದು ನಿಮಗೆ ಇಷ್ಟ ಆಗಲಿ ವಾಸ್ತವ ಅಷ್ಟೇ. ಸಮಯ ಹೆಚ್ಚಿಗೆ ತೆಗೆದುಕೊಂಡರು ಅದಕ್ಕೆ ತಯಾರಾಗಿ ಬರಬೇಕಾಗಿ ಮನವಿ ಮಾಡಿದ ಕೃಷ್ಣ ಬೈರೇಗೌಡ'
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ