ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌

By Web DeskFirst Published Dec 21, 2018, 8:19 AM IST
Highlights

ಸ್ಟಾರ್ಟಪ್‌ ಕಂಪನಿಗಳಿಗೆ ಸೌಲಭ್ಯ: ಗುಜರಾತ್‌ ಬೆಸ್ಟ್‌, ಕರ್ನಾಟಕ ಟಾಪ್‌| ಕೇಂದ್ರ ಕೈಗಾರಿಕಾ ನೀತಿ, ಉತ್ತೇಜನಾ ಇಲಾಖೆ ರ್ಯಾಂಕಿಂಗ್‌

ನವದೆಹಲಿ[ಡಿ.21]: ಹಲವಾರು ಸ್ಟಾರ್ಟಪ್‌ರ್‍ ಕಂಪನಿಗಳಿಗೆ ತವರೂರು ಆಗುವ ಮೂಲಕ ಕರ್ನಾಟಕದ ರಾಜಧಾನಿ, ದೇಶದ ಐಟಿ ಸಿಟಿ ಬೆಂಗಳೂರು ನವೋದ್ಯಮ ನಗರಿ ಎನಿಸಿಕೊಂಡಿರಬಹುದು. ಆದರೆ ಸ್ಟಾರ್ಟಪ್‌ ಕಂಪನಿಗಳಿಗೆ ಪೂರಕವಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಡುವುದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಅತ್ಯುತ್ತಮ ಸಾಧನೆಯ ಸ್ಥಾನ ಪಡೆದುಕೊಂಡಿದೆ. ಕರ್ನಾಟಕ ಉನ್ನತ ಸಾಧನೆಯ ರಾಜ್ಯವಾಗಿ ಹೊರಹೊಮ್ಮಿದೆ.

ಕೇಂದ್ರ ಕೈಗಾರಿಕಾ ನೀತಿ ಹಾಗೂ ಉತ್ತೇಜನಾ ಇಲಾಖೆ ಸಿದ್ಧಪಡಿಸಿರುವ ರ್ಯಾಂಕಿಂಗ್‌ ಪಟ್ಟಿಯಲ್ಲಿ ಈ ಮಾಹಿತಿ ಇದೆ. ಸ್ಟಾರ್ಟಪ್‌ ನೀತಿ, ಇನ್‌ಕ್ಯುಬೇಷನ್‌ ಹಬ್‌ಗಳು, ನಾವೀನ್ಯತೆ ಮತ್ತಿತ್ಯಾದಿ ವಿಭಾಗಗಳನ್ನು ಆಧರಿಸಿ, ಈ ರಾರ‍ಯಂಕಿಂಗ್‌ ಪಟ್ಟಿತಯಾರಿಸಲಾಗಿದೆ. ವಿಭಾಗವಾರು ಸಾಧನೆ ಆಧರಿಸಿ ಅತ್ಯುತ್ತಮ ಸಾಧಕ, ಉನ್ನತ ಸಾಧಕ, ನಾಯಕ, ಮಹತ್ವಾಕಾಂಕ್ಷಿ ನಾಯಕ, ಉದಯೋನ್ಮುಖ ನಾಯಕ ಹಾಗೂ ಆರಂಭಿಕ ಎಂಬ ರಾರ‍ಯಂಕ್‌ ಪಟ್ಟಿತಯಾರಿಸಲಾಗಿದೆ.

ಅತ್ಯುತ್ತಮ (ಬೆಸ್ಟ್‌) ಸಾಧಕ ವಿಭಾಗದಲ್ಲಿ ಗುಜರಾತ್‌ ಇದ್ದರೆ, ಉನ್ನತ (ಟಾಪ್‌) ವಿಭಾಗದಲ್ಲಿ 4 ರಾಜ್ಯಗಳಿವೆ. ಅದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದರೆ, ಕೇರಳ, ಒಡಿಶಾ ಹಾಗೂ ರಾಜಸ್ಥಾನ ನಂತರದ ಸ್ಥಾನದಲ್ಲಿವೆ.

click me!