ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾರು ಸಹ ಕುಟುಂಬ ಸದಸ್ಯರನ್ನ ಕರೆದುಕೊಂಡು ಬರುವಂತಿಲ್ಲ| ಕೋವಿಡ್ ವಾರಿಯರ್ 50 ಜನರು ಹಾಗೂ ಕೋವಿಡ್‌ನಿಂದ ಗುಣಮುಖರಾದರ ಪೈಕಿ 25 ಜನರಿಗೆ ಕಾರ್ಯಕ್ರಮಕ್ಕೆ ಅಹ್ವಾನ| ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು|
ಬೆಂಗಳೂರು(ಆ.06): ಕೊರೋನಾ ಸಂಘರ್ಷದ ಸಮಯದಲ್ಲಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಹೇಗಿ ನಡೆಸಬೇಕು ಎಂಬದುರ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾದ ಮುಖ್ಯಕಾರ್ಯದರ್ಶಿ ವಿಜಯ್ ಬಾಸ್ಕರ್ ಅವರು ರಾಜ್ಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ಭಾವಿ ಸಭೆ ನಡೆಸಿ ಕೆಲ ಸೂಚನೆಗಳನ್ನ ಅಧಿಕಾರಿಗಳಿಗೆ ನೀಡಿದ್ದಾರೆ.
ಸೂಚನೆಗಳು ಇಂತಿವೆ
undefined
*ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕೇವಲ 500 ಅಹ್ವಾನ ಪತ್ತಿಕೆಯನ್ನ ಮಾತ್ರ ಮುದ್ರಿಸಲು ಸೂಚನೆ
* ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಯಾರು ಸಹ ಕುಟುಂಬ ಸದಸ್ಯರನ್ನ ಕರೆದುಕೊಂಡು ಬರುವಂತಿಲ್ಲ
* ಕೋವಿಡ್ ವಾರಿಯರ್ 50 ಜನರು ಹಾಗೂ ಕೋವಿಡ್‌ನಿಂದ ಗುಣಮುಖರಾದರ ಪೈಕಿ 25 ಜನರಿಗೆ ಕಾರ್ಯಕ್ರಮಕ್ಕೆ ಅಹ್ವಾನ
* ಕಾರ್ಯಕ್ರಮಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
ಕೊರೋನಾ ನಡುವೆ ಸ್ವಾತಂತ್ರ್ಯದಿನ ಆಚರಣೆ ಈ ಬಾರಿ ಹೇಗಿರಲಿದೆ? ಮಾರ್ಗಸೂಚಿ
ಸಮಾರಂಭ ಹಾಗೂ ಪಥ ಸಂಚಲನದ ಸಿದ್ಧತೆ
*ಪ್ರತಿವರ್ಷ 36 ತುಕಡಿಗಳು ಕವಾಯತ್‌ನಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಕೋವಿಡ್-19ರ ಹಿನ್ನೆಲೆಯಲ್ಲಿ 4 ರಿಂದ 16 ತುಕಡಿಗಳನ್ನು ಮಾತ್ರ ಕವಾಯತ್‌ನಲ್ಲಿ ಭಾಗವಹಿಸಲು ಸೂಚನೆ. ಕಡ್ಡಾಯವಾಗಿ ಮಾಸ್ಕ್ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು.
* ಪ್ರತಿ ತುಕಡಿಯಲ್ಲಿ ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಲು ಸೂಚನೆ.
* ಪಥ ಸಂಚಲನದಲ್ಲಿ ಭಾಗಿವಹಿಸುವವರು ಒಂದು ದಿನ ಮುಂಚಿತವಾಗಿ ರ್ಯಾಪಿಡ್ ಟೆಸ್ಟ್ ಪರೀಕ್ಷೆಯನ್ನು ಮಾಡಿಸಬೇಕು
* ಪರೇಡ್‌ನಲ್ಲಿ ಸ್ಕೌಟ್ ಮತ್ತು ಎನ್‌ಸಿಸಿ ತುಕಡಿಗಳು ಇರಬೇಕಾಗಿಲ್ಲ
* ಈ ಬಾರಿ ಶಾಲಾ / ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವಿರುವುದಿಲ್ಲ
* ಸಾರ್ವಜನಿಕರು, ಮಕ್ಕಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸತಕ್ಕದಲ್ಲ
*ಕಾರ್ಯಕ್ರಮದ ನೇರ ಪ್ರಸಾರವನ್ನು ದೂರದರ್ಶನದಲ್ಲಿ ಹಾಗೂ ವೆಬ್‌ಸೈಟ್ ಮೂಲಕ ಪ್ರಸಾರ ಮಾಡಲು ಸೂಚನೆ
* ಮಾಣಿಕ್ ಶಾ ಪರೆಡ್ ಮೈದಾನದಲ್ಲಿ ಕಾರ್ಯಕ್ರಮ ನಡೆಯುವ ಮುನ್ನ ಸಂಪೂರ್ಣ ಸ್ಯಾನಿಟೈಸ್ ಮಾಡಬೇಕು
* ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರಿನಿಂಗ್ ಟೆಸ್ಟ್ ಮಾಡಲು ಸೂಚನೆ
* ಧ್ವಜಾರೋಹಣ ನಡೆಯುವ ಸ್ಥಳದಲ್ಲಿ ಅಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ನಿಯೋಜಿಸತಕ್ಕದ್ದು
* ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ, ನಾಡಗೀತೆ ಹಾಗೂ ರೈತ ಗೀತೆಗಳು ಮಾತ್ರ ಇರಲಿದೆ
* ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು
* ಮಳೆಯಿಂದ ಕಾರ್ಯಕ್ರಮ ಅಡ್ಡಿಯಾಗದಂತೆ ವ್ಯವಸ್ಥೆ ನೋಡಿಕೊಳ್ಳಬೇಕು
* ಕೋವಿಡ್ ಹಿನ್ನೆಲೆಯಲ್ಲಿ ದ್ವಜರೋಹಣ ಕಾರ್ಯಕ್ರಮಕ್ಕೆ ಅನುದಾನ ಸಹ ಕಡಿತ
* ಹಿಂದಿನ ಅವಧಿಯಲ್ಲಿ 50 ಲಕ್ಷ ಬಿಡುಗಡೆ ಮಾಡಲಾಗುತ್ತಿತ್ತು
* ಈ ಬಾರಿ ಸರಳವಾಗಿ ಆಚರಣೆ ಹಿನ್ನೆಲೆ 25 ಲಕ್ಷ ಅನುದಾನ ಬಿಡುಗಡೆ ಮಾಡಲು ಸೂಚನೆ