ಭಾರತ್‌ ಗ್ಯಾಸ್‌ ಗ್ರಾಹಕರಿಗೆ ಸಿಹಿಸುದ್ದಿ: ಇನ್ನು ಹಣವಿಲ್ಲದಿದ್ರೂ ಸಿಗುತ್ತೆ ಎಲ್‌ಪಿಜಿ ಸಿಲಿಂಡರ್! ಹೇಗೆ ಗೊತ್ತಾ?

Kannadaprabha News   | Kannada Prabha
Published : Sep 30, 2026, 06:11 AM IST
Bharat Gas customers

ಸಾರಾಂಶ

ಭಾರತ್‌ ಗ್ಯಾಸ್‌ ತನ್ನ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಮರುಪೂರಣಕ್ಕೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ಘೋಷಿಸಿದೆ. ಗ್ರಾಹಕರು 600 ರೂ. ವರೆಗೆ ಸಾಲ ಪಡೆದು, ಪ್ರತಿ ವಾರ 100 ರೂ. ಗಳಂತೆ ಇಎಂಐ ಮೂಲಕ ಹಣ ಪಾವತಿಸಬಹುದು. ವನ್‌ಗ್ರೋ ಫಿನ್‌ಟೆಕ್‌ ಸಹಯೋಗದೊಂದಿಗೆ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

ಗ್ರಾಹಕರಿಗೆ ಭಾರತ್‌ ಗ್ಯಾಸ್‌ ಸಿಹಿಸುದ್ದಿ

ನವದೆಹಲಿ (ಸೆ.30): ಎಲ್‌ಪಿಜಿ ಸಿಲಿಂಡರ್‌(LPG cylinder price) ಬೆಲೆ ಏರಿಕೆಯಿಂದ ಆತಂಕಕ್ಕೊಳಗಾಗಿರುವ ಅಥವಾ ಎಲ್‌ಪಿಜಿ ಬುಕಿಂಗ್(LPG Booking) ವೇಳೆ ಪೂರ್ಣ ಹಣ ಇರದೇ ಇರುವ ಗೃಹಬಳಕೆ ಗ್ರಾಹಕರಿಗೆ ಭಾರತ್‌ ಗ್ಯಾಸ್‌ ಸಿಹಿ ಸುದ್ದಿ ನೀಡಿದ್ದು, ಎಲ್‌ಪಿಜಿ ಸಿಲಿಂಡರ್ ಮರುಪೂರಣಕ್ಕೆ ಬಡ್ಡಿರಹಿತವಾಗಿ ಸಾಲ ಸೌಲಭ್ಯ ನೀಡುವುದಾಗಿ ಘೋಷಿಸಿದೆ.

ಅಂದರೆ ಇನ್ನು ಮುಂದೆ, ತಕ್ಷಣ ಹಣ ಕೊಟ್ಟು ಸಿಲಿಂಡರ್‌ ರೀಫಿಲ್‌ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಹಕರು ಇಎಂಐ ರೀತಿಯಲ್ಲಿ ಕಂತುಗಳಲ್ಲಿ ಹಣ ಪಾವತಿಸಬಹುದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 14.2 ಕೆಜಿ ತೂಕದ ಎಲ್‌ಪಿಜಿ ಬೆಲೆ 950 ರು.ನಷ್ಟಿದೆ.

ಭಾರತ್‌ ಗ್ಯಾಸ್‌, ‘ಸಿಲಿಂಡರ್‌ ಮರುಭರ್ತಿಗೆ ಬಡ್ಡಿರಹಿತ ಮೈಕ್ರೋ-ಸಾಲ ಸೌಲಭ್ಯ

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಭಾರತ್‌ ಗ್ಯಾಸ್‌, ‘ಸಿಲಿಂಡರ್‌ ಮರುಭರ್ತಿಗೆ ಬಡ್ಡಿರಹಿತ ಮೈಕ್ರೋ-ಸಾಲ ಸೌಲಭ್ಯವನ್ನು ಘೋಷಿಸುತ್ತಿದ್ದೇವೆ. ಈ ಸೌಲಭ್ಯದ ಮೂಲಕ, ಗ್ರಾಹಕರು ಎಲ್‌ಪಿಜಿ ರೀಫಿಲ್‌ಗಾಗಿ 600 ರು. ವರೆಗೆ ಬಡ್ಡಿರಹಿತ ಸಾಲವನ್ನು ಪಡೆಯಬಹುದು. 600 ರು. ಸಾಲಕ್ಕೆ, ತಲಾ 100 ರು.ನಂತೆ ಪ್ರತಿ ವಾರವೂ ಕಂತುಗಳಲ್ಲಿ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತದ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ. ಸರಳವಾಗಿ ಹೇಳುವುದಾದರೆ, ಪ್ರತಿ ವಾರ 100 ರು. ಇಎಂಐ ಕಟ್ಟಿ, ಮುಂಚಿತವಾಗಿ ಸಿಲಿಂಡರ್‌ ಪಡೆಯಬಹುದು’ ಎಂದು ತಿಳಿಸಿದೆ. ಸಮೀಪದ ಭಾರತ್‌ ಗ್ಯಾಸ್‌ ವಿತರಕರನ್ನು ಸಂಪರ್ಕಿಸಿ, ಅಗತ್ಯ ದಾಖಲೆ ನೀಡಿ ಈ ಸೌಲಭ್ಯ ಪಡೆಯಬಹುದಾಗಿದೆ.

ವನ್‌ಗ್ರೋ ಫಿನ್‌ಟೆಕ್‌ ಸಹಯೋಗದೊಂದಿಗೆ ಭಾರತ್‌ ಗ್ಯಾಸ್‌ ಈ ಸೌಲಭ್ಯ ಪಡೆದುಕೊಳ್ಳಬಹುದು. ಸಾಲದ ಅಗತ್ಯವಿದ್ದವರು, ತಮ್ಮ ಎಲ್‌ಪಿಜಿ ಏಜೆನ್ಸಿಯನ್ನು ಸಂಪರ್ಕಿಸಿದರೆ ಅವರು ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಶಾಕ್! ನಾಳೆಯ ಸ್ಪೆಷಲ್ ಟ್ರೇನ್ ಇಲ್ಲಿ ಸ್ಟಾಪ್ ಇಲ್ಲ! ಯಾರಿಗೆಲ್ಲ ತೊಂದರೆ?
Karnataka Rains: ಮುಂದಿನ 3 ಗಂಟೇಲಿ ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!