ಬೃಹತ್ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗುತ್ತಿದ್ದ ಐವರು ಪ್ರವಾಸಿಗರನ್ನ ರಕ್ಷಿಸಿದ ಲೈಫ್‌ ಗಾರ್ಡ್

By Ravi Janekal  |  First Published Sep 19, 2023, 6:31 AM IST

ಕಡಲತೀರದಲ್ಲಿ ಈಜಾಡುವಾಗ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ಲೈಫ್ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.


ಉಡುಪಿ (ಸೆ.19): ಕಡಲತೀರದಲ್ಲಿ ಈಜಾಡುವಾಗ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ಲೈಫ್ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.

ಬೆಂಗಳೂರು ನಿವಾಸಿಗಳಾದ ಗುಪ್ತಾ ಪ್ರಶಾಂತ್ ಚಂದ್ರಶೇಖರ್, ಋತುರಾಜ್, ರೀತು, ಆರುಷಿ ಬನ್ಸಾಲ್ ಎಂಬುವರನ್ನು ರಕ್ಷಿಸಲಾಗಿದೆ.

Tap to resize

Latest Videos

undefined

ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಯುವಕರು. ಸಮುದ್ರದಲ್ಲಿ ಅಲೆಗಳ ಅಬ್ಬರ ಎಚ್ಚಾಗಿದ್ದರೂ ಈಜಾಡಲು ಕಡಲಿಗೆ ಇಳಿದಿದ್ದರು. ಈಜಾಡುವ ವೇಳೆ ಅಪ್ಪಳಿಸಿರುವ ಬೃಹತ್ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದಾರೆ. ಈ ವೇಳೆ ಲೈಫ್‌ ಗಾರ್ಡ್ ಸಿಬ್ಬಂದಿ ನೋಡಿ ತಕ್ಷಣ ರಕ್ಷಣೆಗೆ ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಅಸ್ವಸ್ಥಗೊಂಡಿದ್ದ ಯುವಕರನ್ನು ರಕ್ಷಿಸಿ ಗೋಕರ್ಣದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈಗಾಗಲೇ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯದಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಗೋಕರ್ಣ ಪೊಲೀಸರು. 

 

ದಕ್ಷಿಣ ಭಾರತದ ಅದ್ಭುತ ತಾಣಗಳಿವು… ಮಿಸ್ ಮಾಡದೇ ಒಂದ್ಸಲನಾದ್ರೂ ಹೋಗಿ ಬನ್ನಿ

click me!