ಗಣೇಶೋತ್ಸವ ಬರೀ ಪಟಾಕಿ ಹೊಡೆದು, ಅನ್ನ ಪ್ರಸಾದ ವ್ಯವಸ್ಥೆ ಮಾಡಲು ಅಲ್ಲ. ಹಿಂದು ಸಂಸ್ಕೃತಿ ಉಳಿಸಿ, ಬೆಳೆಸಲು ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ತಾಳಿಕೋಟೆ (ಸೆ.28) : ಗಣೇಶೋತ್ಸವ ಬರೀ ಪಟಾಕಿ ಹೊಡೆದು, ಅನ್ನ ಪ್ರಸಾದ ವ್ಯವಸ್ಥೆ ಮಾಡಲು ಅಲ್ಲ. ಹಿಂದು ಸಂಸ್ಕೃತಿ ಉಳಿಸಿ, ಬೆಳೆಸಲು ಗಣೇಶೋತ್ಸವ ಆಚರಣೆ ಮಾಡಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಘಟನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ಮಂಗಳವಾರ ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ಸ್ಥಳಕ್ಕೆ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ವಿಸರ್ಜನೆಯ ಬೃಹತ್ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು ೧೮೯೩ರಲ್ಲಿ ಗಣೇಶ ಉತ್ಸವ ಪ್ರಾರಂಭವಾಯಿತು. ಇಂದಿಗೆ ೧೩೦ವರ್ಷ ಗತಿಸಿವೆ. ಸ್ವಾತಂತ್ರ್ಯ ಬಂದು ೭೭ ವರ್ಷವಾದರೂ ಅವತ್ತಿನ ಪರಿಸ್ಥಿತಿ ಇವತ್ತಿಗೂ ಇದೆ. ಈ ಕಾರಣದಿಂದ ಹಿಂದೂ ಸಮಾಜದಲ್ಲಿ ತಾಕತ್ತೆಂಬುವುದನ್ನು ತುಂಬಬೇಕಿದೆ. ಶತ್ರು ಯಾರು ಎಂಬುವುದುನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
ಪ್ರಚೋದನಾಕಾರಿ ಹೇಳಿಕೆ; ಮುತಾಲಿಕ್ ವಿರುದ್ಧ ಮತ್ತೊಂದು ದೂರು; ಕರ್ನಾಟಕದಿಂದಲೇ ಗಡಿಪಾರಿಗೆ ಆಗ್ರಹ!
ದೇಶದ್ರೋಹಿ ದೇಶ ಭಕ್ತರು ಯಾರು ಎಂಬುವುದನ್ನು ಕಲಿಸಿಕೊಡುವ ಪ್ರಕ್ರಿಯೇ ಮಾಡಬೇಕಿದೆ. ಮತಾಂತರ ಅನ್ನುವಂತಹ ಪ್ರಕ್ರಿಯೇ ಈ ದೇಶದಲ್ಲಿ ಇನ್ನೂವರೆಗೂ ನಡೆಯುತ್ತಾ ಇದೆ. ಗೋ ಮಾತಾ ಅಂತ ಹೇಳಿ ಅಂತಹ ಪೂಜೆಗೈಯುವಂತಹ ಮಾತೆಯನ್ನು ಕತ್ತರಿಸುವ ಕಾರ್ಯ ನಡೆಯುತ್ತಾ ಸಾಗಿದೆ. ಮಾತೃದೇವೋ ಭವ ಎಂದು ಹೇಳುತ್ತಾ ಸಾಗಿದ ತಿಳಿದಂತ ಹೆಣ್ಣುಮಕ್ಕಳಿಗೆ ನಾವು ಗೌರವಿಸುತ್ತಾ ಸಾಗಿದ್ದೇವೆ. ಅಂತಹ ಮಹಿಳೆಯರಿಗೆ ಲವ್ ಜಿಹಾದ್ ಮೂಲಕ ಮತಾಂತರ ಮಾಡುವುದು ನಡೆಯುತ್ತಾ ಸಾಗಿದೆ ಎಂದರು.
ಇನ್ನೋರ್ವ ತುಳಸಿಗೇರಿ ಫೌಂಡೇಶನ್ ಅಧ್ಯಕ್ಷ ಡಾ.ಬಾಬು ರಾಜೇಂದ್ರರಾಯ್ ಅವರು ಮಾತನಾಡಿ, ನಮ್ಮ ಸನಾತನ ಧರ್ಮದ ಉಳಿವಿನೆಡೆಗೆ ಎಲ್ಲರೂ ಒಗ್ಗೂಡಬೇಕಿದೆ. ನಮ್ಮ ಕೆಲವರು ಹಿಂದೂ ಸಮಾಜದಲ್ಲಿಯೇ ಹುಟ್ಟಿ ಹಿಂದೂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಂತವರಿಗೆ ಅಂಟಿಕೊಂಡಿರುವ ಡೆಂಘೀ, ಕಾಲರಾ, ರೋಗವನ್ನು ಗುಣಪಡಿಸಲು ಹಿಂದೂ ಧರ್ಮದ ಔಷಧ ಕೊಡಬೇಕಿದೆ ಎಂದರು.
ಸಾನ್ನಿದ್ಯ ವಹಿಸಿದ್ದ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವಾಧ್ಯಕ್ಷ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮಂಡಳಿಯ ಗೌರವ ಉಪಾಧ್ಯಕ್ಷ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಮಾತನಾಡಿದರು. ವೇದಿಕೆಯ ಮೇಲೆ ಶಿವಭವಾನಿ ಮಂದಿರದ ಅರ್ಚಕರು ಮಹಾ ಮಂಡಳಿಯ ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ ಹಾಗೂ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ನಮ್ಮನ್ನ ಕೆಣಕಿದರೆ ಮಸೀದಿಯಲ್ಲೂ ಗಣೇಶ ಪ್ರತಿಷ್ಠಾಪಿಸುತ್ತೇವೆ: ಪ್ರಮೋದ್ ಮುತಾಲಿಕ್ ಎಚ್ಚರಿಕೆ
ಚಿತ್ರ ವಿವರಣೆ : ತಾಳಿಕೋಟೆ : ಪಟ್ಟಣದ ಹಿಂದೂ ಮಹಾಗಣಪತಿ ಮಹಾ ಮಂಡಳಿಯ ವತಿಯಿಂದ ಆಯೋಜಿಸಲಾದ ಗಣೇಶ ಮೂರ್ತಿಯ ವಿಸರ್ಜನೆಯ ಪ್ರಯುಕ್ತ ಬೃಹತ್ ಶೋಭಾಯಾತ್ರೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಅವರು ಮಾತನಾಡಿದರು.