ಪ್ರಸಿದ್ಧ ಹಿಂದೂ ದೇವಾಲಯ: ಚಿದಂಬರಂ ದರ್ಶನ ಪಡೆದ ಜನಾರ್ದನ ರೆಡ್ಡಿ ಕುಟುಂಬ

By Suvarna NewsFirst Published Aug 17, 2020, 11:13 AM IST
Highlights

ತಮಿಳುನಾಡಿನ ಪ್ರಸಿದ್ಧ ಹಿಂದೂ ದೇವಾಲಯ ಚಿದಂಬರಂ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ| ಈ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡ ಜನಾರ್ದನ ರೆಡ್ಡಿ| ದೇವಾಲಯದ ವಿಶೇಷತೆ ಬಗ್ಗೆ ಹಂಚಿಕೊಂಡ ರೆಡ್ಡಿ| 

ಬೆಂಗಳೂರು(ಆ.17): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತರಾಗಿ ತಮಿಳುನಾಡಿನ ಪ್ರಸಿದ್ಧ ಹಿಂದೂ ದೇವಾಲಯ ಚಿದಂಬರಂ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದವನ್ನ ಪಡೆದುಕೊಂಡಿದ್ದಾರೆ. 
ಈ ಬಗ್ಗೆ ಸ್ವತಃ ಜನಾರ್ದನ ರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ತಮಿಳುನಾಡಿನ ಕಡಲೂರು ಎಂಬ ಜಿಲ್ಲೆಯಲ್ಲಿರುವ ಪರಮಾತ್ಮನ ಸ್ವರೂಪಿಯಾದ ಚಿದಂಬರಂ ದರ್ಶನ ಪಡೆದ ಹಾಗೂ ಈ ದೇವಾಲಯದ ವಿಶೇಷತೆಯನ್ನು ನಾನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನಿರಾಕಾರನಾದ ಭಗವಂತ ಶಿವನು ತನ್ನ ಹೆಂಡತಿಯಾದ ಶಿವಗಾಮಿ ಯೊಂದಿಗೆ ನಿರಂತರ ಸಂತೋಷವಾದ "ಆನಂದ ತಾಂಡವ" ನೃತ್ಯದಲ್ಲಿ ತೊಡಗಿದ್ದಾನೆ ಎಂಬುದು ಈ ದೇವಸ್ಥಾನದ ಇತಿಹಾಸವಾಗಿದೆ. ಚಿದಂಬರಂ ದೇವಾಲಯದ ಈ ಸ್ಥಳವನ್ನು ಒಂದು ಪರದೆಯಿಂದ ಮುಚ್ಚಲಾಗಿದೆ. ಇದನ್ನು ಎಳೆದಾಗ ಭಗವಂತನ ಸನ್ನಿಧಾನವನ್ನು ಸೂಚಿಸುವ ಚಿನ್ನದ "ಬಿಲ್ವ" ಎಲೆಗಳ ತೋರಣವನ್ನು ತೂಗುಬಿಟ್ಟಿರುವುದನ್ನು ನಾವು ಕಾಣಬಹದು. ಪ್ರತಿ ದಿನ ಪೂಜೆಗಳಲ್ಲಿ ಪ್ರಧಾನ ಅರ್ಚಕರೊಬ್ಬರು ಶಿವೋಹಂಭವ ಪರದೆಯನ್ನು ಸರಿಸುವುದರ ಮೂಲಕ ಅಂಧಕಾರವನ್ನು ಹೋಗಲಾಡಿಸಿ, ಭಗವಂತನ ಸಾನಿಧ್ಯವನ್ನು ಪ್ರಕಟಿಸುವುದನ್ನು ಸಾಂಕೇತಿಕವಾಗಿ ತೋರಿಸಲಾಗುತ್ತದೆ. 

ಕೊರೋನಾ ಗೆದ್ದ ಶ್ರೀರಾಮುಲು: ಅಸ್ಪತ್ರೆ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳಿದ್ದು ಜನಾರ್ದನ ರೆಡ್ಡಿ

ಪೌರಾಣಿಕ ಕಥೆಯಲ್ಲಿ ತಿಲೈ ಅರಣ್ಯಗಳಲ್ಲಿ ಮಂತ್ರ-ತಂತ್ರಗಳ ಬಗ್ಗೆ ಅತೀವವಾದ ನಂಬಿಕೆಯಿದ್ದ ಸಂತರ, ಋಷಿಗಳ ಗುಂಪೊಂದು ಇತ್ತು. ಇವರು ತಮ್ಮ ಮಂತ್ರಗಳ ಅಥವಾ ಯಕ್ಷಿಣಿ ವಿದ್ಯೆಯ ಮೂಲಕ ದೇವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂಬ ನಂಬಿಕೆಯನ್ನು ಹೊಂದಿದ್ದರು. ಆಗ ಭಗವಂತನಾದ ಶಿವನು ಒಬ್ಬ ಸರಳ ಭಿಕ್ಷುಕನಂತೆ ಭಿಕ್ಷಾಟನೆಯನ್ನು ಮಾಡುತ್ತಾ ಅರಣ್ಯದಲ್ಲಿ ವಿಹರಿಸುತ್ತಿದ್ದನು. ಆಗ ಭಗವಂತನಾದ ವಿಷ್ಣುವು ಮೋಹಿನಿ ರೂಪದಲ್ಲಿ ಆತನ ಹೆಂಡತಿಯಾಗಿ ಜೊತೆಯಲ್ಲಿದ್ದನು. ಆಗ ಅಲ್ಲಿದ್ದ ಋಷಿಗಳ ಪತ್ನಿಯರು ಸುರದ್ರೂಪಿಯಾದ ಭಿಕ್ಷುಕ ಮತ್ತು ಆತನ ಹೆಂಡತಿಯ ರೂಪ ಮತ್ತು ತೇಜಸ್ಸಿಗೆ ಮರುಳಾಗುತ್ತಾರೆ. ಇದನ್ನು ಕಂಡ ಋಷಿಗಳು ರೋಷಗೊಂಡು ತಮ್ಮ ಯಕ್ಷಿಣಿ ವಿದ್ಯಗಳ ಮೂಲಕ ಸರ್ಪಗಳನ್ನು ಆಹ್ವಾನ ಮಾಡುತ್ತಾರೆ. ಆದರೆ ಭಿಕ್ಷುಕ ವೇಶದಲ್ಲಿದ್ದ ಶಿವನು ಸರ್ಪಗಳನ್ನು ಎತ್ತಿ ತನ್ನ ಜಡೆ, ಕುತ್ತಿಗೆ ಮತ್ತು ಸೊಂಟದ ಸುತ್ತ ಆಭರಣಗಳನ್ನಾಗಿ ಧರಿಸುತ್ತಾನೆ. ಇದರಿಂದ ಮತ್ತಷ್ಟು ಅಕ್ರೋಶಗೊಂಡ ಋಷಿಗಳೂ ಒಂದು ಭಯಂಕರವಾದ ಹುಲಿಯನ್ನು ಆಹ್ವಾನ ಮಾಡುತ್ತಾರೆ. 

ಧಾರವಾಡ: ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಮೊಮ್ಮಗಳಿಗೆ ಕಲಘಟಗಿ ತೊಟ್ಟಿಲು..!

ಶಿವನು ಅದರ ಚರ್ಮವನ್ನು ಸುಲಿದು ತನ್ನ ಸೊಂಟಕ್ಕೆ ಹೊದಿಕೆಯಾಗಿ ಧರಿಸುತ್ತಾನೆ. ಇದರಿಂದ ಹತಾಶೆಗೊಂಡ ಋಷಿಗಳು ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ, ಮುಯಾಲಕನ್ ಎಂಬ ಅತ್ಯಂತ ಬಲಿಷ್ಟವಾದ ಭೂತವನ್ನು ಆಹ್ವಾನ ಮಾಡುತ್ತಾರೆ. ಮುಗುಳ್ನಗೆ ನಕ್ಕ ಭಗವಂತನು ಭೂತದ ಬೆನ್ನೇರಿ ಅವನನ್ನು ಅಚಲವಾಗಿರಿಸಿ, ಆನಂದ ತಾಂಡವವನ್ನಾಡುವುದರ ಮೂಲಕ ತನ್ನ ನಿಜ ಸ್ವರೂಪವನ್ನು ತೋರುತ್ತಾನೆ. ಆಗ ತಮ್ಮ ಎಲ್ಲಾ ಯಕ್ಷಿಣಿ ಮಂತ್ರ ಗಳಿಗಿಂತ ಮಿಗಿಲಾದವನು ಭಗವಂತನು ಎಂದು ಅರಿತು ಋಷಿಗಳು ಶಿವನಿಗೆ ಶರಣಾಗುತ್ತಾರೆ.

ಚಿದಂಬರಂ ದೇವಸ್ಥಾನದಲ್ಲಿ, ಶಿವನು, ನಟರಾಜನ ರೂಪದಲ್ಲಿ ನೆಲೆಸಿದ್ದಾನೆ. ನಟೇಶ ಅಥವಾ ನಟರಾಜ, ಶಿವನ ಪ್ರಮುಖ ಸ್ವರೂಪಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ. 
 

click me!