ಮೇ 21, 22 ರಂದು ನಡೆಯುವ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಎಸ್ಪಿ , ಎಡಿಸಿ, ಡಿಡಿಪಿಐ ಸಭೆ ನಡೆಸಿ ಪರೀಕ್ಷಾ ಅಕ್ರಮ ತಡೆಗಟ್ಟಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
ವರದಿ : ವರದರಾಜ್
ದಾವಣಗೆರೆ (ಮೇ 13): ರಾಜ್ಯದಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ (Recruitment Exam) ಸಾಲು ಸಾಲು ಅಕ್ರಮಗಳು ಬೆಳಕಿಗೆ ಬರುತ್ತಿವೆ. ಪಿಎಸ್ ಐ ಹಗರಣ (PSI Scam), ಅಧ್ಯಾಪಕರ ನೇಮಕಾತಿ ಹಗರಣದ ಬಗ್ಗೆ ರಾಜ್ಯದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಮುಂಬರುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಎಲ್ಲಾ ಜಿಲ್ಲಾಡಳಿತಗಳು ಹೈ ಅಲರ್ಟ್ ಆಗಿದ್ದು ದಾವಣಗೆರೆ ಜಿಲ್ಲಾಡಳಿತ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿದೆ.
ಮೇ 21, 22 ರಂದು ನಡೆಯುವ ಶಿಕ್ಷಕರ ನೇಮಕಾತಿ ಪರೀಕ್ಷೆಗೆ (Teachers Recruitment Exam) ಜಿಲ್ಲಾಡಳಿತ (district administration) ಹೈ ಅಲರ್ಟ್ ಆಗಿದೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಎಸ್ಪಿ , ಎಡಿಸಿ, ಡಿಡಿಪಿಐ ಸಭೆ ನಡೆಸಿ ಪರೀಕ್ಷಾ ಅಕ್ರಮ ತಡೆಗಟ್ಟಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
undefined
ಮೆಟಲ್ ಡಿಟೆಕ್ಟರ್ ಬಳಕೆ - ಬಾಡಿ ಸ್ಕ್ಯಾನ್ ಗೆ ನಿರ್ಧಾರ: ದಾವಣಗೆರೆ ನಗರದ ಮೂರು ಪರೀಕ್ಷಾ ಕೆಂದ್ರಗಳಲ್ಲಿ ಒಟ್ಟು 600 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.ಪರೀಕ್ಷಾ ಕೇಂದ್ರದ ಪ್ರವೇಶ ಪತ್ರ ಈಗಾಗಲೇ ಅಭ್ಯರ್ಥಿಗಳ ಕೈ ಸೇರಿದ್ದು ಪರೀಕ್ಷಾ ಕೇಂದ್ರದ ಪ್ರವೇಶವೇ ದೊಡ್ಡ ಟಾಸ್ಕ್ ಎಂಬಂತಾಗಿದೆ. ಪರೀಕ್ಷಾ ಅಭ್ಯರ್ಥಿಗಳು ಒಂದೂವರೆ ಗಂಟೆಗೆ ಮುಂಚಿತವಾಗಿ ಪರೀಕ್ಷಾ ಹಾಲ್ ಪ್ರವೇಶಿಸಿಬೇಕಿದೆ.ಪ್ರವೇಶಿಸುವ ಸಂದರ್ಭದಲ್ಲಿ ಬಾಡಿ ಸ್ಕ್ಯಾನ್ ಮಾಡಲಾಗುವುದು ಅದಕ್ಕೆ ಪೊಲೀಸ್ ಇಲಾಖೆ ವತಿಯಿಂದ ಮೆಟಲ್ ಡಿಟೆಕ್ಟರ್ ಸಾಧನಗಳ ವ್ಯವಸ್ಥೆ ಮಾಡಲಾಗಿದೆ.
ನೇಮಕಾತಿ ಪರೀಕ್ಷೆಯಲ್ಲಿ ಇ ಎನ್ ಟಿ ತಜ್ನ ವೈದ್ಯರ ಬಳಕೆ: ಈ ಬಾರಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಎನ್ ಟಿ ತಜ್ಞ ವೈದ್ಯರನ್ನು(ENT Specialist doctors) ಪರೀಕ್ಷೆಗೆ ನಿಯೋಜಿಸಲು ತೀರ್ಮಾನಿಸಲಾಗಿದೆ. ಕಿವಿ ಗಂಟಲು ಮೂಗು ತಜ್ಞ ರನ್ನು ಬಳಸಿಕೊಂಡು ಅಕ್ರಮ ತಡೆಗಟ್ಟಲು ಪ್ಲಾನ್ ಮಾಡಲಾಗಿದೆ. ಇತ್ತಿಚೆಗೆ ಕಿವಿಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಇಟ್ಟುಕೊಂಡು ಅಕ್ರಮ ಪ್ರಕರಣಗಳು ಸಾಬೀತಾದ ಹಿನ್ನಲೆಯಲ್ಲಿ ಕಿವಿಗಳನ್ನು ಚೆಕ್ ಮಾಡಲು ಇಎನ್ ಟಿ ತಜ್ಞರ ಬಳಕೆ ಮಾಡಲು ನಿರ್ಧರಿಸಲಾಗಿದೆ.ಒಟ್ಟು ಆರು ಇಎನ್ ಟಿ ತಜ್ಞ ರನ್ನು ನಿಯೋಜಿಸಲಾಗಿದ್ದು ಪರೀಕ್ಷಾ ಆರಂಭಕ್ಕು ಮುನ್ನ ಪರೀಕ್ಷಾ ಸಂದರ್ಭದಲ್ಲಿ ಅನುಮಾನ ಬಂದ ಅಭ್ಯರ್ಥಿಗಳ ಮೇಲೆ ಗಮನ ಹರಿಸಲಿದ್ದಾರೆ.
ಪರೀಕ್ಷಾ ಕೊಠಡಿಗಳಿಗೆ ಶೂ ನಿಷೇಧ: ಈ ಬಾರಿ ಅಭ್ಯರ್ಥಿಗಳಿಗೆ ಶೂ ಬಿಚ್ಚಿಸಿ ಬರಿಗಾಲಲ್ಲೇ ಪರೀಕ್ಷೆಗೆ ಅವಕಾಶ ನೀಡಲು ಚಿಂತನೆ ನಡೆಸಲಾಗಿದೆ. ಸಾಕ್ಸ್ ಶೂ ಗಳಲ್ಲು ಅಕ್ರಮ ಕಂಡು ಬಂದ ಹಿನ್ನಲೆಯಲ್ಲಿ ಶೂ ಗಳನ್ನು ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಬಿಟ್ಟು ಬರಿಗಾಲಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಾಗಿ ಜಿಲ್ಲಾಡಳಿತ ಚಿಂತಿಸಿದೆ.
ಪರೀಕ್ಷಾ ಮೇಲ್ವಿಚಾರಕರ ಮೇಲೆ ವಿಶೇಷ ನಿಗಾ: ಪರೀಕ್ಷಾ ಮೇಲ್ವಿಚಾರಕರು ಅಕ್ರಮದಲ್ಲಿ ಪಾಲುದಾರರಾದ ಹಿನ್ನಲೆಯಲ್ಲಿ ಅವರ ಮೊಬೈಲ್ ಎಲೆಕ್ಟ್ರಾನಿಕ್ ಡಿವೈಸ್, ಪೆನ್ನು ಪೇಪರ್ , ಪರ್ಸ್, ವಾಚ್, ಕನ್ನಡಕ, ಹಾಕುವ ಡ್ರಸ್ ಈ ಎಲ್ಲಾವುಗಳ ಮೇಲೆ ಸ್ಕ್ವಾಡ್ ನಿಗಾವಹಿಸಲಿದೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಲಾಡ್ಜಗಳ ಮೇಲೆಯು ಸಹ ನಿಗಾ: ನೇಮಕಾತಿ ಹಗರಣದಲ್ಲಿ ಲಾಡ್ಜ್ ಗಳಲ್ಲಿ ಕೂತು ಕಾಪಿಗೆ ಸಹಕಾರ ನೀಡುತ್ತಿದ್ದ ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲ ಲಾಡ್ಜ್ ಗಳಲ್ಲಿ ಯಾರು ಉಳಿದುಕೊಳ್ಳುತ್ತಾರೆ. ಅವರ ವಿಳಾಸ, ಎಲ್ಲಿಂದ ಬಂದವರು , ಎಲ್ಲಿಗೆ ಹೋಗುವರು ಉದ್ದೇಶ ಈ ಎಲ್ಲವುಗಳ ಬಗ್ಗೆ ಪೊಲೀಸರು ನಿಗಾವಹಿಸಲಿದ್ದಾರೆ.
ಚುನಾವಣೆ ವರ್ಷವಾಗಿರೋ ಕಾರಣ ವಿರೋಧ ಪಕ್ಷದವರು ಬೇಕಾದಂತೆ ಮಾತನಾಡ್ತಾರೆ!
ನೇಮಕಾತಿ ಕೋಚಿಂಗ್ ಸೆಂಟರ್ ಗಳ ಮೇಲೆ ನಿಗಾ: ನಗರಗಳಲ್ಲಿ ಎಷ್ಟು ಕೋಚಿಂಗ್ ಸೆಂಟರ್ ಗಳಿವೆ.ಅಲ್ಲಿರುವ ಸಬ್ಜಕ್ಟ್ ಎಕ್ಸಪರ್ಟ್ಸ್ ಗಳು ಕೋಚಿಂಗ್ ಸೆಂಟರ್ ಗಳ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಅಕ್ರಮಕ್ಕೆ ಸಾಥ್ ಕೊಡದಂತೆ ಎಚ್ಚರಿಸಿದೆ.
ಮರಳು ಅಡ್ಡೆ ಕಿಂಗ್ ಪಿನ್‌ಗೆ ಮತ್ತೊಂದು ಸಂಕಷ್ಟ, ಕೋಟಿ-ಕೋಟಿ ಹಣ ಹೋಗಿದ್ದು ಎಲ್ಲಿಗೆ?
ಪರೀಕ್ಷಾ ಕೇಂದ್ರದ ಸುತ್ತ ನಿಷೇದಾಜ್ಞೆ: ಪರೀಕ್ಷಾ ಕೇಂದ್ರದ ಸುತ್ತ 144 ನಿಷೇಧಾಜ್ನೆ ಜಾರಿಯಿದ್ದು 200 ಮೀಟರ್ ಅಂತರದಲ್ಲಿ ಹೊರಗಿನ ವ್ಯಕ್ತಿಗಳಿಗೆ ಯಾವುದೇ ಪ್ರವೇಶ ಇಲ್ಲ. ಎಂದಿಗಿಂತ ಈ ಬಾರಿ ಪರೀಕ್ಷಾ ಕೇಂದ್ರದ ಬಳಿ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು ಯಾವುದೇ ಅಕ್ರಮಕ್ಕೆ ಆಸ್ಪದವಿಲ್ಲದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.