* ಖರ್ಚಿಗೆ ಸರ್ಕಾರದಿಂದಲೇ 5000 ರು. ಹಣ
* ಮುಜರಾಯಿ ಇಲಾಖೆಯಿಂದ ಉಚಿತ ಕಾಶಿಯಾತ್ರೆ ಯೋಜನೆ
* ಒಂದು ವಾರದ ಈ ಯಾತ್ರೆಯಲ್ಲಿ ಕಾಶಿ, ಅಯೋಧ್ಯೆ, ಪ್ರಯಾಗ ದರ್ಶನಕ್ಕೆ ವ್ಯವಸ್ಥೆ
ಉಡುಪಿ(ಜೂ.20): ಮುಜರಾಯಿ ಇಲಾಖೆಯಿಂದ ಉಚಿತ ಕಾಶಿಯಾತ್ರೆ ಯೋಜನೆ ಹಾಕಿಕೊಂಡಿದ್ದು, ಆಗಸ್ವ್, ಶ್ರಾವಣ ಮಾಸದಲ್ಲಿ ಈ ಯಾತ್ರೆ ನಡೆಯಲಿದೆ ಎಂದು ರಾಜ್ಯ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಇಲ್ಲಿನ ಕೋಟೆ ಮಾರಿಯಮ್ಮ ದೇವಾಲಯದ ಜೀರ್ಣೋದ್ಧಾರದ ಮುಷ್ಟಿಕಾಣಿಕೆ ಸಮಾರಂಭದಲ್ಲಿ ಮಾತನಾಡಿ, ಬೆಂಗಳೂರಿನಿಂದ ಹೊರಡುವ ಈ ಯಾತ್ರೆಯಲ್ಲಿ 30 ಸಾವಿರ ಭಕ್ತರು ಪ್ರಯೋಜನ ಪಡೆಯಲಿದ್ದಾರೆ. ಒಂದು ವಾರದ ಈ ಯಾತ್ರೆಯಲ್ಲಿ ಕಾಶಿ, ಅಯೋಧ್ಯೆ, ಪ್ರಯಾಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಯಾತ್ರೆ ಕೈಗೊಳ್ಳುವವರ ಬ್ಯಾಂಕ್ ಖಾತೆಗೆ ಸರ್ಕಾರವೇ .5 ಸಾವಿರ ಜಮೆ ಕೂಡ ಮಾಡುತ್ತದೆ ಎಂದರು.
Temple Development: ಕರ್ನಾಟಕದ ದೇಗುಲ ಅಭಿವೃದ್ಧಿಗೆ ‘ದೈವ ಸಂಕಲ್ಪ’ ಯೋಜನೆ, ಏನು ವಿಶೇಷ?
ಈ ಯಾತ್ರೆಗಾಗಿ ವಿಶೇಷ ರೈಲನ್ನೂ ವ್ಯವಸ್ಥೆ ಮಾಡಲಾಗಿದ್ದು, ಈ ರೈಲಿನ ಬೋಗಿಗಳ ಮೇಲೆ ರಾಜ್ಯದ ಎ ಗ್ರೇಡ್ ದೇವಸ್ಥಾನಗಳ ಚಿತ್ರಗಳು ರಾರಾಜಿಸಲಿವೆ. ಈ ಮೂಲಕ ರಾಜ್ಯದ ಪ್ರಮುಖ ದೇವಸ್ಥಾನಗಳನ್ನು ದೇಶಕ್ಕೆ ಪರಿಚಯಿಸುವ, ಇತರ ರಾಜ್ಯಗಳ ಭಕ್ತರನ್ನು ಇಲ್ಲಿ ಸೆಳೆಯುವ ಪ್ರಯತ್ನ ನಡೆಸಲಾಗುವುದು ಎಂದು ಸಚಿವೆ ಹೇಳಿದರು.
ದ.ಕ. ಜಿಲ್ಲೆಯ ದೈವಸಂಕಲ್ಪ:
ರಾಜ್ಯ ಸರ್ಕಾರವು 1,140 ಕೋಟಿ ರು. ವೆಚ್ಚದಲ್ಲಿ ದೈವಸಂಕಲ್ಪ ಎಂಬ ಯೋಜನೆಯೊಂದನ್ನು ಜಾರಿಗೆ ತರುತ್ತಿದ್ದು, ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 9 ದೇವಸ್ಥಾನಗಳನ್ನು ಆಯ್ಕೆ ಮಾಡಲಾಗಿದೆ. ಈ ದೇವಸ್ಥಾನದ ಪರಿಸರದಲ್ಲಿ ಭಕ್ತರಿಗೆ ಅಗತ್ಯವಾಗಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ಕ್ಷಿಪ್ರವಾಗಿ ನಡೆಸಲು ಈ ಯೋಜನೆ ತಯಾಕರಿಸಲಾಗಿದೆ ಎಂದರು.