Jaladhare: ಜೆಡಿಎಸ್‌ ಜಲಧಾರೆ ಯಾತ್ರೆಗೆ ದೇವೇಗೌಡ ನಿಶಾನೆ

Published : Apr 13, 2022, 04:55 AM IST
Jaladhare: ಜೆಡಿಎಸ್‌ ಜಲಧಾರೆ ಯಾತ್ರೆಗೆ ದೇವೇಗೌಡ ನಿಶಾನೆ

ಸಾರಾಂಶ

*   15 ಗಂಗಾರಥಗಳಿಗೆ ರಾಮನಗರದಲ್ಲಿ ಚಾಲನೆ *   51 ನದಿಗಳಿಂದ ಏ.16ಕ್ಕೆ ನೀರು ಸಂಗ್ರಹ *   ಈ ಕಾರ್ಯ​ಕ್ರಮವನ್ನು ಚುನಾ​ವಣೆ ಉದ್ದೇ​ಶ​ದಿಂದ ನಡೆ​ಸು​ತ್ತಿಲ್ಲ   

ರಾಮ​ನ​ಗರ(ಏ.13): ಜನ​ರಿಗೆ ಕುಡಿ​ಯುವ ನೀರೊದ​ಗಿ​ಸ​ಲು ಹಾಗೂ ನೆನೆ​ಗು​ದಿಗೆ ಬಿದ್ದಿ​ರುವ ನೀರಾ​ವರಿ ಯೋಜ​ನೆ​ಗ​ಳನ್ನು ಪೂರ್ಣಗೊಳಿಸಲು ಜೆಡಿಎಸ್‌ನ(JDS) ಬದ್ಧತೆ ಪ್ರದರ್ಶಿಸಲು ಆಯೋ​ಜಿ​ಸಿ​ರುವ ಜನತಾ ಜಲ​ಧಾರೆ ಕಾರ್ಯ​ಕ್ರ​ಮದ ಭಾಗ​ವಾಗಿ ಪ್ರಮುಖ ನದಿ​ಗ​ಳಿಂದ ಜಲ​ ಸಂಗ್ರ​ಹಿಸುವ 15 ಗಂಗಾ​ರ​ಥ​ಗ​ಳಿಗೆ ಮಾಜಿ ಪ್ರಧಾನಿ ಎಚ್‌.ಡಿ.​ದೇ​ವೇ​ಗೌಡ(HD Devegowda) ಮಂಗ​ಳ​ವಾ​ರ ಹಸಿರು ನಿಶಾನೆ ತೋರಿ​ದರು. ಈ ಗಂಗಾ​ರ​ಥ​ಗಳು ಏ.16ರಂದು ರಾಜ್ಯದ 15 ಕಡೆ ಜಲ​ ಸಂಗ್ರ​ಹಿ​ಸುವ ಮೂಲಕ ಜಲ​ಧಾರೆ ಕಾರ್ಯ​ಕ್ರ​ಮಕ್ಕೆ ಅಧಿ​ಕೃತ ಚಾಲನೆ ಸಿಗ​ಲಿ​ದೆ.

ನಗ​ರದ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ದೇವೇ​ಗೌ​ಡ ಅವರು ಸಹ​ಸ್ರಾರು ಮಂದಿ ಸಮ್ಮು​ಖ​ದಲ್ಲಿ ಗಂಗಾ​ರಥಗಳ ​(​ವಾ​ಹ​ನ​ಗ​ಳಿ​ಗೆ) ಸಂಚಾ​ರ​ಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮೈಸೂ​ರಿನ ಚಾಮುಂಡೇ​ಶ್ವರಿ ದೇವಾ​ಲ​ಯ​ಕ್ಕೆ ತೆರಳಿ ದೇವಿಯ ದರ್ಶನ ಪಡೆದ ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.​ಕು​ಮಾ​ರ​ಸ್ವಾ​ಮಿ(HD Kumaraswamy), ಅಲ್ಲಿ ಗಂಗಾ​ರ​ಥ​ವೊಂದಕ್ಕೆ ಪೂಜೆ ಸಲ್ಲಿ​ಸಿ​ದ​ರು. ನಂತರ ರಾಮ​ನ​ಗ​ರಕ್ಕೆ ಆಗ​ಮಿ​ಸಿ ದೇವೇ​ಗೌ​ಡ ಮತ್ತಿ​ತ​ರರ ಜತೆ​ಗೂ​ಡಿ ರಾಮ​ನ​ಗ​ರದ ಶಕ್ತಿ ದೇವತೆ ಚಾಮುಂಡೇ​ಶ್ವರಿ ದೇಗು​ಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿ​ಸಿ​ದರು. ನಂತರ ಇಲ್ಲೂ ರಥ​ಗ​ಳಿ​ಗೂ ಪೂಜೆ ನೆರ​ವೇ​ರಿ​ಸಿ​ದ​ರು.

Karnataka Politics: ಹೊರಟ್ಟಿ ಬಿಜೆಪಿ ಸೇರ್ಪಡೆ: ಬೊಮ್ಮಾಯಿ, ಕಟೀಲ್‌ ಹೆಗಲಿಗೆ ಹಾಕಿದ ಜೋಶಿ

ಬಳಿಕ ಕುಮಾರಸ್ವಾಮಿ ಅವರು ಚರ್ಚ್‌ ಹಾಗೂ ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಜಿಲ್ಲಾ ಕ್ರೀಡಾಂಗ​ಣ​ದಲ್ಲಿ ಕಾರ್ಯ​ಕ್ರ​ಮ​ದ ವೇದಿಕೆಗೆ ಆಗ​ಮಿಸಿ ದೇವೇ​ಗೌಡ​ರೊಂದಿಗೆ ಗಂಗಾ​ರ​ಥ​ಗ​ಳ ಸಂಚಾ​ರಕ್ಕೆ ಚಾಲನೆ ನೀಡ​ಲಾ​ಯಿ​ತು.

ಜೆಡಿ​ಎಸ್‌ ಬದ್ಧ​ತೆಯ ಪ್ರತೀಕ:

ಈ ವೇಳೆ ಮಾತ​ನಾ​ಡಿದ ಮಾಜಿ ಪ್ರಧಾನಿ ದೇವೇ​ಗೌ​ಡ, ರಾಮ​ನ​ಗರ(Ramanagara) ಪುಣ್ಯ ಕ್ಷೇತ್ರ. ನನಗೆ ರಾಜ​ಕೀ​ಯ​ವಾಗಿ ಪುನರ್‌ಜನ್ಮ ನೀಡಿದ ಕ್ಷೇತ್ರ. ಈ ಕ್ಷೇತ್ರ​ದಲ್ಲಿ ಚಾಲನೆ ನೀಡಿ​ದರೆ ಜನತಾ ಜಲ​ಧಾರೆ(Jaladhare) ಕಾರ್ಯ​ಕ್ರ​ಮಕ್ಕೆ ಯಶಸ್ಸು ಸಿಗಲಿದೆ ಎಂಬ ನಂಬಿ​ಕೆ​ಯಿದೆ ಎಂದರು.

ಈ ಕಾರ್ಯ​ಕ್ರಮವನ್ನು ಚುನಾ​ವಣೆ(Election) ಉದ್ದೇ​ಶ​ದಿಂದ ನಡೆ​ಸು​ತ್ತಿಲ್ಲ. ನೀರಾ​ವರಿ ವಿಚಾ​ರ​ದಲ್ಲಿ ರಾಷ್ಟ್ರೀಯ ಪಕ್ಷ​ಗಳು ಕರ್ನಾ​ಟ​ಕಕ್ಕೆ ಮಾಡಿದ ದ್ರೋಹ ಹಾಗೂ ​ನೀ​ರಾ​ವರಿ ಯೋಜ​ನೆ​ಗಳನ್ನು(Irrigation Projects) ಸಾಕಾ​ರ​ಗೊ​ಳಿಸಲು ಜೆಡಿ​ಎಸ್‌ ಹೊಂದಿ​ರುವ ಬದ್ಧತೆಯನ್ನು ಜನ​ರಿಗೆ ತಿಳಿ​ಸು​ವು​ದೇ ಈ ಕಾರ್ಯ​ಕ್ರಮದ ಉದ್ದೇ​ಶ​ವಾ​ಗಿದೆ ಎಂದು ಹೇಳಿ​ದರು.

16ರಂದು ಜಲ ಸಂಗ್ರ​ಹ:

ಏ.16ರಂದು ಗಂಗಾ​ರ​ಥ​ಗ​ಳು ನಾಡಿನ 15 ಪ್ರಮುಖ ನದಿ​ಗಳು ಹಾಗೂ 180 ತಾಲೂ​ಕು​ಗ​ಳಲ್ಲಿರುವ ಸಣ್ಣ ನದಿ​ಗಳು ಸೇರಿದಂತೆ ಒಟ್ಟು 94 ಸ್ಥಳ​ಗ​ಳಿಂದ 51 ನದಿ​ಗಳ ನೀರು ಸಂಗ್ರಹ ಮಾಡ​ಲಿವೆ. ಕಲ​ಶ​ಗ​ಳಲ್ಲಿ ನೀರು ಸಂಗ್ರ​ಹಿಸಿಕೊಂಡು 15 ಗಂಗಾರಥ​ಗ​ಳು ಮೇ 8ರಂದು ಬೆಂಗ​ಳೂ​ರಿಗೆ ವಾಪ​ಸ್ಸಾಗ​ಲಿವೆ. ಅಲ್ಲಿ ನಾಲ್ಕಾರು ಲಕ್ಷ ಜನ​ರನ್ನು ಸೇರಿಸಿ ಕಾರ್ಯ​ಕ್ರಮ ನಡೆ​ಸಿದ ನಂತರ ಬೆಂಗ​ಳೂ​ರಿನ ಜೆಡಿ​ಎಸ್‌ ಕಚೇ​ರಿ​ಯಲ್ಲಿ ಮುಂದಿನ ಚುನಾ​ವಣೆವರೆಗೂ ಈ ಕಲ​ಶ​ಗ​ಳಿಗೆ ಪೂಜೆ ನಡೆ​ಯ​ಲಿದೆ ಎಂದು ಮಾಹಿತಿ ನೀಡಿ​ದ​ರು.

Religious Controversy: ಬೆಲೆ ಏರಿಕೆ ಮರೆಮಾಚಲು ಧರ್ಮ ವಿವಾದ ಸೃಷ್ಟಿ: ಕುಮಾರಸ್ವಾಮಿ

ಈ ದೇವೇ​ಗೌ​ಡನಿಗೆ ನ​ಡೆ​ಯಲು ಆಗಲ್ಲ, ಏನು ಮಾಡ​ಬಲ್ಲ ಎಂದು ಕೆಲ​ವ​ರು ಭಾವಿ​ಸ​ಬ​ಹುದು. ನನಗೆ ಮಂಡಿ ನೋವೂ ಇರ​ಬ​ಹುದು. ಆದರೆ, ತಲೆ​ಯೊ​ಳಗೆ ಯಾವ ನೋವೂ ಇಲ್ಲ. ಯಾವ ವಿಷ​ಯದ ಬಗ್ಗೆ ಬೇಕಾ​ದರೂ ಚರ್ಚೆ ಮಾಡ​ಬಲ್ಲೆ ಎಂದರು.

ಏನಿದು ಜಲಧಾರೆ?

- ಕುಡಿವ ನೀರಿನ ಯೋಜನೆ ಹಾಗೂ ನೀರಾವರಿ ಯೋಜನೆಗಳಿಗೆ ಜೆಡಿಎಸ್‌ನ ಬದ್ಧತೆ ಪ್ರದರ್ಶಿಸುವ ಕಾರ‍್ಯಕ್ರಮ
- 15 ವಾಹನಗಳಲ್ಲಿ ತೆರಳಿ 51 ನದಿಗಳಿಂದ ನೀರು ಸಂಗ್ರಹಿಸಿ ಮುಂದಿನ ಚುನಾವಣೆವರೆಗೂ ಕಲಶಗಳಿಗೆ ಪೂಜೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ