ನಾನು ಮತ್ತೊಮ್ಮೆ ಸಿಎಂ ಆಗಬೇಕೋ, ಬೇಡವೋ ಚೌಡೇಶ್ವರಿ ದೇವಿ ಇಚ್ಛೆ: ಎಚ್‌ಡಿಕೆ

By Ravi Janekal  |  First Published Oct 24, 2023, 9:50 PM IST

ಡಿಸಿಎಂ ಡಿಕೆ ಶಿವಕುಮಾರ ರಾಮನಗರ ಜಿಲ್ಲೆನನ್ನು ಬೆಂಗಳೂರಿಗೆ ವಿಲೀನಗೊಳಿಸುವ ವಿಚಾರಕ್ಕೆ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದು, ಏನ್ ಮಾಡ್ಬೇಕು ಅಂತಾ ರಾಮನಗರದ ಚಾಮುಂಡೇಶ್ವರಿ ದೇವಿಯೇ ನಿರ್ಧಾರ ಮಾಡ್ತಾಳೆ. ಎಂದರು.


ತುಮಕೂರು (ಅ.24): ಇಂದು ಕುಣಿಗಲ್ ತಾಲೂಕಿನ ಹಂಗರನಹಳ್ಳಿ ವಿದ್ಯಾ ಚೌಡೇಶ್ವರಿ ಸನ್ನಿಧಿಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿದರು

ದೇವಿ ದರ್ಶನ ಪಡೆದು ಸಂಪೂರ್ಣಾಹುತಿ ಯಾಗದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ನನ್ನ ಆರೋಗ್ಯ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಈ ದೇವಿಯಲ್ಲಿ ಹರಕೆ ಹೊತ್ತಿದ್ದರು. ಹೀಗಾಗಿ ಇವತ್ತು ಬಂದು ಆ ಹರಕೆ ತೀರಿಸಿದ್ದೇನೆ. ಜೊತೆಗೆ ನಾಡಿನ ಜನತೆಗೆ ಒಳ್ಳೆದಾಗಲಿ. ನನ್ನ ತಂದೆ ತಾಯಿಗಳ ಆರೋಗ್ಯ ಸ್ಥಿರವಾಗಿರಲಿ. ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲ್ಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಆಗೋದು ಬಿಡೋದು ಆ ತಾಯಿ ಚೌಡೇಶ್ವರಿ ಇಚ್ಛೆ ಎಂದರು.

Latest Videos

undefined

ರಾಮನಗರ ಜಿಲ್ಲೆ ಬೆಂಗಳೂರು ಜಿಲ್ಲೆಯೊಂದಿಗೆ ವಿಲೀನಗೊಳಿಸುವ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಏನ್ ಮಾಡ್ಬೇಕು ಅಂತಾ ರಾಮನಗರದ ಚಾಮುಂಡೇಶ್ವರಿ ದೇವಿಯೇ ನಿರ್ಧಾರ ಮಾಡ್ತಾಳೆ. ಯಾವ ಕಾರಣಕ್ಕೋಸ್ಕರ ರಾಮನಗರ ಜಿಲ್ಲೆಯಾಗಿದೆ. ಜಿಲ್ಲೆಯಾದ ನಂತರ ರಾಮನಗರ ಯಾವ ರೀತಿ ಅಭಿವೃದ್ಧಿ ಆಗಿದೆ ಅನ್ನೋದು ಜನತೆಗೆ ಗೊತ್ತಿದೆ. ನಾನು ನನ್ನ ಹೆಸರು ಮಾಡಿಕೊಳ್ಳಲು ಜಿಲ್ಲೆ ಮಾಡಿಲ್ಲ. ಕೆಂಗಲ್ ಹನುಮಂತಯ್ಯ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾರೆ. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ರಾಮನಗರ ಮಣ್ಣಿನ ಶಕ್ತಿಯನ್ನ ಹಾಳು ಮಾಡಬೇಕು ಅನ್ನೋದು ಈ ವ್ಯಕ್ತಿಗಳ ಹುನ್ನಾರ. ರಾಮನಗರದಲ್ಲಿ ದೇವೇಗೌಡರು ಪ್ರಥಮ ಬಾರಿ ರಾಜಕೀಯ ಪ್ರವೇಶ ಮಾಡಿದಾಗ, ಆ ಜಿಲ್ಲೆಯಲ್ಲಿದ್ದ ಬಡತನ, ಈಗಿನ ಸುಧಾರಣೆ ಎಷ್ಟು ಅಂತಾ ಜನರಿಗೆ ಗೊತ್ತಿದೆ. ಬೆಂಗಳೂರಿನಲ್ಲಿ ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧದ ನೆರಳು ರಾಮನಗರಕ್ಕೆ ಬೀಳುತ್ತೆ ಅಂತಾ ಸ್ಥಳದಲ್ಲಿ ವಿದ್ಯುತ್ ಶಕ್ತಿ, ರಸ್ತೆಗಳಿರಲಿಲ್ಲ. ಈಗ ಸಾಕಷ್ಟು ಅಭಿವೃದ್ಧಿ ಆಗಿದೆ. ಅದೆಲ್ಲ ದೇವೇಗೌಡರ ಕುಟುಂಬದ ಕೊಡುಗೆ ಇವತ್ತು ಪುನಃ ಬೆಂಗಳೂರು ನಗರಕ್ಕೆ ತೆಗೆದುಕೊಂಡು ಹೋಗುತ್ತಿರೋದು ಯಾವ ಕಾರಣಕ್ಕೆ? ರಾಮನಗರವನ್ನೂ ಸೇರಿಸಿಕೊಂಡ್ರೆ ಸ್ಕ್ವೇರ್ ಫೀಟ್ ಗೆ 75-80 ಫಿಕ್ಸ್ ಮಾಡಿಕೊಂಡಿದ್ದನ್ನ, ಇಲ್ಲಿಗೂ ಅಪ್ಲೈ ಮಾಡ್ಬೇಕು ಅನ್ನೋದು ಅವರ ಹುನ್ನಾರ ಎಂದರು.

ಡಿಕೆಶಿ ತಮ್ಮ ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕಾಗಿ ಕನಕಪುರವನ್ನು ಬೆಂಗಳೂರಿಗೆ ಸೇರಿಸ್ತಾರೆ: ಎಚ್‌ಡಿಕೆ ಆರೋಪ

 ರಿಯಲ್ ಎಸ್ಟೇಟ್ ಉದ್ದೇಶದಿಂದಲೇ ಬೆಂಗಳೂರಿಗೆ ಸೇರಿಸಲು ಹುನ್ನಾರ ನಡೆದಿದೆ. ರಾಮನಗರದ ಕಲ್ಲನ್ನ ದೇಶ ವಿದೇಶಗಳಿಗೆ ಸಾಗಿಸಿ ಗುಡ್ಡಗಳನ್ನೆಲ್ಲ ನುಂಗಿ ನೀರು ಕುಡಿದುದ್ದಾಯ್ತು. ಇಲ್ಲಿಯ ಭೂಮಿಯ ಬೆಲೆ ಏರಿಸ್ತೀನಿ ಅಂತಾ ಹೇಳ್ತಾರೆ. ಅದು ಇವರು ಉದ್ದಾರ ಆಗೋಕೋ ಅಥವಾ ರೈತರು ಉದ್ದಾರ ಆಗೋಕೋ? ರಾಮನಗರ ಜಿಲ್ಲೆಗೆ ನಾನೇನ್ ಆಸ್ತಿ ಮಾಡೋಕೆ ಹೋದ್ನಾ? ಜನಗಳ ಪ್ರೀತಿ ಅದು. ಜನಗಳ ಬಡತನ ಕಳೆದು, ಅಭಿವೃದ್ಧಿ ಮಾಡಲು ಜಿಲ್ಲೆಯನ್ನ ರಚನೆ ಮಾಡಿದ್ದೆ. ಜಿಲ್ಲೆ ರಚನೆ ಆದ್ಮೇಲೆ ಎಷ್ಟು ಅಭಿವೃದ್ಧಿ ಆಗಿದೆ ಅನ್ನೋದು ಕಣ್ಣಿಗೆ ಕಾಣುತ್ತದೆ. ಬೆಂಗಳೂರಿನೊಂದಿಗೆ ಮರುವಿಲೀನಗೊಳಿಸುವ ಈ ತೀರ್ಮಾನಕ್ಕೆ, ಲೋಕಸಭಾ ಚುನಾವಣೆಯಲ್ಲಿ ರಾಮನಗರ ಜನತೆ ತಕ್ಕ ಉತ್ತರ ಕೊಡುತ್ತಾರೆ. ರಾಮನಗರ, ಚನ್ನಪಟ್ಟಣದಿಂದ ದಿನನಿತ್ಯ ಬೆಂಗಳೂರಿಗೆ ಬಂದು ಸರ್ಕಾರಿ ಕೆಲಸಗಳನ್ನ ಮಾಡಿಸಿಕೊಳ್ಳಲು ಆಗ್ತಿರಲಿಲ್ಲ. ಅದಕ್ಕೆ ಜಿಲ್ಲೆಯನ್ನ ಮಾಡಿದ್ದು, ಈಗ ವಿಲೀನಗೊಳಿಸುತ್ತೇವೆ ಅಂದಿರುವ ಅವರ ದುರ್ಬುದ್ದಿಗೆ ಜನರೇ ತಕ್ಕ ಉತ್ತರ ಕೊಡ್ತಾರೆ ಎಂದರು.

Big Breaking: ರಾಮನಗರ ಜಿಲ್ಲೆಯನ್ನು ಪುನಃ ಬೆಂಗಳೂರಿಗೆ ಸೇರಿಸಲು ನಿರ್ಧಾರ

ಪಂಚರಾಜ್ಯ ಚುನಾವಣೆ ಬಳಿಕ ದೆಹಲಿಗೆ ಹೋಗುತ್ತೇನೆ. ನಾನು ಮುಖ್ಯಮಂತ್ರಿ ಆಗ್ಬೇಕು ಅಂತಾ ಅಭಿಮಾನಿಗಳು ಆಸೆ ಪಟ್ಟಿರೋದು ನನಗೆ ಗೊತ್ತಿಲ್ಲ. ಆದರೆ  ನಾನು ಸರ್ಕಾರ ಮಾಡ್ಬೇಕು ಅಂತಾ ಯಾವುದೇ ದ್ರುವೀಕರಣ ರಾಜಕೀಯ ಮಾಡ್ತಿಲ್ಲ. ಕಾಂಗ್ರೆಸ್ ನವ್ರು ತಮ್ಮಲ್ಲಿನ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ. ನಮ್ಮ ಶಾಸಕರನ್ನ ಸೆಳೆತೀವಿ ಅಂತಾರೆ. ಬನ್ನಿ ಬನ್ನಿ ಅಂತಾ ನಮ್ಮ ಶಾಸಕರ ಕೈಕಾಲು ಹಿಡೀತಾ ಇದ್ದಾರೆ. ಮೊದಲು ಅವರ ಮನೆ ಸರಿ ಮಾಡಿಕೊಳ್ಳಲಿ ಎಂದರು.

ಸಂಜೆಯಾದ್ರೆ ಸಿಎಂ ಸಿದ್ದರಾಮಯ್ಯ ಎಲ್ಲೆಲ್ಲಿ ಹೋಗ್ತಾರೆ; ನಮಗೆ ಗೊತ್ತಿಲ್ವಾ?

ಪರಮೇಶ್ವರ್ ಅವರಿಗೆ ಒಂದು ಮಾತು ಹೇಳೋಕೆ ಇಷ್ಟಪಡ್ತೀನಿ. ನಾನು ವೈಯಕ್ತಿಕ ವಿಚಾರವನ್ನು ಹೇಳೋಕೆ ಹೋಗಲ್ಲ. ಅವರ ಮುಖ್ಯಮಂತ್ರಿಗಳು ದಿನಾಲೂ ವೆಸ್ಟ್ ಎಂಡ್ ಹೋಟೆಲ್ ನ ಭಜನೆ ಮಾಡ್ತಾರೆ. ಆ ಭಜನೆಯನ್ನ ಮೊದಲು ನಿಲ್ಲಿಸೋದಕ್ಕೆ ಹೇಳಿ. ವೆಸ್ಟ್ ಎಂಡ್ ನಲ್ಲಿ ನಾನು ಬೇರೆ ವ್ಯವಹಾರ ನಡೆಸೋಕೆ ಹೋಗಿದ್ನಾ? ಬೇಕಿದ್ರೆ ಅವರು ಅದನ್ನ ತನಿಖೆ ಮಾಡಲಿ. ಪ್ರತಿ ರೂಮ್ ಮುಂದೆ ಸಿಸಿಟಿವಿ ಕ್ಯಾಮೆರಾ ಗಳು ಇರ್ತಾವಲ್ವಾ? ಸಿಎಂ ಸಿದ್ದರಾಮಯ್ಯ ಸಂಜೆ 6 ಗಂಟೆ ಮೇಲೆ ಎಲ್ಲೆಲ್ಲಿ ಹೋಗ್ತಿದ್ರು ನಮಗೆ ಗೊತ್ತಿಲ್ವ, ನಾವು ಚರ್ಚೆ ಮಾಡ್ತೀವಾ? ಈಗಲೂ ಎಲ್ಲೆಲ್ಲಿ ಹೋಗ್ತಾರೆ, ನಾವು ಚರ್ಚೆ ಮಾಡಲ್ಲ. ಲೋಡ್ ಶೆಡ್ಡಿಂಗ್ ಗೆ ಕಾರಣ ಏನು ಜನರಿಗೆ ಉತ್ತರ ಕೊಡಿ ಅಂದ್ರೆ ಇವ್ರತ್ರ ಉತ್ತರ ಇಲ್ಲ. ಯಾಕೆ ಕಲ್ಲಿದ್ದಲನ್ನ ಖರೀದಿ ಮಾಡಿಲ್ಲ, ಅದನ್ನ ಉತ್ತರ ಕೊಡಿ

 

click me!