ಐಟಿ ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆ!

By Web DeskFirst Published Oct 12, 2019, 12:45 PM IST
Highlights

ಡಾ. ಜಿ. ಪರಮೇಶ್ವರ್ ಮನೆ ಹಾಗೂ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ| ದಾಳಿ ಬೆನ್ನಲ್ಲೇ ಓಡಿ ಹೋಗಿದ್ದ ಪಿಎ ರಮೇಶ್| ನಾನು ಸಾಯ್ತೇನೆಂದು ಕೆಲವರಿಗೆ ಹೇಳಿದ್ದ ರಮೇಶ್| ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ರಮೇಶ್ ಆತ್ಮಹತ್ಯೆ

ಬೆಂಗಳೂರು[ಅ.12]: ಡಾ. ಜಿ. ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಐಟಿ ದಾಳಿ ಬೆನ್ನಲ್ಲೇ ಓಡಿ ಹೋಗಿದ್ದ ಪಿಎ ರಮೇಶ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನನ್ನ ಹೆಂಡತಿ ಮಕ್ಕಳಿಗೆ ಟಾರ್ಚರ್ ಕೊಡಬೇಡಿ, ಪರಂ ಪಿಎ ಡೆತ್‌ ನೋಟ್‌ ಪತ್ತೆ!

ಡಾ. ಜಿ. ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ನಡೆದಿದ್ದ ಬೆನ್ನಲ್ಲೇ ಓಡಿ ಪರಾರಿಯಾಗಿದ್ದ ಪಿಎ ರಮೇಶ್ ನಾನು ಸಾಯುತ್ತೇನೆ ಎಂದು ಹಲವರಿಗೆ ಹೇಳಿದ್ದರು. ಇಂದು ಶನಿವಾರ ಬೆಳಗ್ಗಿನಿಂದಲೂ ಅವರ ಸಾವಿನ ಸುದ್ದಿ ಹರಿದಾಡುತ್ತಿದ್ದು, ಮಧ್ಯಾಹ್ನಕ್ಕೆ ಸತ್ಯವಾಗಿದೆ. ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್‌ನ ಸಾಯಿ ಗ್ರೌಂಡ್‌ನಲ್ಲಿದ್ದ ಮರಕ್ಕೆ ರಮೇಶ್ ನೇಣು ಹಾಕಿಕೊಂಡಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪರಮೇಶ್ವರ್ ನಿವಾಸದಲ್ಲಿ ಐಟಿ ದಾಳಿ ಅಂತ್ಯ; ವಿಚಾರಣೆಗೆ ಬರಲು ಸೂಚನೆ

ಪರಂ ಪಿಎ ರಮೇಶ್ ಯಾರು..?

ಡಾ.ಜಿ. ಪರಮೇಶ್ವರ್ ಜತೆ ರಮೇಶ್ 8 ವರ್ಷ ಕಾಲ ಕೆಲಸ ಮಾಡಿದ್ದರು. ಮೊದಲು ಟೈಪಿಸ್ಟ್ ಆಗಿ ಪರಮೇಶ್ವರ್ ಕಚೇರಿಗೆ ಸೇರ್ಪಡೆಯಾಗಿದ್ದ ಅವರು ಈ ಮೊದಲು ಕೆಪಿಸಿಸಿ ಕಚೇರಿಯಲ್ಲಿಯೂ ಕೆಲಸ ಮಾಡಿದ್ದರು. ಮೂಲತಃ ರಾಮನಗರ ಜಿಲ್ಲೆಯವರಾಗಿದ್ದ ಟೈಪಿಸ್ಟ್ ರಮೇಶ್, ಬೆಂಗಳೂರಿನ ಕೆಂಗೇರಿಯ ಉಲ್ಲಾಳ ರಸ್ತೆಯ ಅಮ್ಮ ಆಶ್ರಮದ ಬಳಿಯ ನಿವಾಸದಲ್ಲಿ ವಾಸವಾ

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ

ಐಟಿ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಓಡಿದ್ದ ರಮೇಶ್, ಕೆಲವು ಆಪ್ತರಿಗೆ ಫೋನ್ ಮಾಡಿ ನನ್ನ ಕೈನಲ್ಲಿ ಐಟಿ ಪ್ರಶ್ನೆಗಳಿಗೆ ಉತ್ತರಿಸಲಾಗಲ್ಲವೆಂದಿದ್ದರು. ಹೀಗಾಗಿ ಅವರು ಐಟಿ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರಾ? ಎಂಬ ಅನುಮಾನ ಹುಟ್ಟಿಕೊಂಡಿದೆ.
 

"

click me!