ಮುಗಿಯದ ಖಾತೆ ಕ್ಯಾತೆ, ಬೇರೆ ಖಾತೆ ಬೇಕಂತೆ ಆನಂದ್ ಸಿಂಗ್‌ಗೆ!

By Kannadaprabha NewsFirst Published Feb 15, 2020, 11:58 AM IST
Highlights

ಗಣಿ ಅಕ್ರಮ ಪ್ರಕರಣ ಆರೋಪ ಎದುರಿಸುತ್ತಿರುವ ತಮಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನಂದ್ ಸಿಂಗ್ ತಮ್ಮ ಖಾತೆ ಬದಲಾಯಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...

ಬೆಂಗಳೂರು(ಫೆ.15): ಅರಣ್ಯ ಖಾತೆ ಹೊಂದಿರುವ ನನ್ನಿಂದ ಅರಣ್ಯ ಲೂಟಿ ಆಗುತ್ತದೆ ಎಂದಾದರೆ ಮುಖ್ಯಮಂತ್ರಿಗಳು ನನ್ನ ಖಾತೆ ಬದಲಾಯಿಸಲಿ ಎಂದು ಸಚಿವ ಆನಂದ್ ಸಿಂಗ್‌ ತೀಕ್ಷ್ಣವಾಗಿ ಹೇಳಿದ್ದಾರೆ.

ಗಣಿ ಅಕ್ರಮ ಪ್ರಕರಣ ಆರೋಪ ಎದುರಿಸುತ್ತಿರುವ ತಮಗೆ ಅರಣ್ಯ ಖಾತೆ ನೀಡಿರುವುದಕ್ಕೆ ಕಾಂಗ್ರೆಸ್‌, ಜೆಡಿಎಸ್‌ನ ಅನೇಕ ಮುಖಂಡರು ಸೇರಿದಂತೆ ಕೆಲವು ಸಂಘಟನೆಗಳು ತೀವ್ರ ವಿರೋಧ, ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಖಾತೆ ಆಯ್ತು ಈಗ ನೂತನ ಸಚಿವರಿಂದ ಮತ್ತೊಂದು ಕ್ಯಾತೆ

ನನ್ನ ವಿರುದ್ಧ ಇರುವ ಪ್ರಕರಣಗಳು ವೈಯಕ್ತಿಕವಾದದ್ದಲ್ಲ. ಕಂಪನಿಗಳ ವಿರುದ್ಧ ಇರುವ ಪ್ರಕರಣಗಳಾಗಿವೆ. ಪ್ರತಿಪಕ್ಷಗಳ ಮಾತಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರಕರಣದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಬೇಕು. ತಮ್ಮಿಂದ ಅರಣ್ಯ ಲೂಟಿ ಆಗುತ್ತದೆ ಎಂದಾದರೆ ಮುಖ್ಯಮಂತ್ರಿಗಳು ಖಾತೆ ಬದಲಾಯಿಸಲಿ ಎಂದರು.

ಖಾತೆ ಬದಲಿಗೆ ಮನವಿ:

ಈ ಮಧ್ಯೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಆನಂದ ಸಿಂಗ್‌, ಅರಣ್ಯ ಖಾತೆ ಹೊಂದಿರುವುದಕ್ಕೆ ತೀವ್ರ ಟೀಕೆಗಳು ಬರುತ್ತಿವೆ. ಹಾಗಾಗಿ ಖಾತೆ ಬದಲು ಮಾಡುವಂತೆ ಮನವಿ ಮಾಡಿದ್ದಾರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಸ್ವಲ್ಪ ಕಾಲ ಅದೇ ಖಾತೆಯಲ್ಲಿ ಕಾರ್ಯನಿರ್ವಹಿಸಿ, ಮುಂದೆ ಬದಲಾವಣೆ ಮಾಡೋಣ ಎಂದು ಸಿಎಂ ಸಲಹೆ ನೀಡಿದರೆಂದು ಹೇಳಲಾಗಿದೆ.

'ಕೃಷಿ ಖಾತೆ ಮುಳ್ಳಿನ ಹಾಸಿಗೆ, ಆದರೂ ಕೇಳಿ ಪಡೆದಿದ್ದೇನೆ'

ಆನಂದ ಸಿಂಗ್‌ ರಾಜೀನಾಮೆ ಕೊಡಲಿ: ಸಿದ್ದು ಆಗ್ರಹ

ಬೀದರ್‌: ಅರಣ್ಯ ಇಲಾಖೆ ಹೂಡಿರುವ ಹತ್ತಾರು ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ ಸಿಂಗ್‌ ರಾಜ್ಯದ ಅರಣ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು ಅಚ್ಚರಿ ತರುವಂಥದ್ದು. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಲ್ಲವಾದರೆ ಅರಣ್ಯ ಖಾತೆಯಿಂದ ಆನಂದ ಸಿಂಗ್‌ರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೈ ಬಿಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಇಲ್ಲಿನ ಶಾಹೀನ್‌ ಕಾಲೇಜಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅರಣ್ಯ ಇಲಾಖೆಯ ಹಲವಾರು ಪ್ರಕರಣಗಳಲ್ಲಿ ಆನಂದ ಸಿಂಗ್‌ ಅವರು ಇನ್ನೂ ಆರೋಪಿ ಸ್ಥಾನದಲ್ಲಿದ್ದಾರೆ. ಇಂಥವರು ಈ ಇಲಾಖೆಯ ಮುಖ್ಯಸ್ಥರಾದರೆ ನ್ಯಾಯಯುತ ತನಿಖೆ ಹೇಗೆ ಸಾಧ್ಯ? ‘ಕುರಿ ಕಾಯೋ ತೋಳ ಅಂದ್ರೆ ಸಂಬಳ ಕೊಡದಿದ್ರೂ ಕಾಯ್ತೇನೆ’ ಎಂಬಂತಾಗಿದೆ ಎಂದು ಕಿಡಿಕಾರಿದರು.

 ಈ ಕ್ಷಣದ ಪ್ರಮುಖ ಸುದ್ದಿಗಳು

"

click me!