ಸಿಬ್ಬಂದಿ ಕೊರತೆ ನೀಗಿಸಲು ಖಾಸಗಿ ಮೊರೆ ಹೋದ ರಾಜ್ಯ ಸರ್ಕಾರ; ಥರ್ಡ್‌ ಪಾರ್ಟಿಗೆ ನಿಶಾನೆ

Published : Oct 22, 2026, 12:48 PM IST
Government Employees

ಸಾರಾಂಶ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವ ಕಾರಣ ತಪಾಸಣೆ ಮತ್ತು ಆಡಿಟ್ ಕಾರ್ಯವನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಲು ಸರ್ಕಾರ ಸೂಚಿಸಿದೆ. ಆಹಾರ ಸುರಕ್ಷತೆ, ಔಷಧ ಆಡಳಿತ ಮತ್ತು ಕಾರ್ಖಾನೆಗಳ ತಪಾಸಣೆಯನ್ನು ಈ ಏಜೆನ್ಸಿಗಳು ಮಾಡಲಿದ್ದು, ಕಾನೂನು ಅಧಿಕಾರ ಮಾತ್ರ ಅಧಿಕಾರಿಗಳ ಬಳಿಯೇ ಇರಲಿದೆ.

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪರಿಶೀಲನಾ ಸಿಬ್ಬಂದಿ ಕೊರತೆಯಿಂದ ತಪಾಸಣೆಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಗಳಿಂದ (ಥರ್ಡ್‌ ಪಾರ್ಟಿ) ತಪಾಸಣೆ ಮತ್ತು ಆಡಿಟ್ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಕ್ಷೇತ್ರ ಮಟ್ಟದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಪ್ರಮುಖ ಇಲಾಖೆಗಳಲ್ಲಿ ನಿಯಮಿತ ಪರಿಶೀಲನೆಗಳು ಬಾಕಿ ಉಳಿಯುತ್ತಿವೆ. ಇಂಥ ಇಲಾಖೆಗಳಲ್ಲಿ ಆದ್ಯತೆ ಮೇರೆಗೆ ಈ ವ್ಯವಸ್ಥೆ ಜಾರಿಯಾಗಲಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ನೀಡಿದ್ದ ಶಿಫಾರಸು ಅನ್ವಯ ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಆದೇಶ ಹೊರಡಿಸಿದ್ದು, ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಈ ಸಂಬಂಧ ಕ್ರಿಯಾಯೋಜನೆ ರೂಪಿಸಲು ತಿಳಿಸಿದ್ದಾರೆ.

ವಾರ್ಷಿಕ ಪರಿಶೀಲನೆಯೂ ಏಜೆನ್ಸಿಗೆ:

ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಯಲ್ಲಿ ತೂಕ ಮತ್ತು ಅಳತೆ ಉಪಕರಣಗಳ ವಾರ್ಷಿಕ ಪರಿಶೀಲನೆ ಹಾಗೂ ಮುದ್ರೆ ಒತ್ತುವಿಕೆ, ​ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವ್ಯಾಪ್ತಿಯಲ್ಲಿ ಆಹಾರ ಉದ್ಯಮಗಳು, ರೆಸ್ಟೋರೆಂಟ್‌ಗಳು, ಮೆಡಿಕಲ್ ಸ್ಟೋರ್‌ಗಳು ಮತ್ತು ಫಾರ್ಮಸಿಗಳ ವಾರ್ಷಿಕ ಪರಿಶೀಲನೆ ನಡೆಸುವಂಥ ಕೆಲಸಗಳನ್ನು ಅಧಿಕೃತ ಮೂರನೇ ವ್ಯಕ್ತಿ ಏಜೆನ್ಸಿಗೆ ವಹಿಸಲು ಸೂಚಿಸಲಾಗಿದೆ.

ಕಾನೂನಾತ್ಮಕ ಕಂಟ್ರೋಲ್ 

ಕಾರ್ಖಾನೆಗಳು ಹಾಗೂ ಬಾಯ್ಲರ್‌ಗಳ ಇಲಾಖೆ ವ್ಯಾಪ್ತಿಯಲ್ಲಿ ಕೈಗಾರಿಕಾ ಬಾಯ್ಲರ್‌ಗಳ ಸುರಕ್ಷತಾ ತಪಾಸಣೆ ಮತ್ತು ವಾರ್ಷಿಕ ಪ್ರಮಾಣೀಕರಣ ನಡೆಸಬಹುದು. ​​ಖಾಸಗಿ ಅಥವಾ ಥರ್ಡ್ ಪಾರ್ಟಿ ಏಜೆನ್ಸಿಗಳು ತಪಾಸಣೆ ನಡೆಸಿದರೂ, ಕಾನೂನಾತ್ಮಕ ನಿಯಂತ್ರಣಾ ಅಧಿಕಾರಗಳು ಸಂಪೂರ್ಣವಾಗಿ ಸರ್ಕಾರಿ ಅಧಿಕಾರಿಗಳ ಬಳಿಯೇ ಇರಲಿದೆ. ​ಆಹಾರ ಅಥವಾ ಔಷಧಗಳ ಮಾದರಿ ಸಂಗ್ರಹಣೆ, ಜಪ್ತಿ ಹಾಗೂ ಕಾನೂನು ಅಭಿಯೋಜನೆ ಅಧಿಕಾರಗಳು ಸರ್ಕಾರಿ ಅಧಿಕಾರಿಗಳ ಬಳಿಯೇ ಇರಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದ್ಯತೆ ಆಧಾರದ ಮೇರೆಗೆ ಈ ವ್ಯವಸ್ಥೆ ಜಾರಿ

ಏಜೆನ್ಸಿಗಳು ನೀಡುವ ವರದಿ ಮತ್ತು ಆಡಿಟ್‌ಗಳನ್ನು ಆಧರಿಸಿ, ಅಧಿಕಾರಿಗಳು ನಿರ್ದಿಷ್ಟ ಮತ್ತು ಅಪಾಯ ಸಾಧ್ಯತೆ ಹೆಚ್ಚಿರುವ ಸಂಸ್ಥೆಗಳ ಮೇಲಷ್ಟೇ ಗಮನಹರಿಸಿ ತಪಾಸಣೆ ನಡೆಸಲಿದ್ದಾರೆ. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಅಕ್ರಮ ಅಥವಾ ಲೋಪವೆಸಗುವ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸುವುದು ಸೇರಿ ಕಠಿಣ ಕ್ರಮ ಜರುಗಿಸಲಾಗುತ್ತದೆ. ಇನ್ನು ​ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆಯುವ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಕುರಿತು ವಿಶೇಷ ಪರಾಮರ್ಶೆ ನಡೆಯಲಿದೆ ಎಂದು ವಿವರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

NoBroker ಮೂಲಕ ಫ್ಲಾಟ್ ಕೇಳಿ ಮುಂಗಡ ಕೊಟ್ಟರೆ ಮನೆ ಖಾಲಿ ಇಲ್ಲ, ಹಣವೂ ವಾಪಸ್ ಇಲ್ಲ! ಬಾಡಿಗೆದಾರನ ರೆಡ್ಡಿಟ್ ಪೋಸ್ಟ್ ವೈರಲ್
ಬೆಂಗಳೂರು: ಮನೆ, ಅಂಗಡಿ ಪಿಜಿಗಳಲ್ಲಿ ದಸರಾ ಹಬ್ಬದ ರಾಶಿ ರಾಶಿ ಕಸ.. ತ್ಯಾಜ್ಯ ಸಂಗ್ರಹಿಸಲು ವಾಹನವೇ ಬರುತ್ತಿಲ್ಲ..!