ಪ್ರಕಾಶ್ ರಾಜ್ ಯುಟ್ಯೂಬ್ ವಾಹಿನಿ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 14 ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದು, ದೂರಿನಲ್ಲಿ ವಿಡಿಯೋ ಲಿಂಕ್ ಉಲ್ಲೇಖಿಸಿದ್ದಾರೆ.
ಬೆಂಗಳೂರು (ಸೆ.20): ಬಹುಭಾಷಾ ನಟ ಪ್ರಕಾಶ್ ರಾಜ್ ಈಗಾಗಲೇ ಹಲವು ವಿವಾದಗಳನ್ನು ಮಾಡಿಕೊಂಡಿದ್ದು, ಅದರಿಂದ ಅವರು ಸದಾ ಕಾಲ ಚರ್ಚೆಯಲ್ಲಿ ಇರುತ್ತಾರೆ. ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಾರೆ. ಪ್ರಕಾಶ್ ರಾಜ್ ಅವರನ್ನು ಟೀಕಿಸುವ ದೊಡ್ಡ ವರ್ಗ ಕೂಡ ಇದೆ. ಇದೀಗ ಪ್ರಕಾಶ್ ರಾಜ್ ಯುಟ್ಯೂಬ್ ವಾಹಿನಿ ವಿರುದ್ಧ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಗಸ್ಟ್ 14 ರಂದು ಜೀವ ಬೆದರಿಕೆ ಹಾಕುವ ಸಂದೇಶಗಳ ರೀತಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದು, ದೂರಿನಲ್ಲಿ ವಿಡಿಯೋ ಲಿಂಕ್ ಉಲ್ಲೇಖಿಸಿದ್ದಾರೆ.
ಯುಟ್ಯೂಬ್ ಚಾನೆಲ್ ವಿರುದ್ಧ ಪ್ರಕಾಶ್ ರಾಜ್ ದೂರು ಸಲ್ಲಿಕೆ ಮಾಡಿದ್ದಾರೆ. ಈ ಚಾನೆಲ್ನಲ್ಲಿ ಪ್ರಸಾರವಾದ ಎರಡು ವಿಡಿಯೋಗಳ ಬಗ್ಗೆ ಪ್ರಕಾಶ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿರುವ ಎರಡು ವಿಡಿಯೋಗಳಲ್ಲೂ ಸಹ ಜೀವ ಬೆದರಿಕೆ ಹಾಕುವ ಅಂಶ ಇದೆ. ಪ್ರಕಾಶ್ ರಾಜ್ ಮತ್ತು ಕುಟುಂಬದವರಿಗೂ ಜೀವ ಬೆದರಿಕೆ ಎಂದು ನಟ ಆರೋಪಿಸಿದ್ದಾರೆ. ಜೀವಕ್ಕೆ ಅಪಾಯ, ಬೆದರಿಕೆ ಹಾಕಿರುವ ಆರೋಪ ಹಿನ್ನೆಲೆ ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರಕಾಶ್ ರಾಜ್ ದೂರು ನೀಡಿದ್ದಾರೆ. ಸದ್ಯ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯನಿಧಿ ಸ್ಟಾಲಿನ್ ಹೇಳಿಕೆಯಲ್ಲಿ ತಪ್ಪೇನಿದೆ: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಮಾತಾಡಿದ್ದರಲ್ಲಿ ತಪ್ಪೇನಿದೆ? ಅಸ್ಪ ೃಶ್ಯತೆ ಹೋಗಬೇಕೋ ಇಲ್ಲವೋ? ಉದಯನಿಧಿ ಅವರ ಹೇಳಿಕೆಯನ್ನ ತಿರುಚಲಾಗಿದೆ ಎಂದು ಬಹುಭಾಷಾ ನಟ ಪ್ರಕಾಶ ರೈ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಗಳಲ್ಲೂ ವಿಕೃತಿ ಇದೆ. ಅದು ಸರಿಹೋಗಲೇ ಬೇಕು. ನಾನು ಯಾವುದೇ ಧರ್ಮದ ಬಗ್ಗೆ ಮಾತಾಡುತ್ತಿಲ್ಲ, ಯಾವ ಧರ್ಮದ ವಿರೋಧಿಯೂ ನಾನಲ್ಲ. ರಾಜಕಾರಣಿಗಳೇನು ಧರ್ಮವನ್ನು ಗುತ್ತಿಗೆ ಪಡೆದಿದ್ದಾರಾ?
Hassan: ಎಣ್ಣೆ ಕುಡಿಯುವ ಬೆಟ್ ಕಟ್ಟಿ ಯಮರಾಜನ ಫ್ಲೈಟ್ ಹತ್ತಿದ ವ್ಯಕ್ತಿ!
ರಾಜಕಾರಣಿಗಳು ಹೊರಗಡೆ ಭಿನ್ನ, ತುಷ್ಟೀಕರಣ ವಿಚಾರ ಬಂದಾಗ ಎಲ್ಲಾ ರಾಜಕಾರಣಿಗಳು, ರಾಜಕೀಯ ಪಕ್ಷಗಳೂ ಒಂದೇ. ನನಗೆ ದೇಶ ಮಾತ್ರ ಮುಖ್ಯ ಎಂದರು. ನಾನು ಪ್ರತಿಭೆಯಿಂದಷ್ಟೇ ಬೆಳೆದಿಲ್ಲ, ಜನರ ಪ್ರೀತಿಯಿಂದ ಬೆಳೆದಿದ್ದೇನೆ. ಜನರಿಗಾಗಿ ನಾನು ಧ್ವನಿ ಎತ್ತಲೇಬೇಕು. ಆ ಕೆಲಸ ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದ ಅವರು, ಬಸವಣ್ಣ, ಅಂಬೇಡ್ಕರ್ ಅವರು ಹೇಳಿದ್ದು ಕೇವಲ ಭಾಷಣಕ್ಕಾಗಿ ಅಲ್ಲ, ಅವನ್ನೆಲ್ಲವನ್ನೂ ಅಳವಡಿಸಿಕೊಳ್ಳೋದೇ ನಿಜ ಜೀವನ ಎಂದು ಪ್ರತಿಪಾದಿಸಿದರು.