ಶಾಸಕರ ಕರ್ಮಕಾಂಡ: 7 ಮಂದಿ ವಿರುದ್ಧ ಎಫ್‌ಐಆರ್‌

By Web DeskFirst Published Nov 21, 2018, 1:10 PM IST
Highlights

ಬಿಬಿಎಂಪಿ ಚುನಾವಣೆಯಲ್ಲಿ ತಪ್ಪು ವಿಳಾಸ ಕೊಟ್ಟು ಮತದಾನದ ಹಕ್ಕನ್ನು ಬದಲಿಸಿಕೊಳ್ಳುವುದರೊಂದಿಗೆ, ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದಿದ್ದ ಆರೋಪದಡಿಯಲ್ಲಿ 7 ಮಂದಿ ಹಾಲಿ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
 

ಬೆಂಗಳೂರು[ನ.21]: ಸರ್ಕಾರಕ್ಕೆ ವಂಚನೆ ಆರೋಪದಡಿ 7 ಹಾಲಿ ಶಾಸಕರು ಮತ್ತು ಓರ್ವ ಮಾಜಿ ಶಾಸಕರ ಮೇಲೆ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಶಾಸಕರು ತಪ್ಪು ವಿಳಾಸ ನೀಡಿದ್ದರೆಂಬ ಆರೋಪ ಶಾಸಕರ ವಿರುದ್ಧ ಕೇಳಿ ಬಂದಿದೆ. 

"

ಶಾಸಕರಾದ  ಬೋಸರಾಜು, ಲಕ್ಷ್ಮೀನಾರಾಯಣ, ಅಲ್ಲಂ ವೀರಭದ್ರಪ್ಪ,ಅಪ್ಪಾಜಿಗೌಡ , ಎಸ್. ರವಿ, ಆರ್. ಬಿ. ತಿಮ್ಮಾಪುರ, ಮನೋಹರ್, ರಘು ಆಚಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ತಪ್ಪು ವಿಳಾಸ ಕೊಟ್ಟು ಮತದಾನದ ಹಕ್ಕನ್ನು ಬದಲಿಸಿಕೊಳ್ಳುವುದರೊಂದಿಗೆ, ನಕಲಿ ಬಿಲ್ ಸಲ್ಲಿಸಿ ಹೆಚ್ಚುವರಿ ಭತ್ಯೆ ಪಡೆದಿದ್ದ ಆರೋಪದಡಿಯಲ್ಲಿ ಆರ್. ಜೆ. ಎಚ್. ರಾಮಣ್ಣ ಎಂಬುವವರು ವಿಶೇಷ ನ್ಯಾಯಲಯದಲ್ಲಿ ಮೊಕದ್ದಮೆ ಹೂಡಿದ್ದರು ಹಾಗೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದರು. 

ಇವರ ಮನವಿಯನ್ನು ಸ್ವೀಕರಿಸಿದ್ದ ನ್ಯಾಯಾಲಯವು ಆರೋಪಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ವಿಧಾನಸೌದ ಪೊಲೀಸರಿಗೆ ಸೂಚಿಸಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ 7 ಮಂದಿ ಹಾಲಿ ಶಾಸಕರು ಸೇರಿದಂತೆ ಒಟ್ಟು 8 ಮಂದಿ ವಿರುದ್ದ ಐಪಿಸಿ, 420(ವಂಚನೆ), 177(ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವುದು),149(ಅಪರಾದದ ಉದ್ದೇಶದಿಂದ ಗುಂಪು ಗೂಡೂವುದು) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
 

click me!