ರೈತರ ಪ್ರತಿಭಟನೆ : ಶೀಘ್ರ ಕರ್ನಾಟಕ ಬಂದ್?

By Suvarna News  |  First Published Sep 22, 2020, 1:42 PM IST

ರಾಜ್ಯದಲ್ಲಿ ಕರ್ನಾಟಕ ಸರ್ಕಾರಿ ಜಾರಿ ಮಾಡುತ್ತಿರುವ ಹೊಸ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಕರ್ನಾಟಕ ಬಂದ್ ಎಚ್ಚರಿಕೆ ನೀಡಲಾಗಿದೆ.


ಬೆಂಗಳೂರು (ಸೆ.22): ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರೈತ ವಿರೋಧಿ ಕಾಯ್ದೆ ವಿರೋಧಿಸಿ ಕಿಸಾನ್ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸುತ್ತಿದೆ. 

ಇನ್ನು ಕರ್ನಾಟಕ ಬಂದ್ ಮಾಡುವ ಬಗ್ಗೆ ಚರ್ಚೆಯಾಗುತ್ತಿದ್ದು, ಆದರೆ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಸಮಿತಿ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದರು. 

Tap to resize

Latest Videos

"

ಈಗಾಗಲೇ ಅನೇಕ ಸಂಘಟನೆಗಳು ಬಂದ್‌ಗೆ ಬೆಂಬಲ ಕೊಡುವುದಾಗಿ ಹೇಳಿವೆ. ಕಾಯ್ದೆ ವಾಪಸ್ ತೆಗೆದುಕೊಳ್ಳುವವರೆಗೂ ನಮ್ಮ  ಹೋರಾಟ ನಿಲ್ಲುವುದಿಲ್ಲ ಎಂದು ಶಾಂತಕುಮಾರ್ ಹೇಳಿದ್ದಾರೆ.

undefined

  ರೈತರು ಆಗಮನ : ಬೆಂಗಳೂರಿನಲ್ಲಿ ಅನ್ನದಾತರ ಹೋರಾಟ  ತೀವ್ರಗತಿಯತ್ತ ಸಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ರೈತರು ಆಗಮಿಸಿದ್ದಾರೆ.

ಇಂದು ಮುನ್ನೂರಕ್ಕೂ ಹೆಚ್ಚು ರೈತರು ಬೆಂಗಳೂರಿಗೆ ಬಂದಿದ್ದಾರೆ. ಬೆಳಗಾವಿ, ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಫ್ರೀಡಮ್ ಪಾರ್ಕ್ಗೆ ರೈತರು ಬಂದಿದ್ದು, ಹಸಿರು ಶಾಲು ಬೀಸುತ್ತ, ಸರ್ಕಾರದ ವಿರುದ್ದ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದ್ದಾರೆ. 

ಕೃಷಿ ಮಸೂದೆ ಖಂಡಿಸಿ ಸರ್ಕಾರದ ವಿರುದ್ಧ ಅನ್ನದಾತರ ಸಮರ; ಬೀದಿಗಿಳಿದಿದ್ದಾರೆ ರೈತರು ...

ರೈತ ಹೋರಾಟದ ಬಗ್ಗೆ ಅನುಮಾನ : ರೈತ ಹೋರಾಟದ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅನುಮಾನ ವ್ಯಕ್ತಪಡಿಸಿದ್ದಾರೆ. 

ರೈತರ ಪ್ರತಿಭಟನೆ ದುರುದ್ದೇಶಪೂರ್ವಕವಾಗಿದೆ. ಯಾರದೋ ಪ್ರಚೋದನೆಗೆ ಒಳಗಾಗಿ ಈರೀತಿ ಪ್ರತಿಭಟನೆ ಮಾಡುತ್ತಿದ್ದಾರೆ. ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟವಾಗಿದೆ

. ಈ ಕಾಯ್ದೆಯ ಅನುಕೂಲತೆಯನ್ನ ತಿಳಿದುಕೊಳ್ಳದೇ ಪ್ರತಿಭಟನೆ ಮಾಡುತ್ತಿದ್ದಾರೆ. ಭೂ ಸುಧಾರಣೆ ಕಾಯ್ದೆಯಿಂದ  ಯಾರು ಬೇಕಾದರೂ ರೈತ ಆಗಬಹುದು. ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಅನುಕೂಲ ಆಗಲಿದೆ  ಎಂದರು. 

ರೈತರು ಬೆಳೆದ ಬೆಳೆಯನ್ನ ಮನೆ ಬಾಗಿಲಿನಲ್ಲಿ ಮಾರಾಟ ಮಾಡಬಹುದು . ಲೋಡಿಂಗ್, ಅನ್ ಲೋಡಿಂಗ್ ಚಾರ್ಜಸ್ ಇರುವುದಿಲ್ಲ . ಇಷ್ಟೆಲ್ಲಾ ಅನುಕೂಲಗಳನ್ನ ಪ್ರತಿಭಟನೆ ಮಾಡುತ್ತಿರುವವರು ನೋಡುತ್ತಿಲ್ಲ
 ಎಂದು ವಿಧಾನಸೌಧದಲ್ಲಿ ಸಚಿವ ಬಿಸಿ ಪಾಟೀಲ್ ಹೇಳಿದರು.

click me!