
ತುಮಕೂರು[ಫೆ.17]: ದೇವಸ್ಥಾನದ ಬಳಿ ಕಟ್ಟಿಹಾಕಿದ್ದ ಸಾಕಾನೆಯೊಂದು ತನಗೆ ಬಾಳೆಹಣ್ಣನ್ನು ತಿನ್ನಿಸಲು ಬಂದ ಯುವಕನ ತಲೆಯನ್ನೇ ಜಗಿದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕೋರಾ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಪ್ರತಾಪ್(20) ಆನೆದಾಳಿಗೊಳಗಾದ ಯುವಕ. ಗಂಭೀರ ಗಾಯಗೊಂಡಿರುವ ಪ್ರತಾಪನಿಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆಗೆ ಬಾಳೆಹಣ್ಣು ತಿನ್ನಿಸಲು ಹೋದಾಗ ಅದು ತನ್ನ ಸೊಂಡಿಲಿನಲ್ಲಿ ಬಾಳೆಹಣ್ಣಿನೊಂದಿಗೆ ಯುವಕನ ತಲೆಯನ್ನೂ ಬಾಯಿಗಿಟ್ಟಿದೆ. ನೋಡ ನೋಡುತ್ತಿದ್ದಂತೆ ಆನೆ ಯುವಕನ ಕಿವಿ ಮತ್ತು ತಲೆಯ ಭಾಗವನ್ನು ಜಗಿದ ಬಳಿಕ ಆತನನ್ನು ದೂರಕ್ಕೆ ಎಸೆದಿದೆ.
ಮೂಲತಃ ಸರ್ಕಸ್ ಕಂಪನಿಯೊಂದರಲ್ಲಿದ್ದ ಈ ಆನೆಯನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕ ಶೆಡ್ ನಿರ್ಮಿಸಿ ಇಡಲಾಗಿತ್ತು. ಅದರ ಜೊತೆಗೊಬ್ಬ ಮಾವುತನೂ ಇರುತ್ತಿದ್ದ. ಆದರೆ ಘಟನೆ ನಡೆದಾಗ ಮಾವುತ ಅಲ್ಲಿರಲಿಲ್ಲ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ