ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಭೂಕಂಪ

Published : Feb 05, 2019, 11:22 AM IST
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಭೂಕಂಪ

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್‌ ಯೋಜನಾ ಪ್ರದೇಶದ ಅಸುಪಾಸಿನಲ್ಲಿ ಸೋಮವಾರವೂ ಲಘು ಭೂಕಂಪನವಾಗಿದೆ. 

ಹೊಸನಗರ: ಭಾನುವಾರ ಭೂಕಂಪನಕ್ಕೆ ಒಳಗಾಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್‌ ಯೋಜನಾ ಪ್ರದೇಶದ ಅಸುಪಾಸಿನಲ್ಲಿ ಸೋಮವಾರವೂ ಲಘುಭೂಕಂಪನವಾಗಿದೆ. 

ಮಾಸ್ತಿಕಟ್ಟೆ, ಯಡೂರು, ಸುಳಗೋಡು ಹಾಗೂ ಮೇಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ 12.20ಕ್ಕೆ ಮತ್ತೆ ಲಘು ಭೂಕಂಪನ ಆಗಿರುವ ಅನುಭವವಾಗಿದ್ದು ಭೂಮಿ ನಡುಗಿದ ಶಬ್ದಕ್ಕೆ ಜನರು ಭಯಭೀತರಾಗಿ ಮನೆಯಿಂದ ರಸ್ತೆಗೆ ಬಂದಿದ್ದಾರೆ. 

ಶಾಲೆಯಲ್ಲಿ ಮಕ್ಕಳು ಸಹ ಲಘು ಭೂಕಂಪನಕ್ಕೆ ಹೆದರಿ ಕೆಲ ಕಾಲ ಶಾಲೆ ಬಿಟ್ಟು ಶಿಕ್ಷಕರ ಜತೆಗೆ ಹೊರಗೋಡಿ ಬಂದಿದ್ದಾರೆ. ಒಮ್ಮೆ ಭೂಕಂಪನದ ನಂತರ ಈ ರೀತಿಯ ಸರಣಿ ಕಂಪನಗಳು ನಡೆಯುವುದು ಸಹಜ ಪ್ರಕ್ರಿಯೆಯಾಗಿದ್ದು ಇದನ್ನು ಪಶ್ಚಾತ್‌ ಕಂಪನ ಎಂದು ಕರೆಯುತ್ತಾರೆ. ಇದರಿಂದ ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ