ಅಯ್ಯೋ ವಿಧಾತ, ಇವನೆಂತ ರೈತ?: ಗುಂಡಿನ ಗಮ್ಮತ್ತಿನಲ್ಲಿ ಕಳ್ಕೊಂಡ ಕಿಮ್ಮತ್ತು!

By Web DeskFirst Published Nov 21, 2018, 9:35 AM IST
Highlights

‘ನಾನೊಬ್ಬ ಕುಡುಕ, ಅಲ್ಲಲ್ಲ ರೈತ’! ಗುಂಡಿನ ಗಮ್ಮತ್ತಿನಲ್ಲಿ ವ್ಯಕ್ತಿಯ ರಂಪಾಟ! ರೈತ ಎಂದು ಹೇಳಿಕೊಂಡು ಸೀನ್ ಕ್ರಿಯೇಟ್ ಮಾಡಿದ ಭೂಪ! ಪ್ರತಿಭಟನಾ ನಿರತ ರೈತರೊಂದಿಗೆ ಕುಡಿದ ಮತ್ತಿನಲ್ಲಿ ವಾಗ್ವಾದ! ಪ್ರತಿಭಟನಾ ಸ್ಥಳದಿಂದ ವ್ಯಕ್ತಿಯನ್ನು ಹೊರ ಹಾಕಿದ ಪೊಲೀಸರು

ಬೆಂಗಳೂರು(ನ.21): ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ರಾಜ್ಯದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹಸಿರು ಶಾಲು ಹೊದ್ದ ಅನ್ನದಾತ ರಾಜ್ಯ ರಾಜಧಾನಿ ಬೆಂಗಳೂರಿಗೆ ಲಗ್ಗೆ ಇಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೂ ಆಗಿದೆ.

ಈ ಮಧ್ಯೆ ತಾನೊಬ್ಬ ರೈತ ಎಂದು ಹೇಳಿಕೊಂಡು ಹೋರಾಟಕ್ಕೆ ಬೆಂಬಲ ಕೊಡಲು ಬಂದಿದ್ದ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ರೈತ ಸಂಘದ ನಾಯಕರೊಂದಿಗೆ ರಂಪಾಟ ಮಾಡಿದ ಘಟನೆ ನಡೆದಿದೆ.

"

ಕುಡಿದ ಅಮಲಿನಲ್ಲಿ ಪ್ರತಿಭನಾ ಸ್ಥಳಕ್ಕೆ ಬಂದಿದ್ದ ವ್ಯಕ್ತಿ, ಪ್ರತಿಭಟನಾ ನಿರತ ರೈತರೊಂದಿಗೆ ವಾಗ್ವಾದ ನಡೆಸಿದ್ದಾನೆ. ತನ್ನನ್ನು ತಾನು ಹುಕ್ಕೇರಿ ತಾಲೂಕಿನ ಜಂಕಿಹಾಳದ ರಾಜು ನಿಂಗನಹಳ್ಳಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ರೈತ ಸಂಘದ ಹೋರಾಟಗಾರರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾನೆ.

ವ್ಯಕ್ತಿಯ ರಂಪಾಟ ಕೇಳಿ ಒಗ್ಗೂಡಿದ ಜನ ಆತನನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಸ್ಥಳದಿಂದ ಹೊ ನಡೆಯುವಂತೆ ತಾಕೀತು ಮಾಡಿದ್ದಾರೆ. ನಂತರ ಮಧ್ಯಪ್ರವೇಶಿಸಿದ ಪೊಲೀಸರು ವ್ಯಕ್ತಿಯನ್ನು ಸ್ಥಳದಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

click me!