ಕೇವಲ ಸಿನಿಮಾ ಮಾಡೋದು ಮಾತ್ರ ನಟರ ಕೆಲಸವಲ್ಲ. ನಟರಾಗಿರುವವರ ನಡೆ ನುಡಿ ಅವರು, ಮಾಡುವ ಆದರ್ಶ ಕೆಲಸಗಳು ಮತ್ತೊಬ್ಬರಿಗೆ ಮಾದರಿಯಾಗಬೇಕು. ಹೀಗೆಂದು ಕೊಂಡಿದ್ದ ಅಪ್ಪು ಹಲವು ಸಮಾಜಮುಖಿ ಕೆಲಸವನ್ನು ಮಾಡಿದ್ರು. ಅದರಲ್ಲಿ ಮೈಸೂರಿನ ಶಕ್ತಿಧಾಮ ಶಾಲೆ(Shaktidhama school mysuru) ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣ
ಬಳ್ಳಾರಿ/ ವಿಜಯನಗರ (ಮೇ.26) ಕೇವಲ ಸಿನಿಮಾ ಮಾಡೋದು ಮಾತ್ರ ನಟರ ಕೆಲಸವಲ್ಲ. ನಟರಾಗಿರುವವರ ನಡೆ ನುಡಿ ಅವರು, ಮಾಡುವ ಆದರ್ಶ ಕೆಲಸಗಳು ಮತ್ತೊಬ್ಬರಿಗೆ ಮಾದರಿಯಾಗಬೇಕು. ಹೀಗೆಂದು ಕೊಂಡಿದ್ದ ಅಪ್ಪು ಹಲವು ಸಮಾಜಮುಖಿ ಕೆಲಸವನ್ನು ಮಾಡಿದ್ರು. ಅದರಲ್ಲಿ ಮೈಸೂರಿನ ಶಕ್ತಿಧಾಮ ಶಾಲೆ(Shaktidhama school mysuru) ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಇದೀಗ ಅವರು ಇಲ್ಲದೇ ಇದ್ರೂ ಅವರು ಕುಟುಂಬದ ಸದಸ್ಯರು ಅವರ ಸಮಾಜಮುಖಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಕ್ತಿ ಧಾಮದ ಮಾದರಿಯಲ್ಲಿಯೇ ಹೊಸಪೇಟೆಯಲ್ಲೊಂದು ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಅಪ್ಪು ಮಾದರಿಯಲ್ಲಿ ಶಿವಣ್ಣ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪತ್ನಿ ಗೀತಾ(Geetha shivarajkumar) ಶಾಲೆಗೆ ಭೇಟಿಕೊಟ್ಟು ದತ್ತು ಸ್ವೀಕಾರ ಕಾರ್ಯ ಪೂರ್ಣಗೊಳಿಸಿದ್ದಾರೆ.
ಶಕ್ತಿಧಾಮದ ಮಕ್ಕಳ ಜೊತೆ ಶಿವರಾಜ್ ಕುಮಾರ್ ದಂಪತಿ ಗಣರಾಜೋತ್ಸವ ಆಚರಣೆ
ದೊಡ್ಮನೆಯ ದೊಡ್ಡ ಮನಸ್ಸಿನಿಂದ ಬಡ ಮಕ್ಕಳ ಬಾಳಲ್ಲಿ ಬೆಳಕು.
ಮೈಸೂರಿನಲ್ಲಿ ದೊಡ್ಮನೆ ಕುಟುಂಬ ಸ್ಥಾಪನೆ ಮಾಡಿದ ಶಕ್ತಿಧಾಮದಲ್ಲಿ ಸಾವಿರಾರು ಮಕ್ಕಳು ಶಿಕ್ಷಣ ಆಶ್ರಯ ಪಡೆಯುತ್ತಿದ್ದಾರೆ. ಮೈಸೂರಿನಲ್ಲಿ ಸ್ಪಾಪನೆಯಾಗಿರುವ ಶಕ್ತಿಧಾಮದ ಮಾದರಿಯಲ್ಲಿ ಇದೀಗ ಮತ್ತೊಂದು ಬಡ ಶಾಲೆಯನ್ನ ದತ್ತು ಪಡೆಯುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕಾಗಿ ಮತ್ತಷ್ಟು ಶಕ್ತಿ ತುಂಬಲು ಮುಂದಾಗಿದೆ ದೊಡ್ಮನೆ ಕುಟುಂಬ.
ಹೌದು, ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿರುವ ಅನ್ನಪೂಣೇಶ್ವರಿ ವಿದ್ಯಾ ಪೀಠ ಶಾಲೆಯನ್ನು ಇದೀಗ ದೊಡ್ಡಮನೆ ಕಟುಂಬ ದತ್ತು ತೆಗೆದುಕೊಂಡಿದೆ. 2012ರಲ್ಲಿ ಸ್ಪಾಪನೆಯಾದ ಈ ಉಚಿತ ವಸತಿಯುತ ಪ್ರೌಢಶಾಲೆಯಲ್ಲಿ ನೂರಾರು ಬಡ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. 8ರಿಂದ 10ನೇ ತರಗತಿಯ ವರೆಗೂ ಈ ಶಾಲೆಯಲ್ಲಿ ಸದ್ಯ 123 ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಆದ್ರೆ ಅನುದಾನವಿಲ್ಲದೇ ಮಕ್ಕಳಿಗೆ ಉತ್ತಮ ಶಿಕ್ಷಣ ಆಶ್ರಯ ಸಿಗದೇ ಈ ಶಾಲೆ ಸೊರಗಿಹೋಗಿತ್ತು. ಇನ್ನೇನೂ ಈ ಶಾಲೆಗೆ ಬೀಗ ಹಾಕಬೇಕು ಅನ್ನುವಷ್ಟರಲ್ಲಿ ಈ ಶಾಲೆಗೆ ದೊಡ್ಮನೆಯವರ ಆಶ್ರಯ ದೊರೆತಿದೆ.
ಅನ್ನಪೂಣೇಶ್ವರಿ ಶಾಲೆ ದತ್ತು ಪಡೆದ ಗೀತಾ ಶಿವರಾಜಕುಮಾರ್
ಇನ್ನೂ ಈ ಶಾಲೆಯನ್ನು ಜೋಗದ ದಿಗಂಬರ ರಾಜಭಾರತಿ ಸ್ವಾಮೀಜಿ ಯವರು, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸ್ಪಾಪನೆ ಮಾಡಿದ್ದರು. ಆದ್ರೇ ಇತ್ತೀಚೆಗೆ ಶಾಲೆಗೆ ಅನುದಾನದ ಕೊರೆತೆಯಿಂದ ಕಷ್ಟಕ್ಕೆ ಸಿಲುಕಿತ್ತು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ವೇದ ಚಿತ್ರದ ಪ್ರಮೋಷನ್ ಗೆ ಹೊಸಪೇಟೆಗೆ ಆಗಮಿಸಿದ್ದ ಡಾ ಶಿವರಾಜಕುಮಾರ ದಂಪತಿಗಳು ಶಾಲೆಗೆ ಭೇಟಿ ಮಾಡಿದ್ರು. ಈ ವೇಳೆ ಅನ್ನಪೂಣೇಶ್ವರಿ ವಿದ್ಯಾಪೀಠದ ಮಕ್ಕಳ ಅಳಲು ಆಲಿಸಿದ್ದ ಗೀತಾ ಶಿವರಾಜಕುಮಾರ್ ಶಾಲೆಯನ್ನು ದತ್ತು ಪಡೆಯುವ ಭರವಸೆ ನೀಡಿದ್ರು. ದೊಡ್ಮನೆಯವರು ಕೊಟ್ಟ ಮಾತಿನಂತೆ ಇದೀಗ ಅನ್ನಪೂಣೇಶ್ವರಿ ವಿದ್ಯಾಪೀಠವನ್ನು ದತ್ತು ಪಡೆಯಲು ಮುಂದಾಗಿದ್ದಾರೆ. ಆ ಹಿನ್ನಲೆಯಲ್ಲೆ ಶಾಲೆಗೆ ಗೀತಾ ಶಿವರಾಜಕುಮಾರ್ ಶಾಲೆಗೆ ಭೇಟಿ ಮಾಡಿ ದತ್ತು ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಿ ಶಾಲೆ ದತ್ತು ತಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ.
ನಾನು ಶಕ್ತಿಧಾಮದ ಸ್ವಯಂ ಸೇವಕನಾಗಿರ್ತೀನಿ, ರಾಜ್ ಕುಟುಂಬ ಅನುಮತಿ ನೀಡಲಿ; ಶಕ್ತಿಧಾಮ ಭೇಟಿ ಬಳಿಕ ವಿಶಾಲ್ ಮಾತು
ದೊಡ್ಮನೆ ಕುಟುಂಬದ ದೊಡ್ಡ ಮನಸ್ಸು ಎಂದು ಅಭಿಮಾನಿಗಳು
ಇನ್ನೂ ಶ್ರೀಘ್ರದಲ್ಲೇ ಟ್ರಸ್ಟ್ ರಚಿಸಿ ಪಧಾಧಿಕಾರಿಗಳನ್ನು ನೇಮಕ ಮಾಡಿ ಶಾಲೆಯ ಅಭಿವೃದ್ದಿ ಮಾಡುವುದಾಗಿ ಗೀತಾ ಶಿವರಾಜಕುಮಾರ್ ಘೋಷಿಸಿದ್ದಾರೆ.ದಿವಂಗತ ಪಾರ್ವತಮ್ಮ ರಾಜಕುಮಾರ ಮೈಸೂರಿನಲ್ಲಿ ಆರಂಭಿಸಿದ ಶಕ್ತಿಧಾಮದಲ್ಲಿ ಈಗಾಗಲೇ ಸಾವಿರಾರು ಬಡಮಕ್ಕಳು. ಅನಾಥ ಮಕ್ಕಳು. ಅಬಲೆಯರಿಗೆ ಆಶ್ರಮ ದೊರೆತಿದೆ. ಇದೀಗ ದೊಡ್ಮನೆಯವರು ಮತ್ತೊಂದು ಬಡಶಾಲೆಯನ್ನ ದತ್ತು ಪಡೆಯುವ ಮೂಲಕ ಬಡ ಮಕ್ಕಳ ಆಶ್ರಯಕ್ಕೆ ಧಾವಿಸಿರೋದು ದೊಡ್ಡಮನೆಯ ದೊಡ್ಡಗುಣವನ್ನು ಎತ್ತಿ ತೋರಿಸುತ್ತಿದೆ.