
ಬೆಳಗಾವಿ (ಮಾ.30): ಮಾಜಿ ಸಚಿವರ ಸಿ.ಡಿ. ಬಹಿರಂಗ ಪ್ರಕರಣ ವಿಚಾರವಾಗಿ ದಯವಿಟ್ಟು ನನ್ನನ್ನು ಏನೂ ಕೇಳಬೇಡಿ. ನಿಮಗೆ ಕೈಮುಗಿಯುತ್ತೇನೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳು ಸಿ.ಡಿ. ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿ.ಡಿ. ವಿಚಾರವಾಗಿ ನನ್ನನ್ನು ಏನೂ ಕೇಳಬೇಡಿ ಎಂದು ಕೈ ಮುಗಿದರು. ಸಿ.ಡಿ. ಯುವತಿಯ ಪೋಷಕರು ಆರೋಪ ಮಾಡಿದರೆ ನಾನೇನೂ ಮಾಡಲಿ.
ಇತ್ತಅವರ ಗೆಲುವಿಗೆ ಡಿಕೆಶಿ ಪಣ : ಅತ್ತ ಡಿಕೆಶಿ ಬಂದರೂ ಬಾರದ ಸತೀಶ್
ಈಗಾಗಲೇ ನಾನು ಸಿ.ಡಿ. ವಿಚಾರದ ಬಗ್ಗೆ ಕೇಳದಂತೆ ಹತ್ತಾರು ಬಾರಿ ಮನವಿ ಮಾಡಿದ್ದೇನೆ. ಸಿ.ಡಿ. ವಿಚಾರ ಹೊರತುಪಡಿಸಿ ಬೇರೆ ಏನಾದರು ಇದ್ದರೆ ಮಾತ್ರ ಕೇಳಿ ಎಂದು ಹೊರಟುಹೋದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ