ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ

Published : Oct 29, 2025, 10:29 PM IST
Dharmasthala Burude Gang

ಸಾರಾಂಶ

ತಾವೇ ಕೊಟ್ಟ ಕೇಸ್ ರದ್ದುಕೋರಿ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ, ಅರೆಸ್ಟ್ ತಪ್ಪಿಸಲು ಕೊನೆ ಪ್ರಯತ್ನ ನಡೆಸಿದೆ. ಈ ಮೂಲಕ ಧರ್ಮಸ್ಥಳ ವಿರುದ್ದ ಮಾಡಿದ ಷಡ್ಯಂತ್ರ ಬಯಲಾಗುತ್ತಿದ್ದಂತೆ ಬುರುಡೆ ಗ್ಯಾಂಗ್ ಇದೀಗ ಮೆಲ್ಲನೆ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ.

ಧರ್ಮಸ್ಥಳ (ಅ.29) ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಿದ ಬುರುಡೆ ಗ್ಯಾಂಗ್ ಇದೀಗ ಕಂಗಾಲಾಗಿದೆ. ಬುರುಡೆ ಗ್ಯಾಂಗ್ ಸದಸ್ಯರು ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಇದೀಗ ಕೊನೆಯ ಪ್ರಯತ್ನ ಮಾಡಿದೆ. ಧರ್ಮಸ್ಥಳ ಸುತ್ತ ಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ. ಉತ್ಖನನ ಮಾಡಿ, ತನಿಖೆ ನಡೆಸಿ ಎಂದು ತಾವೇ ಕೊಟ್ಟ ಅತ್ಯಂತ ಮಹತ್ವದ ದೂರನ್ನು ಇದೀಗ ವಜಾಗೊಳಿಸಿ ಎಂದು ಹೈಕೋರ್ಟ್‌ಗೆ ಬುರುಡೆ ಗ್ಯಾಂಗ್ ಅರ್ಜಿ ಸಲ್ಲಿಸಿದೆ. ವಿಚಾರಣೆಗೆ ಹಾಜರಾಗುವಂತೆ ಬುರುಡೆ ಗ್ಯಾಂಗ್ ಸದಸ್ಯರಿಗೆ ನೋಟಿಸ್ ನೀಡಿದ ಬೆನ್ನಲ್ಲೇ ಬಂಧನ ಭೀತಿಯಿಂದ ತಪ್ಪಿಸಿಕೊಳ್ಳಲು ಈ ಪ್ರಯತ್ನ ಮಾಡಿದೆ ಅನ್ನೋದು ಬಯಲಾಗಿದೆ.

ತಾವೇ ತೋಡಿದ ಗುಂಡಿಯಲ್ಲಿ ಬಿದ್ದ ಬುರುಡೆ ಗ್ಯಾಂಗ್

ತಾವೇ ತೋಡಿಕೊಂಡ ಗುಂಡಿಯಲ್ಲಿ ಬುರುಡೆ ಗ್ಯಾಂಗ್ ಬಿದ್ದಿದೆ. ತಾವೇ ಕೊಟ್ಟ ಮೂಲ ಪ್ರಕರಣವನ್ನು ರದ್ದುಗೊಳಿಸುವಂತೆ ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನೂರಾರು ಶವಗಳು, ಬಾಲಕಿಯರ ಶವಗಳು, ಅತ್ಯಾ*ರ ಗೊಂಡ ಮಹಿಳೆಯರ ಶವಗಳನ್ನು ಚಿನ್ನಯ್ಯ ಹೂತಿದ್ದಾನೆ. ಧರ್ಮಸ್ಥಳ ದೇವಸ್ಥಾನದ ಪ್ರಮುಖರ ಸೂಚನೆ ಮೇರೆ ಚಿನ್ನಯ್ಯ ಮಾಡಿದ್ದಾನೆ ಎಂದು ಇದೇ ಬುರುಡೆ ಗ್ಯಾಂಗ್ ದೂರು ದಾಖಲಿಸಿತ್ತು. ಇದೀಗ ಬುರುಡೆ ಗ್ಯಾಂಗ್ ತಮ್ಮ ಈ ಮೂಲ ದೂರನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಮೂಲಕ ಬುರುಡೆ ಗ್ಯಾಂಗ್ ಬಂಧನದಿಂದ ತಪ್ಪಿಸಿಕೊಳ್ಳಲು ಕೊನೆಯ ಪ್ರಯತ್ನವನ್ನು ನಡೆಸುತ್ತಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬುರುಡೆ ಗ್ಯಾಂಗ್ ನೀಡಿದ್ದ ದೂರನ್ನು ವಜಾಗೊಳಿಸಿ ಎಂದು ಬುರುಡೆ ಗ್ಯಾಂಗ್ ಹೈಕೋರ್ಟ್‌ಗೆ ಮನವಿ ಮಾಡಿದೆ. ಇವರು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಎಸ್ಐಟಿ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಆರಂಭಿಕ ಎಲ್ಲಾ ಹೇಳಿಕೆಯಲ್ಲಿ ಎಸ್‌ಐಟಿ ತನಿಖೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಇದೇ ಬುರುಡೆ ಗ್ಯಾಂಗ್ ಇದೀಗ ಎಫ್ಐಆರ್ ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದೆ.

ತಮಗೆ ಬೇಡವಾದಾಗ ಎಸ್ಐಟಿ ತನಿಖೆ ನಿಲ್ಲಿಸಲು ಪರೋಕ್ಷ ಅರ್ಜಿ

ಧರ್ಮಸ್ಥಳ ವಿರುದ್ದ ಭಾರಿ ಷಡ್ಯಂತ್ರ ನಡೆಸಿದ ಬುರುಡೆ ಗ್ಯಾಂಗ್ ಇದೀಗ ಪರೋಕ್ಷವಾಗಿ ಎಸ್‌ಐಟಿ ತನಿಖಾ ತಂಡವನ್ನೇ ರದ್ದುಗೊಳಿಸಿ, ತನಿಖೆ ಅಂತ್ಯಗೊಳಿಸಲು ಅರ್ಜಿಯಲ್ಲಿ ಹೇಳಿದೆ. ಆರಂಭದಲ್ಲೇ ಧರ್ಮಸ್ಥಳ ಠಾಣೆಯಲ್ಲಿ ಧರ್ಮಸ್ಥಳ ಸುತ್ತ ಮುತ್ತ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ದೂರು ನೀಡಿತ್ತು. ಇದರ ತನಿಖೆಯನ್ನು ವಿಶೇಷ ತಂಡ ಮಾಡಬೇಕು ಎಂದು ಪಟ್ಟು ಹಿಡಿದಿತ್ತು. ಇತ್ತ ಎಸ್‌ಐಟಿ ಮುಖ್ಯಸ್ಥರಾಗಿ ಪ್ರಣವ್ ಮೊಹಾಂತಿ ಬೇಕು ಎಂದು ಡಿಮ್ಯಾಂಡ್ ಇಟ್ಟಿತ್ತು. ಇದೀಗ ಎಸ್ಐಟಿ ತನಿಖೆ, ತಮ್ಮ ಬುಡುಕ್ಕೆ ಬರುತ್ತಿದ್ದಂತೆ ತನಿಖೆಯನ್ನು ನಿಲ್ಲಿಸಲು, ತಾವು ಬಂಧನದಿಂದ ತಪ್ಪಿಸಿಕೊಳ್ಳಲು ಈ ನಾಟಕವಾಡುತ್ತಿದೆಯಾ ಎಂಬ ಅನುಮಾನಗಳು ಮೂಡುತ್ತಿದೆ.

ಎಸ್ಐಟಿ ನೋಟಿಸ್‌ನಿಂದ ಬೆಚ್ಚಿದ ಬುರುಡೆ ಗ್ಯಾಂಗ್

ಧರ್ಮಸ್ಥಳ ವಿರುದ್ಧ ಭಾರಿ ಷಡ್ಯಂತ್ರ ನಡೆಸಿದ ಬುರುಡೆ ಗ್ಯಾಂಗ್ ಆರೋಪಗಳ ಸುರಿಮಳೆಗೈದಿತ್ತು. ನಮ್ಮಲ್ಲಿ ಸಾಕ್ಷಿ ಇದೆ, ಈ ಮೊಬೈಲ್‌ನಲ್ಲಿದೆ ತೋರಿಸ್ತಿನಿ ಎಂದು ಸವಾಲು ಹಾಕಿತ್ತು. ಆದರೆ ತಿಂಗಳು ಕಳೆದರೂ ಎಸ್ಐಟಿ ಮುಂದೆ ಸಾಕ್ಷ್ಯ ಒದಗಿಸಲು ಬುರುಡೆ ಗ್ಯಾಂಗ್ ವಿಫಲವಾಗಿದೆ. ಇತ್ತ ವಿಚಾರಣೆಗೆ ಹಾಜರಾಗುವಂತೆ ಬುರುಡೆ ಗ್ಯಾಂಗ್ ನೋಟಿಸ್ ನೀಡುತ್ತಿದ್ದಂತೆ ಮೆಲ್ಲನೆ ಧರ್ಮಸ್ಥಳ ಪ್ರಕರಣದಿಂದ ಜಾರಿಕೊಳ್ಳಲು ಯತ್ನಿಸಿದೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ