ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!

Published : Dec 10, 2025, 12:15 PM IST
Dharmasthala Case

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವಗಳ ಸುಳ್ಳು ಆರೋಪದ ಹಿಂದಿನ ಷಡ್ಯಂತ್ರವನ್ನು SIT ಪ್ರಾಥಮಿಕ ವರದಿ ಬಯಲು ಮಾಡಿದೆ. ಆರು ಮಂದಿ ಆರೋಪಿಗಳ 'ಬುರುಡೆ ಗ್ಯಾಂಗ್' ಹಣದ ಆಮಿಷ ನೀಡಿ ಸುಳ್ಳು ಹೇಳಿಸಿರುವುದು ದೃಢ. ಈ ಕೇಸಿನಲ್ಲಿ ಒಬ್ಬರಿಗೆ ಕ್ಲೀನ್‌ಚಿಟ್ ನೀಡಲಾಗಿದೆ.

ದಕ್ಷಿಣ ಕನ್ನಡ (ಡಿ.10): ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 'ನೂರಾರು ಮಹಿಳೆಯರ ಶವಗಳನ್ನು ಹೂಳಲಾಗಿದೆ' ಎಂಬ ಆಘಾತಕಾರಿ ಸುಳ್ಳು ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಮಹತ್ವದ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯು ಧರ್ಮಸ್ಥಳದ ಮಾನಹಾನಿಗೆ ಯತ್ನಿಸಿದ 'ಬುರುಡೆ ಗ್ಯಾಂಗ್'ನ ಷಡ್ಯಂತ್ರವನ್ನು ಬಯಲು ಮಾಡಿದೆ. ಇದರಲ್ಲಿ ಒಬ್ಬರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

ಕ್ಲೀನ್‌ಚಿಟ್ ನೀಡಿದ SIT:

SIT ಸಲ್ಲಿಸಿರುವ ಪ್ರಾಥಮಿಕ ವರದಿಯು, ಧರ್ಮಸ್ಥಳದ ವ್ಯವಸ್ಥಾಪಕರಿಗೆ ಮತ್ತು ಮೇಲ್ವಿಚಾರಕರಿಗೆ ಕ್ಲೀನ್‌ಚಿಟ್ ನೀಡಿದ್ದು, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಶ್ರೀಕ್ಷೇತ್ರದ ಕುರಿತು ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದೆ. ಇನ್ನು ಈ ವರದಿಯ ಪ್ರಕಾರ, ಇದು ಆರು ಮಂದಿ ಆರೋಪಿಗಳು ನಡೆಸಿರುವ ಸಂಪೂರ್ಣ ಅಪರಾಧ ಒಳಸಂಚು ಎಂಬುದು ಧೃಡಪಟ್ಟಿದೆ.

ಆರೋಪಿಗಳಾದ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅವರು ಅಪರಾಧ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು SIT ತನಿಖೆಯಲ್ಲಿ ದೃಢಪಟ್ಟಿದೆ. ಈ ಗ್ಯಾಂಗ್, A1 ಆರೋಪಿ ಚಿನ್ನಯ್ಯ ಅಲಿಯಾಸ್ ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ, ಆತನಿಂದ 'ಅಪರಿಚಿತ ಶವಗಳನ್ನು ಹೂತಿದ್ದೇನೆ' ಎಂದು ಸುಳ್ಳು ಹೇಳಿಸಿ, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವುದು ಬಯಲಾಗಿದೆ. ಹಣದ ಆಸೆಗೆ ಬಲಿಯಾದ ಚಿನ್ನಯ್ಯ ಬುರುಡೆ ಕಥೆ ಕಟ್ಟಿ, ಈ ಷಡ್ಯಂತ್ರಕ್ಕೆ ಸಹಕರಿಸಿದ್ದಾನೆ.

ಬಲವಾದ ಸಾಕ್ಷ್ಯಾಧಾರಗಳು:

SIT ಯು ಪ್ರಕರಣದ ಕುರಿತು ಚಿನ್ನಯ್ಯನ ವಿಚಾರಣೆ, ಸಾಕ್ಷಿದಾರ ಪ್ರದೀಪ್ ಹೇಳಿಕೆ, FSL ವರದಿ, ಬ್ಯಾಂಕ್ ಖಾತೆಗಳ ಪರಿಶೀಲನೆ, ಎಲೆಕ್ಟ್ರಾನಿಕ್ ಪುರಾವೆಗಳು ಮತ್ತು ವೈದ್ಯಕೀಯ ವರದಿಗಳು ಸೇರಿದಂತೆ ಸಮಗ್ರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದೆ. ಈ ಸಾಕ್ಷ್ಯಾಧಾರಗಳ ಆಧಾರದ ಮೇಲೆ 'ಬುರುಡೆ ಗ್ಯಾಂಗ್' ವಿರುದ್ಧ ದೋಷಾರೋಪ ಮಾಡಲಾಗಿದೆ.

ತನಿಖೆ ಬಾಕಿ, ಅಂತಿಮ ವರದಿ ಸಲ್ಲಿಕೆ ವಿಳಂಬ:

  • ಕೋರ್ಟ್‌ಗೆ ಸಲ್ಲಿಸಿರುವುದು ಕೇವಲ ಪ್ರಾಥಮಿಕ ವರದಿಯಾಗಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. SIT, ನ್ಯಾಯಾಲಯಕ್ಕೆ ಇನ್ನಷ್ಟು ಸಮಯ ನೀಡುವಂತೆ ಕೋರಿದೆ.
  • ತನಿಖೆಗೆ ಉಳಿದ ಆರೋಪಿಗಳು ಸಹಕರಿಸುತ್ತಿಲ್ಲ ಎಂದು SIT ಮನವಿ ಮಾಡಿದೆ.
  • ಕೆಲವು ಪ್ರಮುಖ ತಾಂತ್ರಿಕ ಸಾಕ್ಷಿಗಳ ವರದಿಗಳು ಇನ್ನೂ ಬರಬೇಕಿದೆ.
  • ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅಂತಿಮ ಮತ್ತು ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ವಿಶೇಷ ತನಿಖಾ ತಂಡ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟಿದೆ.
  • ಒಟ್ಟಾರೆಯಾಗಿ, ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪದ ಹಿಂದಿನ ದುರುದ್ದೇಶಪೂರಿತ ಷಡ್ಯಂತ್ರವನ್ನು SITಯ ಪ್ರಾಥಮಿಕ ತನಿಖಾ ವರದಿಯು ನಿರ್ಣಾಯಕವಾಗಿ ಹೊರಗೆಡಹಿದೆ.

ಧರ್ಮಸ್ಥಳ ಮೇಲ್ವಿಚಾರಕರಿಗೆ ಕ್ಲೀನ್‌ಚಿಟ್ ಏಕೆ:

ಇನ್ನು ಧರ್ಮಸ್ಥಳದ ಮೇಲ್ವಿಚಾರಕರ ಕುಮ್ಮಕ್ಕಿನ ಮೇರೆಗೆ ಹಾಗೂ ಅವರ ಕುಟುಂಬ ಸದಸ್ಯರು ನೂರಾರು ಮಹಿಳೆಯರನ್ನು, ಮಕ್ಕಳನ್ನು ಅತ್ಯಾ*ಚಾರ, ದೌರ್ಜನ್ಯ ಹಾಗೂ ಇತರೆ ಕಾರಣಗಳಿಗೆ ಕೊಲೆ ಮಾಡಿ ನೇತ್ರಾವತಿ ನದಿ ದಂಡೆ ಸೇರಿದಂತೆ ವಿವಿಧಡೆ ಹೂಳಲಾಗಿದೆ ಎಂದು ಮೇಲ್ವಿಚಾರಕರ ವಿರುದ್ಧ ಆರೋಪ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ, ಶವ ಹೂತಿದ್ದೇನೆ ಎಂದು ಬಂದಿದ್ದ ವ್ಯಕ್ತಿ ತೋರಿಸದ ಸ್ಥಳದಲ್ಲಿ ಶೋಧನೆ ಮಾಡಿದರೂ ಯಾವುದೇ ಕಳೇಬರ ಸಿಕ್ಕಿಲ್ಲ. ನಂತರ ಈ ಪ್ರಕರಣವೇ ಸುಳ್ಳು ಎಂಬ ಮಾಹಿತಿ ಬಯಲಾಗಿದ್ದು, ಸುಳ್ಳು ಆರೋಪ ಮತ್ತು ಸುಳ್ಳು ಸಾಕ್ಷಿಗಳನ್ನು ಹುಟ್ಟುಹಾಕಲು ಯತ್ನಿಸಿದವರೇ ಇದೀಗ ಆರೋಪಿಗಳಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಧರ್ಮಸ್ಥಳದ ಮೇಲ್ವಿಚಾರಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌
ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌