ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ಪದ್ಮಲತಾ, ಅಕ್ಕ ಇಂದ್ರಾವತಿ SIT ಮುಂದೆ ಬಿಚ್ಚಿಟ್ಟರು ಸ್ಪೋಟಕ ಸತ್ಯ!

Published : Aug 11, 2025, 12:22 PM IST
Dharmasthala Padmalatha Case Indravathi

ಸಾರಾಂಶ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣವನ್ನು ಸಮಾಧಿ ಅಗೆದು ಶೋಧ ಕಾರ್ಯ ನಡೆಸುತ್ತಿರುವ ಎಸ್‌ಐಟಿ ತಂಡದ ಮುಂದೆ 39 ವರ್ಷಗಳ ಹಿಂದೆ ಕಾಲೇಜಿಗೆ ಹೋಗಿ ನಾಪತ್ತೆ ಆಗಿದ್ದ ಪದ್ಮಲತಾ ಕೇಸ್ ಬಂದಿದೆ. ಪದ್ಮಾವತಿಯ ಅಕ್ಕ ಇಂದ್ರಾವತಿ ಅವರು ಸಿಐಡಿ ತನಿಖೆ ಸ್ಪೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.

ದಕ್ಷಿಣ ಕನ್ನಡ (ಆ.11): ಧರ್ಮಸ್ಥಳ ಸಮೀಪದಲ್ಲಿ ನಡೆದ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, 39 ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ಬೋಳಿಯಾರ್ ನಿವಾಸಿ ಪದ್ಮಲತಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಮತ್ತು ಸಿಪಿಐಎಂ ಮುಖಂಡ ಬಿ.ಎಂ. ಭಟ್ ಅವರು, ಪ್ರಕರಣದ ಮರು ತನಿಖೆಗಾಗಿ SIT (ವಿಶೇಷ ತನಿಖಾ ದಳ)ಗೆ ದೂರು ಸಲ್ಲಿಸಿದ್ದು, ಕೆಲವೊಂದು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ ಇಂದ್ರಾವತಿ:

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಕೊಲೆಯಾದ ಯುವತಿ ಪದ್ಮಲತಾ ಸಹೋದರಿ ಇಂದ್ರಾವತಿ ಅವರು, ಸಿಐಡಿ ತನಿಖೆಯಲ್ಲಿ ಆರೋಪಿಗಳ ಪತ್ತೆ ಆಗಲಿಲ್ಲ ಎಂದು ಕೇಸ್ ಮುಗಿಸಿದರು. ಎಸ್ ಐ ಟಿ ತನಿಖೆಯಲ್ಲಿ ಆರೋಪಿಗಳ ಪತ್ತೆ ಆಗಬಹುದೆಂದು ದೂರು ಕೊಡಲು ಬಂದಿದ್ದೇನೆ. ಪದ್ಮಲತಾ ಸಾವಿಗೆ ನ್ಯಾಯ ಸಿಗಬೇಕೆಂದು ನಾವು ಇಲ್ಲಿಗೆ ಬಂದಿದ್ದೇವೆ. ನನ್ನ ತಂಗಿಯ ಕೊಲೆ ಆಗಿ 39 ವರ್ಷ ಆಗಿದೆ. ಇಲ್ಲಿಯವರೆಗೆ ನಮಗೆ ನ್ಯಾಯ ಸಿಕ್ಕಿಲ್ಲ. ಈ ಹಿಂದೆ ಸಿಐಡಿ ಅಧಿಕಾರಿಗಳು 'ಪತ್ತೆಹಚ್ಚಲಾಗದ ಕೇಸ್' ಎಂದು ಹಿಂಬರಹ ಕೊಟ್ಟಿದ್ದರು. ಆದರೆ, ನಮಗೆ ಈಗ ನ್ಯಾಯ ಬೇಕು ಅಂತ ಎಸ್ ಐಟಿ ಅಧಿಕಾರಿಗಳಿಗೆ ದೂರು ಕೊಟ್ಟಿದ್ದೇವೆ. ನಮಗೆ ಕೊಲೆಗಾರ ಯಾರು ಅಂತ ಗೊತ್ತಾಗಬೇಕು? ಆ ಸಂಬಂಧಪಟ್ಟ ಕೊಲೆಗಾರನಿಗೆ ಶಿಕ್ಷೆ ಆಗಬೇಕು ಎಂದು ದೂರು ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ಬಿ.ಎಂ. ಭಟ್ ಹೇಳಿಕೆ:

ಇದೇ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಮುಖಂಡ ಬಿ.ಎಂ. ಭಟ್, 'ಯಾವುದೇ ಅಪರಾಧ ನಡೆದಾಗ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚುತ್ತಾರೆ. ಆದರೆ ಪದ್ಮಲತಾ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಯಲಿಲ್ಲ. ಅದಕ್ಕಾಗಿಯೇ ಪ್ರಕರಣವನ್ನು 'ಪತ್ತೆಯಾಗದ ಪ್ರಕರಣ' ಎಂದು ಮುಕ್ತಾಯಗೊಳಿಸಲಾಯಿತು. ಈಗ SIT ತನಿಖೆಯಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಪದ್ಮಲತಾ ನಮ್ಮ ಪಕ್ಷದ ಮುಖಂಡರ ಮಗಳು. ಅವರ ತಂದೆಯವರು ದೂರದೃಷ್ಟಿಯಿಂದಲೋ ಏನೋ, ಶವವನ್ನು ಸುಡುವ ಬದಲು ಹೂತುಹಾಕಿದ್ದಾರೆ. ಆ ಜಾಗ ಕುಟುಂಬಕ್ಕೆ ಗೊತ್ತಿದೆ. ಆ ಶವದ ಅಸ್ಥಿಪಂಜರವನ್ನು ತೆಗೆದು ಮರು ತನಿಖೆ ಮಾಡಬೇಕು' ಎಂದು ಒತ್ತಾಯಿಸಿದರು.

ರಾಜಕೀಯ ಆರೋಪಗಳಿಗೆ ಭಟ್ ಪ್ರತಿಕ್ರಿಯೆ:

'ಕೆಲವರು ರಾಜಕೀಯಕ್ಕೋಸ್ಕರ ಬಿಜೆಪಿ ಮೇಲೆ ಏನೆಲ್ಲಾ ಆರೋಪ ಮಾಡುತ್ತಿದ್ದಾರೆ. ಆದರೆ ನಮ್ಮ ಉದ್ದೇಶ ಧರ್ಮಸ್ಥಳಕ್ಕೆ ಅಂಟಿರುವ ಕಳಂಕವನ್ನು ದೂರ ಮಾಡುವುದು. ಅದಕ್ಕಾಗಿಯೇ ನಾವು ಈ ಪ್ರಕರಣದ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ಹಿಂದಿನ ಪ್ರಕರಣಗಳಿಗೆ ನ್ಯಾಯ ಸಿಕ್ಕಿದಲ್ಲಿ, ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯವಾಗಬಹುದು' ಎಂದು ಭಟ್ ಸ್ಪಷ್ಟಪಡಿಸಿದರು.

ಈ ಬೆಳವಣಿಗೆಯಿಂದಾಗಿ, ಧರ್ಮಸ್ಥಳದ ಹೊಸ ಪ್ರಕರಣವು ಹಳೆಯ ರಹಸ್ಯ ಪ್ರಕರಣಕ್ಕೂ ನ್ಯಾಯ ದೊರಕಿಸಿಕೊಡುವ ಸಾಧ್ಯತೆಗಳು ಹೆಚ್ಚಿವೆ. ಪದ್ಮಲತಾ ಅವರ ಕುಟುಂಬದ 39 ವರ್ಷಗಳ ಹೋರಾಟಕ್ಕೆ SIT ತನಿಖೆ ಒಂದು ಹೊಸ ದಿಕ್ಕನ್ನು ನೀಡುತ್ತದೆಯೇ ಎಂದು ಎಲ್ಲರೂ ಕಾತುರದಿಂದ ನಿರೀಕ್ಷಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!