ಮಂಗಳೂರು ಕಮಿಷನರ್ ಫೋಟೋ ಬಳಸಿ ಹಣಕ್ಕೆ ಡಿಮ್ಯಾಂಡ್: ನಕಲಿ ಖಾತೆ ವಿರುದ್ದ ಎಚ್ಚರ!

Published : Oct 27, 2023, 04:01 PM IST
ಮಂಗಳೂರು ಕಮಿಷನರ್ ಫೋಟೋ ಬಳಸಿ ಹಣಕ್ಕೆ ಡಿಮ್ಯಾಂಡ್: ನಕಲಿ ಖಾತೆ ವಿರುದ್ದ ಎಚ್ಚರ!

ಸಾರಾಂಶ

ಫೇಸ್ ಬುಕ್, ಇನ್ಸ್ಟಾಗ್ರಾಂಗಳಲ್ಲಿ‌ ನಕಲಿ ಖಾತೆಗಳನ್ನು ತೆರೆದು ಹಣಕ್ಕೆ ಬೇಡಿಕೆಯಿಡೋ ಜಾಲ ಸದ್ಯ ಮಂಗಳೂರು ಪೊಲೀಸ್ ಆಯುಕ್ತರ ಹೆಸರಲ್ಲೂ ಸುಲಿಗೆಗೆ ಇಳಿದಿದೆ. ಆದರೆ ಈ ಬಾರಿ ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣ ಕೀಳಲು ಯತ್ನಿಸಿದ್ದು, ನಕಲಿ ಖಾತೆಯ ಬಗ್ಗೆ ಎಚ್ಚರವಾಗಿರಿ ಅಂತ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಅ.27): ಫೇಸ್ ಬುಕ್, ಇನ್ಸ್ಟಾಗ್ರಾಂಗಳಲ್ಲಿ‌ ನಕಲಿ ಖಾತೆಗಳನ್ನು ತೆರೆದು ಹಣಕ್ಕೆ ಬೇಡಿಕೆಯಿಡೋ ಜಾಲ ಸದ್ಯ ಮಂಗಳೂರು ಪೊಲೀಸ್ ಆಯುಕ್ತರ ಹೆಸರಲ್ಲೂ ಸುಲಿಗೆಗೆ ಇಳಿದಿದೆ. ಆದರೆ ಈ ಬಾರಿ ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣ ಕೀಳಲು ಯತ್ನಿಸಿದ್ದು, ನಕಲಿ ಖಾತೆಯ ಬಗ್ಗೆ ಎಚ್ಚರವಾಗಿರಿ ಅಂತ ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದು, ವಾಟ್ಸಪ್ ನಲ್ಲಿ ಕಮಿಷನರ್ ಫೋಟೋ ಬಳಸಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಫೋಟೋ ದುರ್ಬಳಕೆ ಮಾಡಲಾಗಿದ್ದು, ಅನುಪಮ್ ಅಗರ್ವಾಲ್ ಹೆಸರಲ್ಲಿ ಹಲವರಿಗೆ ವಾಟ್ಸಪ್ ಸಂದೇಶ ರವಾನೆಯಾಗಿದೆ. ಆಸ್ಪತ್ರೆಯಲ್ಲಿರೋದಾಗಿ ಹೇಳಿ ಹಣ ಕಳುಹಿಸಿಕೊಡುವಂತೆ ಸಂದೇಶ ಕಳುಹಿಸಲಾಗಿದ್ದು, ಯುಪಿಐ ಕೆಲಸ ಮಾಡ್ತಿಲ್ಲ, ಸ್ವಲ್ಪ ಹಣ ಇದ್ದರೆ ಕೊಡಿ, ಒಂದು ಗಂಟೆಯಲ್ಲಿ ವಾಪಾಸ್ ಕೊಡ್ತೀನಿ ಅಂತ ಕಮಿಷನರ್ ಹೆಸರಿನಲ್ಲಿ ಮೆಸೇಜ್ ಹಾಕಲಾಗಿದೆ. 

ಭಾರತದಲ್ಲಿ ಫೇಸ್‌​ಬುಕ್‌ ಬಂದ್‌ ಮಾಡಿ​ಬಿ​ಡ್ತೇ​ವೆ: ಹೈಕೋರ್ಟ್‌ ಎಚ್ಚ​ರಿ​ಕೆ

ಮಂಗಳೂರಿನ ಹಲವರಿಗೆ ಕಮಿಷನರ್ ಹೆಸರಲ್ಲಿ ಸಂದೇಶ ರವಾನೆ ಯಾಗಿದ್ದು, ಮಂಗಳೂರು ಕಮಿಷನರ್ ಅಧಿಕೃತ ವಾಟ್ಸಪ್ ಖಾತೆಯ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಲಾಗಿದೆ. 8319051976 ನಂಬರ್ ನಲ್ಲಿ ಕಮಿಷನರ್ ಫೋಟೋ ಬಳಸಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿದ್ದು, ಈ ನಕಲಿ ಖಾತೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ. ಯಾರೂ ಹಣ ನೀಡದಂತೆ ಸಾರ್ವಜನಿಕರಿಗೆ ಕಮಿಷನರ್ ಮನವಿ ಮಾಡಿದ್ದು, ಈ ಬಗ್ಗೆ ಕ್ರಮಕ್ಕೆ ಕಮಿಷನರ್ ಅನುಪಮ್ ಅಗರ್ವಾಲ್ ಸೈಬರ್ ಕ್ರೈಂಗೆ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯನ್ನೂ ಬಿಡ್ತಿಲ್ಲ ಹ್ಯಾಕರ್ಸ್; ವಿಜಯನಗರ ಎಸ್ಪಿ ಹೆಸರಲ್ಲಿ ನಕಲಿ ಖಾತೆ , ಹಣಕ್ಕೆ ಬೇಡಿಕೆ!

ಹೀಗಿರುತ್ತೆ ನಕಲಿ ಸಂದೇಶ..

"Hi sir Good Morning I'm COMMISSIONER

ANUPAM AGRAWAL IPS

Today is the first time I have some work for you, don't refuse. If you ever need anything in your life, let me know. Sir I'm in hospital And my upi is not working i need some money can you transfer i will return within 1 hour.."

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ