
ಬೆಂಗಳೂರು (ಜು.22): ರಾಜ್ಯದಲ್ಲಿ ಜಪಾನ್ ದೇಶದ ಬಂಡವಾಳ ಹೂಡಿಕೆಯೂ ಸೇರಿ ವಿವಿಧ ವಿಷಯಗಳ ಬಗ್ಗೆ ಬೆಂಗಳೂರಿನ ಜಪಾನ್ ಕಾನ್ಸುಲೇಟ್ ಜನರಲ್ ಅಕಿಕೋ ಸುಗಿಟಾ ಅವರೊಂದಿಗೆ ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದು ಮಾತುಕತೆ ನಡೆಸಿದರು.
ಶೀಘ್ರದಲ್ಲೇ ಬೆಂಗಳೂರು ಟೆಕ್ ಸಮಿಟ್ ಕೂಡ ನಡೆಯುತ್ತಿದ್ದು, ಜಪಾನ್ ಆವಿಷ್ಕಾರ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಟೆಕ್ ಸಮಿಟ್‌ನಲ್ಲಿ ಆ ದೇಶದ ಪಾಲುದಾರಿಕೆ ಬಗ್ಗೆಯೂ ಡಿಸಿಎಂ ಅವರು ಚರ್ಚೆ ನಡೆಸಿದರು.
ಕೇಂದ್ರ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ರಾಜ್ಯ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ : ಡಿಸಿಎಂ
ಕೋವಿಡ್‌ಗೂ ಮುನ್ನ, ನಂತರವೂ ಕರ್ನಾಟಕ ಮತ್ತು ಜಪಾನ್ ನಡುವೆ ಕೈಗಾರಿಕೆ-ವಾಣಿಜ್ಯ ಸಂಬಂಧಗಳು ಬಲವಾಗಿದೆ. ರಾಜ್ಯದಲ್ಲಿ ಟೊಯೋಟಾ, ಹೋಂಡಾ, ಫಿಜಿತ್ಸೂ, ಕೊಮತ್ಸೂ, ಹಿತಾಚಿ ಸೇರಿದಂತೆ 529 ಜಪಾನೀ ಕಂಪನಿಗಳು ನೆಲೆಯೂರಿವೆ ಎಂದು ಡಿಸಿಎಂ ಅವರು ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಹೂಡಿಕೆಯನ್ನು ಜಪಾನ್‌ನಿಂದ ರಾಜ್ಯವೂ ನಿರೀಕ್ಷೆ ಮಾಡುತ್ತಿದೆ. ಈ ಬಗ್ಗೆಯೂ ಜಪಾನ್ ಕಾನ್ಸುಲೇಟ್ ಜನರಲ್ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ