
ದಾವಣಗೆರೆ (ಅ.1): ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಾಳೆ ವಿಜಯದಶಮಿ ಶೋಭಾಯಾತ್ರೆಗೆ ವಿಶ್ವ ಹಿಂದು ಪರಿಷತ್ ಮತ್ತು ಸಾರ್ವಜನಿಕ ವಿಜಯ ದಶಮಿ ಸಮಿತಿ ಬೃಹತ್ ಆಯೋಜನೆ ಮಾಡಿದೆ. ಸಾವಿರಾರು ಹಿಂದೂ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಶೋಭಾಯಾತ್ರೆಯ ಮಾರ್ಗ ಕೇಸರಿಮಯವಾಗಿ ಕಂಗೊಳಿಸಲಿದೆ.
ಮಟ್ಟಿಕಲ್‌ನಲ್ಲಿ ಆಂಜನೇಯ, ಶಿವಾಜಿ ಮೂರ್ತಿ, ವೆಂಕಟೇಶ್ವರ ಸರ್ಕಲ್‌ನಲ್ಲಿ ಶ್ರೀ ಕೃಷ್ಣ, ಹಾಸಬಾವಿ ಸರ್ಕಲ್‌ನಲ್ಲಿ ಬೃಹತ್ ಆಂಜನೇಯ ಟ್ಯಾಬ್ಲೋಗಳು ಗಮನ ಸೆಳೆಯುತ್ತಿವೆ. ಶೋಭಾಯಾತ್ರೆಯ ಮಾರ್ಗದಲ್ಲಿ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ನಡೆದಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದನ್ನೂ ಓದಿ: Attack on Hindu Family: ಹಿಂದೂಗಳನ್ನ ಕೆಣಕಿ ಆಚರಣೆ ನಿಲ್ಲಿಸುವ ಹುನ್ನಾರ? ಹಿಂದೂ ಮುಖಂಡ ಸ್ಫೋಟಕ ಹೇಳಿಕೆ
ಇತ್ತೀಚಿನ ಫ್ಲೆಕ್ಸ್ ಗಲಾಟೆ ಹಿನ್ನೆಲೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕದಂತೆ ಸೂಚನೆ ನೀಡಲಾಗಿದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಹಂಚಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ದಾವಣಗೆರೆ ನಗರ ಅದ್ಧೂರಿ ಶೋಭಾಯಾತ್ರೆಗೆ ಸಜ್ಜಾಗಿದ್ದು, ಶಾಂತಿಯುತವಾಗಿ ಕಾರ್ಯಕ್ರಮ ನಡೆಯಲು ಎಲ್ಲ ತಯಾರಿ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ