ಬಳ್ಳಾರಿ ಉಸ್ತುವಾರಿ ಸಚಿವರಾಗಿ ಜಮೀರ್ ಅಹಮದ್ ಖಾನ್ ಇರುವುದಕ್ಕೂ ಕೊಲೆ ಆರೋಪಿ ನಟ ದರ್ಶನ್ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು (ಆ.30): ಬಳ್ಳಾರಿ ಉಸ್ತುವಾರಿ ಸಚಿವರಾಗಿ ಜಮೀರ್ ಅಹಮದ್ ಖಾನ್ ಇರುವುದಕ್ಕೂ ಕೊಲೆ ಆರೋಪಿ ನಟ ದರ್ಶನ್ ಸ್ಥಳಾಂತರಕ್ಕೂ ಸಂಬಂಧವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ದರ್ಶನ್ ಅವರನ್ನು ಜಮೀರ್ ಇದ್ದಾರೆ ಎಂದು ಬಳ್ಳಾರಿಗೆ ಸ್ಥಳಾಂತರಿಸಿದ್ದಲ್ಲ. ಅದು ಸತ್ಯಕ್ಕೆ ದೂರವಾದ ಆರೋಪ. ಯಾರನ್ನು ಯಾವ ಜಿಲ್ಲೆಯ ಜೈಲಿಗೆ ಕಳುಹಿಸಿ ದರೂ ಉಸ್ತುವಾರಿ ಸಚಿವರು ಇದ್ದೇ ಇರುತ್ತಾರೆ. ಸಚಿವ ಜಮೀರ್ ಅಹಮದ್ ದರ್ಶನ್‌ಗೆ ಆಪ್ತರಾಗಿದ್ದರೇನಂತೆ, ಯಾರೇ ಇದ್ದರೂ ಕಾನೂನಿನ ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದರು. ಭದ್ರತೆ ದೃಷ್ಟಿಯಿಂದ ಬಳ್ಳಾರಿಗೆ ದರ್ಶನ್ ಕಳುಹಿಸಬೇಕೆಂದು ಕಾರಾಗೃಹ ಪ್ರಾಧಿಕಾರದವರು ನಿರ್ಧರಿಸಿದ್ದಾರೆಯೇ ಹೊರತು ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದರು.
ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ: ಜೈಲಲ್ಲಿ ದರ್ಶನ್‌ಗೆ ವಿಶೇಷ ಸೌಲಭ್ಯ ಪ್ರಕರಣ ಕುರಿತು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ರಾಜ್ಯ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಆದೇಶಿಸಿದ್ದಾರೆ. ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು. ಕೈದಿಗಳಿಗೆ ಸಿಗರೇಟ್, ಟೀ ಪೂರೈಸಿದವರು ಹಾಗೂ ಕುರ್ಚಿ ಹಾಕಿದವರು ಯಾರು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಬಂದೀಖಾನೆ ನಿಯಮಗಳನ್ನು ಉಲ್ಲಂಘಿಸಿರುವ ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದೇನೆ. ಈ ತಂಡ ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು. ಈ ಪ್ರಕರಣ ಸಂಬಂಧ ಮೊದಲು ಏಳು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಕಾರಾಗೃಹದ ಪರಿಶೀಲನೆ ವೇಳೆ ಕರ್ತವ್ಯ ವೈಫಲ್ಯ ಹಾಗೂ ನಿರ್ಲಕ್ಷ್ಯತನ ಕಂಡು ಬಂದ ಹಿನ್ನಲೆಯಲ್ಲಿ ಭದ್ರತೆ ಹೊಣೆಗಾರಿಕೆ ಹೊತ್ತಿರುವ ಮುಖ್ಯ ಅಧೀಕ್ಷಕ ಶೇಷಮೂರ್ತಿ ಹಾಗೂ ಅಧೀಕ್ಷಕ ಮಲ್ಲಿಕಾರ್ಜುನ್ ಸ್ವಾಮಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು. ಕೈದಿಗಳಿಗೆ ಸಿಗರೇಟ್, ಟೀ ಪೂರೈಸಿದವರು ಹಾಗೂ ಕುರ್ಚಿ ಹಾಕಿದವರು ಯಾರು ಎಂಬುದರ ಕುರಿತು ಸಹ ತನಿಖೆ ನಡೆಯಲಿದೆ.
ಎತ್ತಿನಹೊಳೆಯಿಂದ ನೀರೆತ್ತುವ ಕಾರ್‍ಯಕ್ಕೆ ಡಿ.ಕೆ.ಶಿವಕುಮಾರ್ ಪ್ರಾಯೋಗಿಕ ಚಾಲನೆ
ಪ್ರಾಥಮಿಕ ಹಂತದ ತನಿಖೆಯಲ್ಲಿ ಬಂದೀಖಾನೆ ನಿಯಮಗಳನ್ನು ಉಲ್ಲಂಘಿಸಿರುವ ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಈ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದೇನೆ. ಈ ತಂಡ ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು. ಜೈಲಿನೊಳಗೆ ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೆಚ್ಚಿನ ಸಿಸಿ ಕ್ಯಾಮೆರಾಗಳ ಅಗತ್ಯವಿದ್ದರೆ ಅಳವಡಿಸಲಾಗುವುದು. ಆದರೆ ಕ್ಯಾಮೆರಾಗಳ ನಿರ್ವಹಣೆ ಹಂತದಲ್ಲಿ ನಿರ್ಲಕ್ಷ್ಯತನವಹಿಸಲಾಗಿದೆ. ಜೈಲಿನ ಮೇಲೆ ಶನಿವಾರ ಸಿಸಿಬಿ ನಡೆಸಿದ್ದ ದಾಳಿ ಬಗ್ಗೆ ಕೂಡ ವರದಿ ಪಡೆಯಲಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದರು.