ರಾಜ್ಯದ 13 ಜಿಲ್ಲೆಗಳಲ್ಲಿ ಸೋಂಕಿಗಿಂತ ಚೇತರಿಕೆಯೇ ಹೆಚ್ಚು..!

By Kannadaprabha NewsFirst Published May 14, 2021, 8:01 AM IST
Highlights

* ಬೆಂಗಳೂರು ಸೇರಿ ಅರ್ಧರಾಜ್ಯದಲ್ಲಿ ಆಶಾದಾಯಕ ಬೆಳವಣಿಗೆ
* ರಾಜ್ಯದಲ್ಲಿ ಮತ್ತೆ 35000+ ಕೇಸ್‌, 344 ಸಾವು
* ಶೇ.1ಕ್ಕಿಂತ ಕೆಳಕ್ಕಿಳಿದ ಕೊರೋನಾ ಸಾವಿನ ಪ್ರಮಾಣ
 

ಬೆಂಗಳೂರು(ಮೇ.14): ರಾಜ್ಯದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುವವರ ಸಂಖ್ಯೆ ಹೆಚ್ಚಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಗುರುವಾರ ಬೆಂಗಳೂರಿನಲ್ಲಿ 15,191 ಹೊಸ ಕೇಸ್‌ ದಾಖಲಾಗಿದ್ದರೆ, 16,084 ಮಂದಿ ಚೇತರಿಸಿದ್ದಾರೆ. ಅದೇ ರೀತಿ, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಧಾರವಾಡ, ದಾವಣಗೆರೆ, ಕೊಡಗು, ವಿಜಯಪುರ, ಕೊಪ್ಪಳ, ಬೀದರ್‌, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ ಜಿಲ್ಲೆಗಳಲ್ಲೂ ಸೋಂಕಿಗಿಂತ ಚೇತರಿಸಿದವರ ಸಂಖ್ಯೆಯೇ ಹೆಚ್ಚಾಗಿದೆ.

"

ಈ ಮಧ್ಯೆ, ರಾಜ್ಯದಲ್ಲಿ 13 ದಿನಗಳ ಬಳಿಕ ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಗುರುವಾರ 35,297 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 344 ಮಂದಿ ಮೃತರಾಗಿದ್ದಾರೆ. 34,057 ಮಂದಿ ಗುಣಮುಖರಾಗಿದ್ದಾರೆ.

ಲಸಿಕೆ ನೀಡಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ರಾಜ್ಯದಲ್ಲಿ ಕಳೆದ 8 ದಿನಗಳಿಂದ ಹೊಸ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಸತತ ಎರಡನೇ ದಿನ ಶೇ.30ಕ್ಕಿಂತ ಕಡಿಮೆಯ ಪಾಸಿಟಿವಿಟಿ ದರ ದಾಖಲಾಗಿದೆ. ಗುರುವಾರ ಶೇ.27.64 ಪಾಸಿಟಿವಿಟಿ ದರ ವರದಿಯಾಗಿದೆ. ಆದರೆ ಪರೀಕ್ಷೆ ಪ್ರಮಾಣ ಮಾತ್ರ ಕಡಿಮೆಯಾಗುತ್ತಿದೆ. 1.27 ಲಕ್ಷ ಪರೀಕ್ಷೆ ಮಾತ್ರ ನಡೆದಿದೆ. ಆರು ದಿನಗಳಿಂದ 1.50 ಲಕ್ಷ ಪರೀಕ್ಷೆಯ ಗಡಿಯನ್ನು ರಾಜ್ಯ ದಾಟಿಲ್ಲ.

ರಾಜ್ಯದ ಮರಣ ದರದಲ್ಲಿಯೂ ಇಳಿಕೆಯಾಗಿದೆ, ಮೇ 7 ರಿಂದ 12ರವರೆಗೆ ಶೇ. 1ಕ್ಕಿಂತ ಹೆಚ್ಚಿದ್ದ ಮರಣದ ದರ ಶೇ.0.97ಕ್ಕೆ ಇಳಿದಿದೆ. ಬೆಂಗಳೂರು ನಗರದಲ್ಲಿ 161 ಮಂದಿ ಮರಣವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.93 ಲಕ್ಷಕ್ಕೆ ತಲುಪಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 20.88 ಲಕ್ಷ ಮಂದಿ ಸೋಂಕು ಬಾಧಿತರಾಗಿದ್ದು, ಈ ಪೈಕಿ 14.74 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 20,712 ಮಂದಿ ಮರಣವನ್ನಪ್ಪಿದ್ದಾರೆ.

ಸಾವಿನ ವಿವರ:

ಮೈಸೂರು 15, ಬಳ್ಳಾರಿ ಮತ್ತು ಉತ್ತರ ಕನ್ನಡ ತಲಾ 14, ಬೆಂಗಳೂರು ಗ್ರಾಮಾಂತರ 13, ತುಮಕೂರು, ಮಂಡ್ಯ ತಲಾ 11, ಹಾಸನ ಮತ್ತು ಶಿವಮೊಗ್ಗ ತಲಾ 10, ಹಾವೇರಿ, ಧಾರವಾಡ ತಲಾ 9, ವಿಜಯಪುರ 8, ಚಿಕ್ಕಬಳ್ಳಾಪುರ, ವಿಜಯಪುರ ತಲಾ 6, ಯಾದಗಿರಿ, ಕೊಡಗು, ಗದಗ, ದಕ್ಷಿಣ ಕನ್ನಡ, ಚಾಮರಾಜನಗರ ತಲಾ 5, ಬೀದರ್‌, ಕೊಪ್ಪಳ, ರಾಯಚೂರು, ರಾಮನಗರ ತಲಾ 4, ಕೋಲಾರ 3, ಕಲಬುರಗಿ, ಚಿಕ್ಕಮಗಳೂರು, ಚಿತ್ರದುರ್ಗ ತಲಾ ಒಬ್ಬರು ಮೃತರಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ಗುರುವಾರ 15,151 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದೆ. ಬಳ್ಳಾರಿ 1,865, ಬೆಂಗಳೂರು ಗ್ರಾಮಾಂತರ 1,079, ಮಂಡ್ಯ 1,153, ಮೈಸೂರು 1,260, ತುಮಕೂರು 1,798 ಪ್ರಕರಣ ವರದಿಯಾಗಿದೆ.

ನಿನ್ನೆ 68000 ಜನರಿಗೆ ಲಸಿಕೆ

ರಾಜ್ಯದಲ್ಲಿ ಗುರುವಾರ 68,658 ಮಂದಿ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಈ ಪೈಕಿ 34,855 ಮಂದಿ ಎರಡನೇ ಡೋಸ್‌, ಉಳಿದ 33,803 ಮಂದಿ ಮೊದಲ ಡೋಸ್‌ ಸ್ವೀಕರಿಸಿದ್ದಾರೆ. 18 ವರ್ಷದಿಂದ 44 ವರ್ಷದೊಳಗಿನ 24,135 ಮಂದಿ ಲಸಿಕೆ ಪಡೆದಿದ್ದಾರೆ.

ಜಿಲ್ಲೆ ಹೊಸ ಕೇಸ್‌ ಚೇತರಿಕೆ

ಬೆಂಗಳೂರು 15191 16084
ಮಂಡ್ಯ 1153 1400
ಹಾಸನ 792 1258
ದಕ್ಷಿಣ ಕನ್ನಡ 811 911
ಧಾರವಾಡ 737 857
ದಾವಣಗೆರೆ 494 753
ಕೊಡಗು 425 661
ವಿಜಯಪುರ 331 591
ಕೊಪ್ಪಳ 437 562
ಬೀದರ್‌ 257 497
ಚಿಕ್ಕಬಳ್ಳಾಪುರ 354 495
ರಾಯಚೂರು 170 464
ಹಾವೇರಿ 160 218

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!