ಶನಿವಾರ 2154 ಕೇಸ್, 17 ಸಾವು, 2198 ಮಂದಿ ಗುಣಮುಖ| ಒಂದೇ ದಿನ 1.15 ಲಕ್ಷ ಪರೀಕ್ಷೆ| ಪಾಸಿಟಿವಿಟಿ ದರ ಶೇ 1.85 ರಷ್ಟಿದೆ. ಮರಣ ದರ ಶೇ. 0.78 ದಾಖಲು| ಒಟ್ಟು 93.93 ಲಕ್ಷ ಪರೀಕ್ಷೆಯನ್ನು ಈವರೆಗೆ ನಡೆಸಲಾಗಿದೆ|
ಬೆಂಗಳೂರು(ನ.15): ರಾಜ್ಯದ ದೈನಂದಿನ ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಶನಿವಾರ ಬೆಂಗಳೂರು ನಗರದ ಪಾಲು ಅರ್ಧಕ್ಕಿಂತ ಹೆಚ್ಚಿದೆ. 2,154 ಮಂದಿಯಲ್ಲಿ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿ 17 ಮಂದಿ ಈ ಮಹಾ ಮಾರಿಗೆ ಬಲಿಯಾಗಿದ್ದಾರೆ. ಇದೇ ವೇಳೆ ಬೆಂಗಳೂರು ನಗರ ಜಿಲ್ಲೆಯಲ್ಲಿ 1,195 ಮಂದಿಯಲ್ಲಿ ಸೋಂಕು ಪತ್ತೆಯಾಗಿ, 9 ಮಂದಿ ಅಸುನೀಗಿದ್ದಾರೆ.
ಇದೇ ವೇಳೆ ರಾಜ್ಯಾದ್ಯಂತ 2,198 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 27,965ಕ್ಕೆ ಕುಸಿದಿದೆ. ಇವರಲ್ಲಿ 773 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 8.60 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇವರಲ್ಲಿ 8.20 ಲಕ್ಷ ಮಂದಿ ಸೋಂಕನ್ನು ಜಯಿಸಿದ್ದಾರೆ. ಒಟ್ಟು 11,508 ಮಂದಿ ಸೋಂಕಿಗೆ ಮಣಿದಿದ್ದಾರೆ. 19 ಮಂದಿ ಕೋವಿಡ್ ಸೋಂಕಿತರು ಅನ್ಯ ಕಾರಣದಿಂದ ಮರಣವನ್ನಪ್ಪಿದ್ದಾರೆ.
ಒಂದೇ ದಿನ 1.15 ಲಕ್ಷ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ದರ ಶೇ 1.85 ರಷ್ಟಿದೆ. ಮರಣ ದರ ಶೇ. 0.78 ದಾಖಲಾಗಿದೆ. ಒಟ್ಟು 93.93 ಲಕ್ಷ ಪರೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.
undefined
ಬೆಂಗಳೂರು: 14 ದಿನಗಳಲ್ಲಿ 123 ಮಂದಿ ಕೊರೋನಾಗೆ ಬಲಿ
23 ಜಿಲ್ಲೆಗಳಲ್ಲಿ ಒಂದೂ ಸಾವಿಲ್ಲ:
ರಾಜ್ಯದ 23 ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನಿಂದ ಶನಿವಾರ ಒಂದೂ ಮರಣವೂ ದಾಖಲಾಗಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ 9, ತುಮಕೂರು, ಬಳ್ಳಾರಿಯಲ್ಲಿ ತಲಾ 2, ದಕ್ಷಿಣ ಕನ್ನಡ, ಧಾರವಾಡ, ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 1,195 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಉಳಿದಂತೆ ಬಾಗಲಕೋಟೆ 8, ಬಳ್ಳಾರಿ 34, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 60, ಬೀದರ್ 3, ಚಾಮರಾಜ ನಗರ 14, ಚಿಕ್ಕಬಳ್ಳಾಪುರ 21, ಚಿಕ್ಕಮಗಳೂರು 17, ಚಿತ್ರದುರ್ಗ 24, ದಕ್ಷಿಣ ಕನ್ನಡ 40, ದಾವಣಗೆರೆ 29, ಧಾರವಾಡ 12, ಗದಗ 11, ಹಾಸನ 103, ಹಾವೇರಿ 20, ಕಲಬುರಗಿ 15, ಕೊಡಗು 20, ಕೋಲಾರ 39, ಕೊಪ್ಪಳ 13, ಮಂಡ್ಯ 46, ಮೈಸೂರು 137, ರಾಯಚೂರು 19, ರಾಮನಗರ 11, ಶಿವಮೊಗ್ಗ 38, ತುಮಕೂರು 61, ಉಡುಪಿ 27, ಉತ್ತರ ಕನ್ನಡ 42, ವಿಜಯಪುರ 33 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 11 ಹೊಸ ಪ್ರಕರಣಗಳು ಧೃಢಪಟ್ಟಿವೆ.