ದೇಶದ ಮುಂದೆ ಬೆತ್ತಲಾದ ಕಾಂಗ್ರೆಸ್‌ನ 2 ತಲೆ ರಾಜಕಾರಣ: ಮಾಜಿ ಸಿಎಂ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

Published : Feb 06, 2024, 06:55 PM IST
ದೇಶದ ಮುಂದೆ ಬೆತ್ತಲಾದ ಕಾಂಗ್ರೆಸ್‌ನ 2 ತಲೆ ರಾಜಕಾರಣ: ಮಾಜಿ ಸಿಎಂ ಕುಮಾರಸ್ವಾಮಿ ಹೀಗೆ ಹೇಳಿದ್ಯಾಕೆ?

ಸಾರಾಂಶ

ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ ಕಾಂಗ್ರೆಸ್‌ ಪಕ್ಷದ ಎರಡು ತಲೆ ರಾಜಕಾರಣ ಈಗ ದೇಶದ ಮುಂದೆ ಬೆತ್ತಲಾಗಿದೆ.

ಬೆಳಗಾವಿ  (ಫೆ.06): ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯವಾಗಿದೆ ಎಂದು ದಿಲ್ಲಿಗೆ ಯಾತ್ರೆ ಹೊರಟಿರುವ ಕಾಂಗ್ರೆಸ್‌ ಪಕ್ಷದ ಎರಡು ತಲೆ ರಾಜಕಾರಣ ಈಗ ದೇಶದ ಮುಂದೆ ಬೆತ್ತಲಾಗಿದೆ. ಕಾಂಗ್ರೆಸ್ಸಿನ ವರಸೆ ಹೇಗಿದೆ ಎಂದರೆ, ಕರ್ನಾಟಕಕ್ಕೆ ಒಂದು ನೀತಿ ಹಾಗೂ ಕೇರಳಕ್ಕೆ ಮತ್ತೊಂದು ನೀತಿ ಎಂಬಂತಾಗಿದೆ. ಇದರ ಉದ್ದೇಶ: ಲೋಕಸಭೆ ಚುನಾವಣೆ.. ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದಿ ವಿರುದ್ಧ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕೇರಳದ ಸಿಎಂ ಶ್ರೀ ಪಿಣರಾಯಿ ವಿಜಯನ್ ಅವರು, 'ನಮ್ಮ ರಾಜ್ಯಕ್ಕೆ ತೆರಿಗೆ ಪಾಲು, ಅನುದಾನದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಕೇಂದ್ರದ ವಿರುದ್ಧ ದನಿ ಎತ್ತೋಣ ಬನ್ನಿ, ಸಹಕಾರ ನೀಡಿ" ಎಂದು ಕರೆದರೆ, ಅದಕ್ಕೆ ಕೇರಳ ಕಾಂಗ್ರೆಸ್ಸಿಗರು ಕೊಟ್ಟ ಉತ್ತರ ಹೀಗಿತ್ತು; "ಜನರ ಹಣವನ್ನು ನೀವು ಅನಗತ್ಯ ವೆಚ್ಚಗಳಿಗೆ ಪೋಲು ಮಾಡುತ್ತಿದ್ದೀರಿ, ನಾವು ಬರಲ್ಲ' ಎಂದಿದ್ದಾರೆ! ವಿಜಯನ್ ಅವರು ಕರೆದಿದ್ದ ಸರ್ವಪಕ್ಷ ಸಭೆಗೂ ಅಸಹಕಾರ ತೋರಿರುವ ಕಾಂಗ್ರೆಸ್ಸಿಗರು, ಕೇಂದ್ರ ಸರಕಾರದ ವಿರುದ್ಧ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸುವಾಗಲೂ ಗೈರು ಹಾಜರಾಗಿದ್ದಾರೆ ಮತ್ತು ಅನೇಕ ಶಾಸಕರು ಕಲಾಪವನ್ನೇ ಬಹಿಷ್ಕರಿಸಿದ್ದಾರೆ. ಅಷ್ಟೇ ಅಲ್ಲ; ಫೆಬ್ರುವರಿ 8ನೇ ತಾರೀಖು ದಿಲ್ಲಿಯಲ್ಲಿ ವಿಜಯನ್ ಅವರು ಹಮ್ಮಿಕೊಂಡಿರುವ ಪ್ರತಿಭಟನೆಯನ್ನೂ ಕೇರಳ ಕಾಂಗ್ರೆಸ್ಸಿಗರು ಬಹಿಷ್ಕರಿಸಿದ್ದಾರೆ.

Big Breaking : ರಮೇಶ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ದಾಳಿ

ಕರ್ನಾಟಕದ ಕಾಂಗ್ರೆಸ್, ಕೇರಳಕ್ಕೆ ತದ್ವಿರುದ್ಧ ದಿಕ್ಕಿನಲ್ಲಿದೆ. ಒಂದೆಡೆ ಬಿಜೆಪಿ ಸಂಸದರು ಶೋ ಪೀಸುಗಳು, ಗಂಡಸ್ತನ ಇಲ್ಲದವರು ಎಂದು ಕಾಂಗ್ರೆಸ್ ನಾಯಕರು ನಾಲಿಗೆ ಜಾರಿ ಬಿಡುತ್ತಿದ್ದಾರೆ. ಈಗ ನೋಡಿದರೆ, 'ಪ್ರತಿಭಟನೆಗೆ ಬನ್ನಿ. ನಿಮ್ಮ ಸಹಕಾರವೂ ಇರಲಿ' ಎಂದು ಆ ಪಕ್ಷದ ಸಂಸದರನ್ನು ಅದೇ ನಾಲಿಗೆಯಿಂದಲೇ ಕರೆಯುತ್ತಿದ್ದಾರೆ. ಜೆಡಿಎಸ್‌ ಸಂಸದರಿಗೂ ಪತ್ರ ಬರೆದಿದ್ದಾರೆ. ಇದೆಂಥಾ ವೈರುಧ್ಯ? ಇದೆಂಥಾ ಚೋದ್ಯ ಕೇರಳದ ಎಲ್‌ಡಿಎಫ್‌ (Kerala LDF Govt) ಸರಕಾರ ಜನರ ತೆರಿಗೆ ಹಣ ಪೋಲು ಮಾಡುತ್ತಿದೆ ಎಂದಾದರೆ, ಕರ್ನಾಟಕದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಮಾಡುತ್ತಿರುವುದೇನು? ಯೋಜನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿರುವುದೇನು? ಕೇರಳದಲ್ಲಿ ಅಸಹಕಾರ! ಕರ್ನಾಟಕದಲ್ಲಿ ಸಹಕಾರ! ಇದೆಂಥಾ ನೀತಿ? ಎರಡು ತಲೆಗಳು ಮಾತ್ರವಲ್ಲ, ರಾವಣ ತಲೆಗಳ ಕಾಂಗ್ರೆಸ್‌ ಪಕ್ಷಕ್ಕೆ ಮೈಯ್ಯೆಲ್ಲಾ ರಾಜಕೀಯವೇ ತುಂಬಿದೆ. ಅದೂ ಸ್ವಾರ್ಥ ರಾಜಕೀಯ ಎಂದು ಕಿಡಿಕಾರಿದ್ದಾರೆ.

ಬಡ ಜನರಿಗೆ ಕೇಂದ್ರದ ಬಂಪರ್ ಕೊಡುಗೆ: ಭಾರತ್ ಬ್ರಾಂಡ್ ಅಕ್ಕಿ ಕೆಜಿಗೆ 29ರೂ. ತೊಗರಿಬೇಳೆ 60ರೂ.ಗೆ ಮಾರಾಟ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

‘ಋತುಚಕ್ರ ರಜೆ’ಗೆ ತಡೆ ನೀಡಿ ಹಿಂಪಡೆದ ಹೈಕೋರ್ಟ್‌
ಎಂಎಸ್ಪಿ ಅಡಿಯಲ್ಲಿ ತೊಗರಿ ಖರೀದಿ ಆರಂಭಿಸಿ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ