'ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ : ಎಫ್‌ಐಆರ್‌ ಹಾಕಿ'

By Kannadaprabha NewsFirst Published Mar 4, 2021, 8:52 AM IST
Highlights

ಬಿಜೆಪಿಯವರು ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ.  ಸಮರ್ಥನೆ ಮೂಲಕ ಮಾನ ಹರಾಜು ಹಾಕುತ್ತಿದ್ದಾರೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿ ಎಂದು ರಮೇಶ್ ಜಾರಕಿಹೊಳಿ ಪ್ರಕರಣ ಸಂಬಂಧ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

 ಬೆಂಗಳೂರು (ಮಾ.04): ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿರುವ ರಮೇಶ್‌ ಜಾರಕಿಹೊಳಿ ತನ್ನ ಪಕ್ಷಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಮಾನಹಾನಿ ಮಾಡಿದ್ದಾರೆ. ಅವರ ರಾಜೀನಾಮೆ ಪಡೆಯುವ ಜೊತೆಗೆ ಎಫ್‌ಐಆರ್‌ ದಾಖಲಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ. 

ದೇವನಹಳ್ಳಿಯಲ್ಲಿ ಬುಧವಾರ ನಡೆದ ‘ಜನ ಧ್ವನಿ’ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿನ್ನೆಯಿಂದ ಟೀವಿಯಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ನೋಡಲು ಹಾಗೂ ಅದರ ಬಗ್ಗೆ ಮಾತನಾಡಲೂ ಅಸಹ್ಯವಾಗುತ್ತದೆ. ಇಂತಹ ಮಾನಗೆಟ್ಟವರು ಅಧಿಕಾರದಲ್ಲಿ ಇರಬೇಕಾ? ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.

ಸಿಡಿದ ರಾಸಲೀಲೆ : ಈಗ ಕೈ ನಾಯಕನ ಹೊಗಳಿ ಸಿಎಂ BSY ಭ್ರಷ್ಟ ಎಂದ ಜಾರಕಿಹೊಳಿ? ..

ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ:

ಅನೈತಿಕ ರಾಜಕೀಯದ ಶಿಶುವಾಗಿರುವ ರಾಜ್ಯದ ಬಿಜೆಪಿ ಸರ್ಕಾರವು ರಮೇಶ್‌ ಜಾರಕಿಹೊಳಿಯ ಅನೈತಿಕ ಕೃತ್ಯವನ್ನು ಸಮರ್ಥಿಸುತ್ತಿದೆ. ಈ ಮೂಲಕ ತನ್ನ ಮಾನ, ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಳ್ಳುತ್ತಿದೆ. ಹಲವು ನಾಯಕರು ರಮೇಶ್‌ ಜಾರಕಿಹೊಳಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಬಿಜೆಪಿಯ ನೈತಿಕ ಭ್ರಷ್ಟನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ ಎಂದು ಟೀಕಿಸಿದರು.

 ‘ರಾಸಲೀಲೆಯಿಂದ ಪಕ್ಷಕ್ಕೆ ಮಾತ್ರವಲ್ಲ ಇಡೀ ರಾಜ್ಯದ ಮಾನಹಾನಿ’

click me!