
ಗುಳೇದಗುಡ್ಡ (ಸೆ.16): ಇಂದಿನ ದಿನಗಳಲ್ಲಿ ಯಾವ ಮಕ್ಕಳೂ ದಡ್ಡರಲ್ಲ. ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸಿದರೆ ಅವರು ಭವಿಷ್ಯತ್ತಿನ ಆಸ್ತಿಯಾಗಲು ಸಾಧ್ಯ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 7ನೇ ತರಗತಿವರೆಗೂ ನಾವು 5 ಜನ ಮಾತ್ರ ಇದ್ದೆವು. ಹೈಸ್ಕೂಲಿಗೆ ಬಂದಾಗ 25-30 ಜನ ಇದ್ದೆವು. ಹೀಗಾಗಿ ನಮಗೆ ವೈಯಕ್ತಿಕವಾಗಿ ಶಿಕ್ಷಕರ ಸಂಪರ್ಕ ಸಾಕಷ್ಟಿತ್ತು. ಶಿಕ್ಷಕರ ಕೆಲಸವನ್ನೂ ಮಾಡುತ್ತಿದ್ದೆವು. ಅವರಿಗೆ ನೀರು ತರುವುದು, ಊಟ ತರುವುದು ಸಹ ಮಾಡಿ, ಅವರ ಪ್ರೀತಿ ಗಳಿಸಿದ್ದೆವು. ಈಗ ಅವರೆಲ್ಲಿದ್ದಾರೆ ನೆನಪಿಲ್ಲ.
ಮೋದಿ, ಗೌಡ, ಸಿದ್ದು ವಿರುದ್ಧ ಚೀನಾ ಡಿಜಿಟಲ್ ಬೇಹುಗಾರಿಕೆ! ...
ರಾಜಪ್ಪ ಮೇಷ್ಟ್ರು ನನ್ನನ್ನು ನೇರವಾಗಿ 5ನೇ ಕ್ಲಾಸಿಗೆ ಸೇರಿಸಿದ್ರು. ಅವರು ನಮ್ಮೂರಿಗೆ ಬರದಿದ್ರೆ ನಾನು ಎಂಎಲ್‌ಎ, ಸಚಿವ, ಸಿಎಂ ಹೀಗೆಲ್ಲಾ ಆಗ್ತಾನೇ ಇರಲಿಲ್ಲ. ಅವರನ್ನು ನಾನು ಇಂದಿಗೂ ಸದಾ ಸ್ಮರಿಸುತ್ತೇನೆ. ಈಗಲೂ ಅಂತಹ ಶಿಕ್ಷಕರಿದ್ದಾರೆ ಎಂದರು.
ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶವಿರಲಿಲ್ಲ. ಆಗಿನ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕೆ ಅದರಲ್ಲಿಯೂ ಕೆಳವರ್ಗದ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ, ಪ್ರೋತ್ಸಾಹಿಸಿದರು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ