ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಲು ಸೆಲ್ಕೋ ಶೀತಲ ಘಟಕ

Kannadaprabha News   | Asianet News
Published : Aug 05, 2021, 08:20 AM IST
ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಲು ಸೆಲ್ಕೋ ಶೀತಲ ಘಟಕ

ಸಾರಾಂಶ

ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಲು ಸೆಲ್ಕೋ ಕಾರ್ಯೋನ್ಮುಖ ಸೆಲ್ಕೋ ಫೌಂಡೇಶನ್ ರಾಜ್ಯದ ಹಲವೆಡೆ ಶೀತಲ ಕೇಂದ್ರ ಘಟಕಗಳನ್ನು ಪ್ರಾರಂಭಿಸುತ್ತಿದೆ ಹೀಗೂ ಆದಾಯ ಗಳಿಸಬಹುದು ಎಂಬುದನ್ನು ಅನ್ನದಾತರಿಗೆ  ಮನನ ಮಾಡಿಕೊಡಲು ಸೆಲ್ಕೋ ಮುಂದಾಗಿದೆ

 ಬೆಂಗಳೂರು (ಆ.05): ರೈತರು ಬೆಳೆದ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರಕಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ನಗರದ ಸೆಲ್ಕೋ ಫೌಂಡೇಶನ್ ರಾಜ್ಯದ ಹಲವೆಡೆ ಶೀತಲ ಕೇಂದ್ರ ಘಟಕಗಳನ್ನು ಪ್ರಾರಂಭಿಸುತ್ತಿದೆ. ಹೀಗೂ ಆದಾಯ ಗಳಿಸಬಹುದು ಎಂಬುದನ್ನು ಅನ್ನದಾತರಿಗೆ  ಮನನ ಮಾಡಿಕೊಡಲು ಸೆಲ್ಕೋ ಮುಂದಾಗಿದೆ. 

ಹಣ್ಣು ತರಕಾರಿಗಳನ್ನು ಮಾರುಕಟ್ಟೆಗೆ ಸಮಯಕ್ಕೆ ಸರಿಯಾಗಿ ತಲುಪಿಸಲು ಅಸಾಧ್ಯವಾದಾಗ ಬೆಲೆ ಕಡಿಮೆಯಾದಾಗ ಶೇಖರಿಸಿಡಲು ಮೌಲ್ಯವರ್ಧಿತ ಉತ್ತನ್ನಗಳ ತಯಾರಿಕೆಗೆ ಇದರಿಂದ ಅನುಕೂವಾಗಲಿದೆ. ರೈತ  ಉತ್ಪಾದಕ ಸಂಘಗಳಿಗೆ ಶೀತಲಗೃಹ  ಘಟಕಗಳಿಗೆ  ಉಸ್ತುವಾರಿ ವಹಿಸಲಾಗುವುದು. ಇಂತಹ ಘಟಕಗಳ ಸ್ಥಾಪನೆಗೆ ಸರ್ಕಾರ ಸರ್ಕಾರೇತರ ಸಂಸ್ಥೆಗಳೂ ಮುಂದೆ ಬಂದರೆ ರೈತರ ಆದಾಯ ವೃದ್ಧಿಯಾಗಲಿದೆ. 

ಕೃಷಿ ಪಂಪ್‌ಸೆಟ್‌ಗೂ ಬರಲಿದೆ ಪ್ರಿಪೇಯ್ಡ್‌ ಮೀಟರ್‌

ಕೊರೋನಾ ಸಂಕಷ್ಟದಲ್ಲಿ ರೈತರು ತಾವು  ಬೆಳೆದ ಹೂವು ಹಣ್ಣು ತರಕಾರಿಯನ್ನು  ಮಾರಾಟ ಮಾಡಲಾಗದೇ ಸಂಕಷ್ಟ ಅನುಭವಿಸಿದ್ದನ್ನು ನೋಡಿ ಇದಕ್ಕೆ ಪರಿಹಾರ ರೂಪಿಸಬೇಕೆಂಬ ಸಂಕಲ್ಪದಿಂದ ಶೀತಲ ಗೃಹಗಳ ಸ್ಥಾಪನೆಗೆ ಸೆಲ್ಕೋ ಹೆಜ್ಜೆ ಇಟ್ಟಿದೆ. ಬೆಲೆ ಕಡಿಮೆ ಇದ್ದಾಗ ರೈತರು ತಾವು ಬೆಳೆದ ಬೆಳೆಗಳನ್ನು ಶೀತಲ ಗೃಹಗಳಲ್ಲಿಟ್ಟು ನಂತರ ಬೆಲೆ ಸಿಕ್ಕಾಗ ಮಾರಾಟ ಮಾಡಲು ಇದರಿಂದ ಅನುಕೂಲವಾಗಲಿದೆ. 

ಐದು ಶೀತಲ ಘಟಕ ಸ್ಥಾಪನೆ : ಸೆಲ್ಕೋ ಫೌಂಡೇಷನ್ಸ್ ರಾಜ್ಯದಲ್ಲಿ  ಒಟ್ಟು 18 ಶೀತಲಗೃಹ ಘಟಕಗಳ ಸ್ಥಾಪನೆಗೆ ಯೋಜನೆ ಹಾಕಿಕೊಂಡಿದ್ದು ಇದೇ ತಿಂಗಳಲ್ಲಿ 5 ಘಟಕಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ. 

ಮೊದಲಿಗೆ ಬಾಗಲಕೋಟೆ ಜಲ್ಲೆಯ ಘಟಕಕ್ಕೆ ಆ.5ರಂದು ಚಾಲನೆ ನೀಡಲಾಗುವುದು. ಬಳಿಕ ಹಂತಹಂತವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು, ಬೆಂಗಳೂರು ನಗರದ ಆನೇಕಲ್, ತುಮಕೂರಿನ ಶಿರಾ, ಬರಗೂರು ಮತ್ತು ಗುಬ್ಬಿಯ  ತ್ಯಾಗರ್ತೂರುಗಳಲ್ಲಿ ಘಟಕ ಆರಂಭಿಸಲಿದೆ. 

ಪ್ರತೀ ಘಟಕಕ್ಕೆ  13 ಲಕ್ಷ ರುಪಾಯಿ ವೆಚ್ಚವಾಗಲಿದ್ದು 5 ಮೆಟ್ರಿಕ್ ಟನ್ ಸಾಮರ್ಥ್ಯವಿರಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ